ಐಎಎಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

ಬೆಂಗಳೂರು:

              ಪರ್ಯಾಯ ನಿವೇಶನ ನೀಡಬೇಕು ಎಂಬ ಕೋರ್ಟ್ ಆದೇಶ ಪಾಲಿಸಿಲ್ಲ ಎಂಬ ಕಾರಣಕ್ಕೆ ಮೂವರು ಐಎಎಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಹೈಕೋರ್ಟ್ ಮುಂದಾಗಿದೆ.

            ಬಿಡಿಎ ಕಮಿಷನರ್ ರಾಕೇಶ್ ಸಿಂಗ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂಬ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್ ಕುಮಾರ್ ಖತ್ರಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಮುಂದಾಗಿದೆ.
ನ್ಯಾಯಾಂಗ ಬಡಾವಣೆ ನಿವಾಸಿ ಎಸ್,ಎನ್ ನರಸಿಂಹ ಮೂರ್ತಿ ಮತ್ತು ಅವರ ಪತ್ನಿ ಸುಧಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ಎಸ್ ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್,ಟಿ ನರೇಂದ್ರ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

           ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಚಂದ್ರ ಕಾಂತ ಅರಿಗ, ಅಧಿಕಾರಿಗಳು ಕೋರ್ಟ್ ಆದೇಶ ಜಾರಿಗೆ ತರಲು ಅನಗತ್ಯ ವಿಳಂಬ ತೋರುತ್ತಿದ್ದಾರೆ, ಅರ್ಜಿದಾರರಿಂದ ಸ್ವಾದೀನ ಪಡಿಸಿಕೊಂಡ ನಿವೇಶನಕ್ಕೆ ಬದಲಿಯಾಗಿ ಸಮಾನವಾದ ನಿವೇಶನ ನೀಡಲು ಹಲವು ಕಾರಣ ನೀಡಲಾಗುತ್ತಿದೆ ಎಂಗು ಎಂದು ಆಕ್ಷೇಪಿಸಿದರು.

             ಬಿಡಿಎ ಮತ್ತು ಸರ್ಕಾರ ಒಂದಲ್ಲ ಒಂದು ಕಾರಣ ನೀಡಿ ವಿಚಾರಣೆ ಮುಂದೂಡುತ್ತಲೇ ಬರುತ್ತಿರುವುದನ್ನು ನೋಡಿದರೇ ಇವರ ಉದ್ಧಟತನ ಅರಿವಾಗುತ್ತದೆ. ವ್ಯಾಜ್ಯವನ್ನು ಹೊರಗೆ ಇತ್ಯರ್ಥ ಪಡಿಸುವುದಾಗಿ ಹೇಳಿದ್ದ ಬಿಡಿಎ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿರುವ ಕೋರ್ಟ್, ಮೂವರು ಐಎಎಸ್ ಅಧಿಕಾರಿಗಳ ವಿರುದ್ಧ ಸೆಪ್ಟಂಬರ್ 5 ರಂದು ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡಲಾಗುವುದು ಎಂದು ಆದೇಶಿಸಿದೆ

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link