ಆದಿಕವಿ ಶ್ರೀ ವಾಲ್ಮೀಕಿ ಪುತಳಿ ಆನಾವರಣ

ಪಾವಗಡ :-

            ರಾಮಾಯಣದಲ್ಲಿ ಭಾರತ ರಾಮರಾಜ್ಯದ ಪರಿಕಲ್ಪನೆ ಉಲ್ಲೇಖವಾಗಿದ್ದ ಕಾರಣ ರಾಷ್ಟ್ರಪೀತ ಗಾಂಧಿಜಿ ರಾಮರಾಜ್ಯದ ಸಂಕಲ್ಪ ಅದರ್ಶವಾಗಲು ಸಾಧ್ಯವಾಯಿತ್ತು ಎಂದು ಶೀಡ್ಲಕೋಣೆ ಸಂಜಯ್ ಕುಮಾರ್ ಸ್ವಾಮಿಜಿ ತಿಳಿಸಿದರು.

            ಪಾವಗಡ ತಾಲ್ಲೂಕಿನ ದೋಮ್ಮತಮರಿ ಗ್ರಾಮದಲ್ಲಿ ಏರ್ಪಡಿಸಿದ ಶ್ರೀ ಆದಿಕವಿ ವಾಲ್ಮೀಕಿರವರ ಪುತಳಿ ಆನಾವರಣ ಮಾಡಿ ಮಾತನಾಡಿದ ಅವರು ದೇಶದಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ರಾಮರಾಜ್ಯದ ಸಂಕಲ್ಪವನ್ನು ಹೊಂದಲು ವಿಶ್ವಕವಿ ವಾಲ್ಮೀಕಿ ರಚನೆ ಮಾಡಿದ ರಾಮಾಯಣ ಈ ದೇಶದ ಆಧಾರ ಸ್ಥಂಭವಾಗಿದೆ ಎಂದಾ ಅವರು ಕರ್ನಾಟಕ ರಾಜ್ಯದ ಎರಡನೆ ಹಂಪೆಯಾಗಿ ಹೆಸರು ಪಡೆದಿರುವಾ ನಿಡಗಲ್ ಸಂಸ್ಥಾನದಲ್ಲಿ ನಾಯಕ ಸಮಾಜದ ರಾಜಾಮಹರಾಜರು ಕಲೆ ಮತ್ತು ಸಂಕೃತಿಗೆ ನೀಡಿದ ಕೋಡುಗೆಯನ್ನು ಅಲ್ಲಿನ ನೂರಾರು ದೇವಾಲುಗಳು ಸಾಕ್ಷಿಯಾಗಿವೆ ಎಂದಾ ಅವರು ಪುರಾತತ್ವ ಇಲಾಖೆ ನಮ್ಮ ಸಮಾಜದ ರಾಜಾರು ನಿರ್ಮಾಣ ಮಾಡಿದ ಕೋಟೆಗಳು ಗುಡಿಗೋಪುಗಳ ಸಂರಕ್ಷಣೆ ಮಾಡುವಾ ಅಗ್ಯವಿದೆ ಎಂದರು.

          ಮಾಜಿ ಶಾಸಕರಾದ ಕೆ.ಎಮ್.ತಿಮ್ಮರಾಯಪ್ಪ ಮಾತನಾಡಿ ನಾಯಕ ಸಮಾಜ ನಾಡಿನಲ್ಲಿ ರಾಜ್ಯಭಾರ ಮಾಡಿ ಕೋಟೆಕೋತ್ತಲುಗಳನ್ನು ನಿರ್ಮಿಸಿ ಆಪಾರವಾದ ಕೋಡುಗೆ ನೀಡಿದ್ದು , ಸಮುದಾಯದ ವೃದ್ದಗೆ ಮುಖ್ಯಮಂತ್ರಿಗಳ ಜೋತೆ ಮಾತನಾಡಿ ಮೀಸಲಾತಿಯ ಬಗ್ಗೆ ಕೂಡ ಚರ್ಚಿಸಲಾಗುವುದೆಂದು ತಿಳಿಸಿದರು.

           ಈ ಸಂದರ್ಭದಲ್ಲಿ ಆಂದ್ರಪ್ರದೇಶದ ವಾಲ್ಮೀಕಿ ಸೇವಾದಳ ಅದ್ಯಕ್ಷರಾದ ಅಂಬೀಕಾಲಕ್ಷ್ಮಿನಾರಾಯಣ್ಣ , ಜಿ.ಪಂ.ಸದಸ್ಯ ಗೌರಮ್ಮ ತಿಮ್ಮಯ್ಯ ,ಡಿಸಿಸಿ ಬ್ಯಾಂಕ್ ಸೀನಪ್ಪ , ನಾರಾಯಣಮೂರ್ತಿ ,ಶ್ರೀ ವಾಲ್ಮೀಕಿ ಜಾಗೃತಿ ವೇದಿಕೆಯ ಅದ್ಯಕ್ಷರಾದ ಲೋಕೇಶ್ ಪಾಳ್ಳೆಗಾರ್ , ಓಂಕಾರ್ ನಾಯಕ ,ಜಿ.ಪಂ.ಮಾಜಿ ಉಪಾದ್ಯಕ್ಷರಾದ ಆರ್.ಸಿ.ಅಂಜಿನಪ್ಪ , ಮುಖಂಡರಾದ ಉಗ್ರಪ್ಪ ,ನಾರಾಯಣಪ್ಪ ,ಪೆದ್ದ ಹನುಮಂತಪ್ಪ ,ಪಾಪನಾಯಕ ,ಲಕ್ಷ್ಮೀನರಸಪ್ಪ ,ಪಾಪಣ್ಣ ,ಮೂರ್ತಿ ಮುಂತಾದವರಿದ್ದರು.
  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ