ಶಿಗ್ಗಾವಿ :
ಶಿಗ್ಗಾವಿ ತಾಲೂಕಿನ ಬಂಕಾಪೂರ ಪುರಸಭೆ ಸದಸ್ಯರು ಹಾಗೂ ಬಂಕಾಪೂರ ಗೆಳೆಯರ ಬಳಗದ ಸದಸ್ಯರು ಇತ್ತೀಚೆಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಂಕಾಪೂರ ಕೊಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಮ್ ಎಚ್ ಮೋಮಿನ ಗುರುಗಳನ್ನು ಅವರ ಶಾಲೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಬಸವರಾಜ ನಾರಾಯಣಪೂರ, ಮಂಜುನಾಥ ಕೂಲಿ, ರಾಣೋಜಿ, ಸತೀಶ ಆಲದಕಟ್ಟಿ, ಕೃಷ್ಣಾ ಆಲದಕಟ್ಟಿ, ಸತೀಶ ವನಹಳ್ಳಿ, ಹೊನ್ನಪ್ಪ ಹೂಗಾರ, ವಿಶ್ವನಾಥ ಹರವಿ, ಗುಡ್ಡಪ್ಪ ಬಸಮ್ಮನವರ, ಮುಖ್ಯೋಪಾದ್ಯಾಯರಾದ ಸುರೇಶ ರಾಠೋಡ, ಮಂಜುನಾಥ ವಳಗೇರಿ, ಈಶ್ವರ ಬಡಿಗೇರಿಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ