ತ್ವಚೆಯ ಆರೈಕೆಯಲ್ಲಿ ಪ್ರತಿಯೊಬ್ಬರು ಅದರಲ್ಲೂ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸುವರು. ತ್ವಚೆಯ ರಕ್ಷಣೆಗಾಗಿ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುವರು. ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಕ್ರಮದಿಂದ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಕೆಲವು ಮಂದಿ ತ್ವಚೆಯ ಬಗ್ಗೆ ವಿಶೇಷ ಕಾಳಜಿ ವಹಿಸುವರು. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅದರ ಆರೈಕೆ ಮಾಡುವರು.
ತ್ವಚೆಯಲ್ಲಿ ಮೂಡುವಂತಹ ಮೊಡವೆ, ಕಲೆಗಳು, ಕಪ್ಪುಕಲೆಗಳು, ಕಪ್ಪುವೃತ್ತಗಳು, ಬೊಕ್ಕೆಗಳು ಇತ್ಯಾದಿ ಸೌಂದರ್ಯ ಕೆಡಿಸುವುದು. ಇದು ಹೊರಗಿನ ಕಲುಷಿತ ವಾತಾವರಣ, ಬಿಸಿಲಿನ ಹಾನಿಕಾರಕ ಯುವಿ ಕಿರಣಗಳು, ಹಾರ್ಮೋನು ಅಸಮತೋಲನ, ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದ ಬರುವುದು. ಇದಕ್ಕಾಗಿ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಬಳಸಿದರೆ ಅದರಿಂದ ತ್ವಚೆಗೆ ಮತ್ತಷ್ಟು ಹಾನಿಯಾಗುವುದು ಖಚಿತ. ಹೀಗೆ ಆಗದಿರುವಂತೆ ತಡೆಯಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ತ್ವಚೆಯ ಹಲವಾರು ಸಮಸ್ಯೆಗಳಿಗೆ ನೈಸರ್ಗಿಕವಾದ ಸಮಸ್ಯೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅದು ನೀವು ಪ್ರತಿನಿತ್ಯವು ಅಡುಗೆಗೆ ಬಳಸುವಂತಹ ಈರುಳ್ಳಿಯನ್ನು ಬಳಸಿಕೊಂಡು. ಅದು ಹೇಗೆ ಎಂದು ತಿಳಿಯಿರಿ.
ಚರ್ಮಕ್ಕೆ ಈರುಳ್ಳಿಯ ಲಾಭಗಳು?
ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಗಳು ಮತ್ತು ಖನಿಜಾಂಶಗಳಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಆದರೆ ಇದೇ ಈರುಳ್ಳಿಯು ನಿಮ್ಮ ತ್ವಚೆಗೆ ಅದ್ಭುತವಾಗಿರುವ ಪರಿಣಾಮ ಉಂಟು ಮಾಡಲಿದೆ ಎಂದು ನಿಮಗೆ ತಿಳಿದಿದೆಯಾ? ಫ್ಲಾವನಾಯ್ಡ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಯಿಂದ ಸಮೃದ್ಧವಾಗಿರುವಂತಹ ಈರುಳ್ಳಿಯು ಚರ್ಮವನ್ನು ಹಾನಿಕಾರ ಯುವಿ ಕಿರಣಗಳಿಂದ ರಕ್ಷಿಸುವುದು.
ಈರುಳ್ಳಿಯಲ್ಲಿರುವಂತ ಆ್ಯಂಟಿಆಕ್ಸಿಡೆಂಟ್ ಗುಣಗಳು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ದೇಹವನ್ನು ನಿರ್ವಿಷಗೊಳಿಸುವುದು. ಇದು ಚರ್ಮಕ್ಕೆ ಧನಾತ್ಮಕವಾಗಿ ಪರಿಣಾಮ ಬೀರಿ, ಚರ್ಮವನ್ನು ಶುದ್ಧೀಕರಿಸುವುದು. ಸಲ್ಫರ್ ನಿಂದ ಸಮೃದ್ಧವಾಗಿರುವ ಈರುಳ್ಳಿಯು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಚರ್ಮಕ್ಕೆ ವಯಸ್ಸಾಗುವ ಲಕ್ಷಣಗಳನ್ನು ತಡೆ ಹಿಡಿಯುವುದು. ಚರ್ಮದ ಸೋಂಕು, ಗಾಯಗಳು, ಉರಿಯೂತ ಇತ್ಯಾದಿ ಸಮಸ್ಯೆಗಳಿಗೆ ಈರುಳ್ಳಿಯು ತನ್ನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳಿಂದ ರಾಮಬಾಣವಾಗಿದೆ.ಈರುಳ್ಳಿಯಲ್ಲಿ ಇರುವಂತಹ ವಿಟಮಿನ್ ಸಿಯು ಕಲೆ ಹಾಗೂ ಮೊಡವೆ ನಿವಾರಣೆ ಮಾಡುವುದು.
ಬಳಸುವುದು ಹೇಗೆ?
ಈರುಳ್ಳಿಯನ್ನು ಬಾಹ್ಯ ಹಾಗೂ ಆಹಾರ ಮೂಲಕ ಸೇವನೆ ಮಾಡಿದರೆ ಅದು ನಮಗೆ ತುಂಬಾ ಸಹಕಾರಿಯಾಗಲಿದೆ. ಹೆಚ್ಚಾಗಿ ಭಾರತೀಯರು ಪ್ರತಿಯೊಂದು ಆಹಾರಕ್ಕೂ ಈರುಳ್ಳಿ ಬಳಸುವ ಕಾರಣದಿಂದಾಗಿ ಈರುಳ್ಳಿ ಸೇವನೆಯು ನಮಗೆ ಹೊಸತೇನಲ್ಲ. ಆದರೆ ತ್ವಚೆಗೆ ಇದನ್ನು ಬಳಸಿಕೊಳ್ಳುವುದು ಮಾತ್ರ ನಿಮಗೆ ಅಚ್ಚರಿ ಮೂಡಿಸಬಹುದು. ಮಾಸ್ಕ್ ಮತ್ತು ಪ್ಯಾಕ್ ಗಳ ಮೂಲಕ ಈರುಳ್ಳಿಯನ್ನು ಬಳಸುವುದು ಹೇಗೆ ಎಂದು ತಿಳಿಯುವ…
-
ಮೊಡವೆ ಮತ್ತು ಬೊಕ್ಕೆಗಳಿಗೆ ಬೇಕಾಗುವ ಸಾಮಗ್ರಿಗಳು:
1 ಚಮಚ ಈರುಳ್ಳಿ ರಸ 1 ಚಮಚ ಆಲಿವ್ ತೈಲ ಬಳಸುವ ವಿಧಾನ ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಅದರ ರಸ ತೆಗೆಯಿರಿ. ಅದಕ್ಕೆ ಆಲಿವ್ ತೈಲ ಬೆರೆಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಒಂದು ಹತ್ತಿ ಬಟ್ಟೆಯನ್ನು ಅದರಲ್ಲಿ ಅದ್ದಿಕೊಂಡು ಬಾಧಿತ ಜಾಗಕ್ಕೆ ಅದನ್ನು ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ವೇಗ ಮತ್ತು ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಒಂದು ಸಲ ಇದನ್ನು ಬಳಸಿ.
-
ವಯಸ್ಸಾಗುವ ಲಕ್ಷಣ ನಿಧಾನಗೊಳಿಸಲು ಬೇಕಾಗುವ ಸಾಮಗ್ರಿಗಳು:
1 ಮಧ್ಯಮ ಗಾತ್ರದ ಈರುಳ್ಳಿ 1 ಹತ್ತಿ ಉಂಡೆ ಬಳಸುವ ವಿಧಾನ ಒಂದು ಈರುಳ್ಳಿ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿ. ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಹತ್ತಿ ಉಂಡೆ ಅದ್ದಿಕೊಡು ಅದನ್ನು ಶುಚಿಗೊಳಿಸಿರುವ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಬಳಸಿದರೆ ಆಗ ಚರ್ಮದಲ್ಲಿನ ರಕ್ತ ಸಂಚಾರವು ಉತ್ತಮವಾಗಿ ಚರ್ಮವು ಬಿಗಿ ಮತ್ತು ಯೌವನಯುತವಾಗಿ ಕಾಣುವುದು. ಕಲೆಗಳ ನಿವಾರಣೆಗೆ ಬೇಕಾಗುವ ಸಾಮಗ್ರಿಗಳು 1 ಚಮಚ ಈರುಳ್ಳಿ ರಸ 1 ಚಮಚ ಲಿಂಬೆರಸ 1 ಹತ್ತಿ ಉಂಡೆ ಬಳಸುವ ವಿಧಾನ ಈರುಳ್ಳಿ ರುಬ್ಬಿಕೊಂಡು ಅದರ ಪೇಸ್ಟ್ ಮಾಡಿ. ಲಿಂಬೆಯನ್ನು ಎರಡು ತುಂಡು ಮಾಡಿಕೊಂಡು ಅದರಿಂದ ಕೆಲವು ಹನಿ ರಸವನ್ನು ಈರುಳ್ಳಿ ಪೇಸ್ಟ್ ಗೆ ಹಾಕಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
-
ತ್ವಚೆ ಬಿಳಿಯಾಗಲು ಬೇಕಾಗುವ ಸಾಮಗ್ರಿಗಳು:
1 ಸಣ್ಣ ಈರುಳ್ಳಿ ಬಳಸುವ ವಿಧಾನ ಈರುಳ್ಳಿಯನ್ನು ಎರಡು ತುಂಡುಗಳನ್ನಾಗಿ ಮಾಡಿ ಮತ್ತು ಒಂದು ತುಂಡನ್ನು ತೆಗೆದುಕೊಂಡು ಮುಖ ಮತ್ತು ಕುತ್ತಿಗೆಗೆ ಸರಿಯಾಗಿ ಉಜ್ಜಿಕೊಳ್ಳಿ. ಹತ್ತು ನಿಮಿಷ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ. ಈರುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚರ್ಮದ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮಕ್ಕೆ ಕಾಂತಿ ನೀಡುವುದು. ಕಪ್ಪು ಕಲೆಗಳ ನಿವಾರಣೆ ಬೇಕಾಗುವ ಸಾಮಗ್ರಿಗಳು 1 ಚಮಚ ಈರುಳ್ಳಿ ರಸ 1 ಚಮಚ ಮೊಸರು ಕೆಲವು ಹನಿ ಲ್ಯಾವೆಂಡರ್ ತೈಲ ಬಳಸುವ ವಿಧಾನ ಒಂದು ಪಿಂಗಾಣಿಯಲ್ಲಿ ಈರುಳ್ಳಿ ರಸ, ಮೊಸರು ಮತ್ತು ಕೆಲವು ಹನಿ ಲ್ಯಾವೆಂಡರ್ ತೈಲ ಹಾಕಿಕೊಂಡು ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಗೆದುಕೊಂಡು ಸಂಪೂರ್ಣ ಮುಖದ ಮೇಲೆ ಹಚ್ಚಿಕೊಳ್ಳಿ. ಬೆರಳ ತುದಿಯನ್ನು ಬಳಸಿಕೊಂಡು ಮುಖಕ್ಕೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
- ತ್ವಚೆಯು ತಾಜಾತನದಿಂದ ಕೂಡಿರಲು ಬೇಕಾಗುವ ಸಾಮಗ್ರಿಗಳು:
2 ಚಮಚ ಈರುಳ್ಳಿ ರಸ 1 ಚಮಚ ಕಡಲೆ ಹಿಟ್ಟು 1 ಚಮಚ ಹಾಲು ಬಳಸುವ ವಿಧಾನ ಒಂದು ಪಿಂಗಾಣಿ ಸ್ವಚ್ಚ ಮಾಡಿಕೊಂಡು ಅದಕ್ಕೆ ಈರುಳ್ಳಿ ರಸ, ಕಡಲೆಹಿಟ್ಟು ಮತ್ತು ಹಸಿ ಹಾಲು ಹಾಕಿ. ಎಲ್ಲವನ್ನು ಜತೆಯಾಗಿ ಬೆರೆಸಿಕೊಂಡು ಪೇಸ್ಟ್ ಮಾಡಿ. ಪೇಸ್ಟ್ ದಪ್ಪಗಾದರೆ ಅದಕ್ಕೆ ಸ್ವಲ್ಪ ಹಾಲು ಹಾಕಿ. ಇದರ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಸಾಮಾನ್ಯ ನೀರಿನಿಂದ ತೊಳೆಯಿರಿ.
ಸೂಚನೆ:
ನೀವು ಮನೆಮದ್ದನ್ನು ಬಳಸುವ ಮೊದಲು ಅದನ್ನು ದೇಹದ ಬೇರೆ ಭಾಗಕ್ಕೆ ಬಳಸಿಕೊಂಡು ಪರೀಕ್ಷೆ ಮಾಡಿಕೊಳ್ಳಿ. ಕೆಲವು ಸೂಕ್ಷ್ಮ ಚರ್ಮದವರಿಗೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು. ಕೈಗೆ ಹಚ್ಚಿಕೊಂಡು ಪರೀಕ್ಷೆ ಮಾಡಬಹುದು. ಚರ್ಮದಲ್ಲಿ ಯಾವುದೇ ರೀತಿಯ ಕಿರಿಕಿರಿ ಕಾಣಿಸದೆ ಇದ್ದರೆ ಆಗ ಮುಖಕ್ಕೆ ಬಳಸಬಹುದು.