ಎಸ್‍ಡಿಎಂಗೆ ದೇಹ ದಾನ

ಶಿಗ್ಗಾವಿ:

           ಪಟ್ಟಣದ ಹಳೇಪೇಟೆ ನಿವಾಸಿ ತಾರಾಬಾಯಿ ದೇವೇಂದ್ರಪ್ಪ ಲಕ್ಕುಂಡಿ(71) ಎಂಬುವರು ಶನಿವಾರ ನಿಧನರಾಗಿದ್ದು. ಅವರ ನಿಧನದ ನಂತರ ಅವರ ಪಾರ್ಥಿವ ಶರೀರವನ್ನು ಧಾರವಾಡ ಎಸ್‍ಡಿಎಂ ಕಾಲೇಜಿಗೆ ದಾನವಾಗಿ ನೀಡದರು.

           ಹುಬ್ಬಳ್ಳಿ ಕೆಎಸ್‍ಆರ್‍ಟಿಸಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪತಿ ದೇವೇಂದ್ರಪ್ಪ ಲಕ್ಕಂಡಿ ಕಳೆದ 20ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ ಮಕ್ಕಳಿಲ್ಲದ ತಾರಾಬಾಯಿ ದೇವೇಂದ್ರಪ್ಪ ಲಕ್ಕುಂಡಿ ಅವರು ಶಿಗ್ಗಾವಿ ಪಟ್ಟಣದಲ್ಲಿರುವ ಸಹೋದರ ವಸಂತ ಬಂಕಾಪುರ ಅವರ ಮನೆಯಲ್ಲಿ ವಾಸವಾಗಿದ್ದರು.
           ಮೃತ ತಾರಾಬಾಯಿ ಅವರಿಗೆ ಐವರು ಸಹೋದರರು, ಐವರು ಸಹೋದರಿಯರು. ಅದರಲ್ಲಿ ಸಹೋದರ ವಸಂತ ಬಂಕಾಪುರ ಕೆಇಬಿ ಇಲಾಖೆಯಲ್ಲಿ ಸಹಾಯಕ ಲೆಕ್ಕಪರಿಶೋಧಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಅವರು ಅವಿವಾಹಿತರಾಗಿ ಉಳಿಯುವ ಜೊತೆಗೆ ಮೃತ ನಂತರ ಧಾರವಾಡ ಧರ್ಮಸ್ಥಳ ಮೇಡಿಕಲ್ ಕಾಲೇಜಿಗೆ ದೇಹ ದಾನ ಮಾಡುವುದಾಗಿ ಲಿಖಿತವಾಗಿ ಹೇಳಿಕೆ ನೀಡಿ ಬಂದ ನಂತರ ಸಹೋದರನ ಪ್ರೇರಣೆಯಿಂದ ಮೃತ ತಾರಾಬಾಯಿ ಅವರು ಸಹ ದೇಹ ದಾನ ಮಾಡುವುದಾಗಿ ಬರೆದು ಕೊಟ್ಟಿರುವ ಹಿನ್ನಲೆಯಾಗಿ ಶನಿವಾರ ಅವರ ದೇಹವನ್ನು ಎಸ್‍ಡಿಎಂಗೆ ದಾನವಾಗಿ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

            ಮೃತರ ಸಹೋದರ ವಸಂತ ಬಂಕಾಪುರ ಮಾತನಾಡಿ, ಸಾಮಾನ್ಯ ಮನುಷ್ಯನಾಗಿ ಈ ಸಮಾಜದ ಸೇವೆ ಮಾಡಬೇಕು ಎಂದು ದೃಷ್ಠಿಯಿಂದ ದೇಹ ದಾನ ಮಾಡುವುದಾಗಿ ಕಳೆದ 20ವರ್ಷಗಳ ಹಿಂದೆ ಬರೆದುಕೊಟಿದ್ದೇನೆ. ಮೃತ ನಂತರ ಮಣ್ಣುಪಾಲಾಗುವ ಬದಲಾಗಿ ಮೇಡಿಕಲ್ ಕಾಲೇಜಿನಲ್ಲಿ ವ್ಯಾಸಂಗ್ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಇತರರಿಗೆ, ಕಣ್ಣು, ಕಿಡ್ನಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಮೃತ ನಂತರವೂ ಇತರರ ಬದುಕಿಗೆ ನೆರವಾಗಬಹುದು ಎಂಬ ವಿಚಾರದಿಂದ ತಂಗಿ ತಾರಾಬಾಯಿ ಸಹ ಬರೆದುಕೊಟ್ಟಿದ್ದರು. ಹೀಗಾಗಿ ಅವರ ದೇಹವನ್ನು ಇಂದು ದಾನ ಮಾಡಲಾಗಿದೆ ಎಂದು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link