ಓಬವ್ವ ಪಡೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಚಿತ್ರದುರ್ಗ

  ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಹೆಚ್ಚಿನ ಕಾನೂನಿನ ಅರಿವನ್ನು ಪಡೆದುಕೊಳ್ಳಲು ಮುಂದಾಗಬೇಕು. ಸಂಕುಚಿತತೆ ಮತ್ತು ಕೀಳರಿಮೆ, ಅಸುರಕ್ಷತೆಯ ಭಾವನೆಯಿಂದ ಹೊರಬರಬೇಕು ಎಂದು ಚಿತ್ರದುರ್ಗದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ ಜೋಷಿ ಕರೆನೀಡಿದರು.
ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆ ಮತ್ತು ಚಿತ್ರದುರ್ಗ ಜಿಲ್ಲಾ ಪೋಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮಾದಕ ದ್ರವ್ಯಗಳ ತಡೆ ಮಾಸಾಚರಣೆ ಹಾಗೂ ಓಬವ್ವ ಪಡೆ ಜಾಗೃತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿತ್ರದುರ್ಗದ ಹೆಮ್ಮೆ ದುರ್ಗದ ಕೋಟೆ, ಅದನ್ನಾಳಿದ ಮದಕರಿನಾಯಕ ಅದರ ರಕ್ಷಣೆಗಾಗಿ ಪಣತೊಟ್ಟು ನಿಂತ ವೀರವನಿತೆ ಓಬವ್ವ. ಓಬವ್ವಳ ನೆನಪಿಗಾಗಿ ಅವಳ ವೀರತ್ವವನ್ನು ಸಾರುವ ಅವಳ ಹೆಸರಿನ ಒಂದು ಮಹಿಳಾ ಪಡೆಯನ್ನು ಸ್ಥಾಪಿಸಬೇಕು ಎಂಬುದು ನನ್ನದೊಂದು ಮಹತ್ವಾಕಾಂಕ್ಷೆ.

   ಚಿತ್ರದುರ್ಗದ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸದೊಡನೆ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಓದು ಮತ್ತು ಜ್ಞಾನದ ಜೊತೆಗೆ ಅವರ ರಕ್ಷಣೆ ಮತ್ತು ಭದ್ರತೆಯನ್ನು ನೀಡುತ್ತಾ ಅವರ ಜೀವನಕ್ಕೊಂದು ಭರವಸೆ ನೀಡಬೇಕೆಂದು, ಮಹಿಳೆ ಮತ್ತು ವಿದ್ಯಾರ್ಥಿಗಳಿಗೆ ಅಸುರಕ್ಷತೆಯ ಮನಸ್ಥಿತಿ ಕಾಡಬಾರದು ಎಂದು ನಿರ್ಧರಿಸಿ ಈ ಓಬವ್ವ ಪಡೆಯನ್ನು ಸ್ಥಾಪಿಸಲಾಯಿತು. ಎಂದ ಅವರು ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪರಿಚಿತರಿಗೆ ಕೊಡಬೇಡಿ.ನಿಮ್ಮ ಮೊಬೈಲ್‍ನ ಅನಾವಶ್ಯಕ ಸಂದೇಶಗಳಿಗೆ ಪ್ರತ್ಯುತ್ತರ ನೀಡಬೇಡಿ. ವಾಟ್ಸಾಪ್ ಸಂದೇಶಗಳನ್ನು ಹೆಚ್ಚು ನಂಬಬೇಡಿ. ಇವುಗಳಿಂದ ನಿಮ್ಮ ಮಾಹಿತಿಯನ್ನು ಪೇಸ್‍ಬುಕ್ ಮತ್ತು ವಾಟ್ಸಾಪ್‍ಗಳಲ್ಲಿ ನೀಡುವುದರಿಂದ ಹೆಚ್ಚಿನ ಅನಾಹುತಗಳು ಸಂಬಂವಿಸುತ್ತವೆ. ಇದರಿಂದ ಎಚ್ಚರವಿದ್ದಷ್ಟು ನಿಮಗೆ ಒಳಿತು. ನಿಮ್ಮ ರಕ್ಷಣೆಗೋಸ್ಕರ ಮಹಿಳಾ ಪಡೆ ಸದಾ ಸಿದ್ಧವಿದೆಯೆಂದು ಭರವಸೆ ನೀಡಿದರು.
ಓಬವ್ವ ಪಡೆಯ ಸದಸ್ಯರು ವಿದ್ಯಾರ್ಥಿನಿಯರಿಗೆ ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಪ್ರಾತ್ಯಕ್ಷಿಕೆಗಳನ್ನು ನೀಡಿ ವಿದ್ಯಾರ್ಥಿನಿ ಮತ್ತು ಮಹಿಳೆಯರ ರಕ್ಷಣೆಯ ಭರವಸೆಯನ್ನು ನೀಡಿ, ಹೆಚ್ಚಿನ ದೂರುಗಳಿಗಾಗಿ ಮೊಬೈಲ್ ಸಂಖ್ಯೆ: 9480803100 ಸಂಪರ್ಕಿಸಲು ಸೂಚಿಸಿದರು.

  ಎಸ್.ಆರ್.ಎಸ್. ಸಮೂಹ ಸಂಸ್ಥೆಯ ಅಧ್ಯಕ್ಷರಾದ ಬಿ.ಎ. ಲಿಂಗಾರೆಡ್ಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಥೆ ರಕ್ಷಣೆ ಮತ್ತು ಭದ್ರತೆಯನ್ನು ಒದಗಿಸುತ್ತಿದೆ. ಇನ್ನು ಮುಂದುವರೆದು ಅವರಿಗೆ ಕರಾಟೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಈ ತರಬೇತಿಯಿಂದ ವಿದ್ಯಾರ್ಧಿನಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ರಾಮ್ ಎಲ್ ಅರಸಿದ್ದಿ IPS (ಂSP), ಶ್ರೀ ಸಂತೋಷ್ ಆಥಿSP, ಶ್ರೀ, ಫೈಜುಲ್ಲಾ ಅPI, ಶ್ರೀ ಬಸವರಾಜ್ ರವರು, ಖಿಡಿಚಿಜಿಜಿiಛಿ PSI, ಶ್ರೀ ರಘುನಾಥ್ ರವರು, PSI ಃಚಿಜಚಿvಚಿಟಿe Sಣಚಿಣioಟಿ, ಶ್ರೀಮತಿ ಲಲಿತಮ್ಮ, PSI, ಶ್ರೀಮತಿ ರೇವತಿ, PSI ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಟಿ.ಎಸ್. ರವಿ ಕಾಲೇಜಿನ ಪ್ರಾಂಶುಪಾಲರಾದ ಟಿ.ಆರ್. ಗುರುಪ್ರಸಾದ್, ಗಂಗಾಧರ್ ಇ. ಉಪನ್ಯಾಸಕರಾದ ನಟರಾಜ್ ಡಿ.ಹೆಚ್. ಯಶೋಧರ ಜಿ.ಎನ್. ಮನೋಹರ ಬಿ. ಶ್ರೀಕಾಂತ್ ಟಿ.ಎನ್. ಶ್ರೀಮತಿ ಸುನೀತ ಬಿ.ಕೆ. ಶ್ರೀಮತಿ ವತ್ಸಲಾ, ನಾಗವೇಣಿ ಪಿ.ಬಿ. ಇತರರು ಉಪಸ್ಥಿತರಿದ್ದರು.

   ಭಾರತೀಯರು ಬ್ರಿಟಿಷ್ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸುವಾಗ, ಅವರನ್ನು ಹಿಂಸಿಸಿ, ಕೊಲ್ಲುವುದಕ್ಕಿಂತ, ಅವರ ವಸ್ತುಗಳನ್ನು, ಶಾಲೆಗಳನ್ನು, ಆಸ್ಪತ್ರೆಗಳನ್ನು, ನ್ಯಾಯಾಲಯಗಳನ್ನು, ತಿರಸ್ಕರಿಸಿದರೆ, ಬ್ರಿಟಿಷರು ತಮ್ಮಿಂದ ತಾವೇ ದೇಶವನ್ನು ಖಾಲಿ ಮಾಡುತ್ತಾರೆ ಎಂದು ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯ ಸಂಗ್ರಾಮ ಚಳವಳಿಯಲ್ಲಿ ಜನರಿಗೆ ಮನದಟ್ಟು ಮಾಡಿಕೊಟ್ಟರು. ಅದಕ್ಕಾಗಿ ಅವರಿಗೆ 4ಂ ವರ್ಷ ಬೇಕಾಯಿತು ಎಂದು ಪರಿಸರವಾದಿ ಡಾ. ಎಚ್. ಕೆ. ಎಸ್ . ಸ್ವಾಮಿ ತಿಳಿಸಿದರು.

   ಅವರು ಗುರುಕುಲ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನೆಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಸಹಕಾರ ಚಳವಳಿಯ ಮೂಲ ಉದ್ದೇಶ, ಅನ್ಯಾಯ ಎಸಗುತ್ತಿರುವ, ಶೋಷಣೆ ಮಾಡುತ್ತಿರುವ ವ್ಯಕ್ತಿಯ ಮನಪರಿವರ್ತನೆ ಮಾಡುವುದೇ ಆಗಿರುತ್ತದೆ, ಹಾಗಾಗಿ ಅವನು ನೀಡುವ ಸಹಾಯ ಹಸ್ತವನ್ನು, ವಸ್ತುಗಳನ್ನು ತಿರಸ್ಕರಿಸುವುದನ್ನು ಹೋರಾಟಗಾರರು ಮೊದಲು ಕಲಿಯಬೇಕಾಗುತ್ತದೆ. ಹಾಗಾಗಿ ಗಾಂಧೀಜಿಯವರು ಬ್ರಿಟಿಷರು ತಯಾರಿಸಿದ ವಸ್ತ್ರಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ಭಾರತೀಯ, ಸ್ವದೇಶಿ ವಸ್ತ್ರಗಳನ್ನು ತೊಡಲು ಜನರಿಗೆ ಮನದಟ್ಟು ಮಾಡಿಕೊಟ್ಟರು ಎಂದರು

   ಹಾಗೆಯೇ ಬ್ರಿಟಿಷರ ಶಾಲೆಗಳಲ್ಲಿ ಓದುವ ಮಕ್ಕಳನ್ನು ಶಾಲೆಗಳಿಂದ ಬಿಡಿಸಿ, ನಮ್ಮ ರಾಷ್ಟ್ರೀಯ ಶಿಕ್ಷಣ ಶಾಲೆಗಳಲ್ಲಿ ಓದುವಂತೆ ಮನ ಪರಿವರ್ತಿಸಿದರು. ಹಾಗೆಯೇ ಬ್ರಿಟಿಷರ ನ್ಯಾಯಾಲಯಗಳಲ್ಲಿರುವ ನ್ಯಾಯಾಧೀಶರುಗಳನ್ನು ತಮ್ಮ ಕೆಲಸ ತೊರೆದು ಹೊರಬರುವಂತೆ ಕರೆ ನೀಡಿದರು. ಹೀಗೆ ಸಾಕಷ್ಟು ಬಿಟೀಷರ ವಿರುದ್ಧ ಹೋರಾಟದಲ್ಲಿ ಗಾಂಧೀಜಿಯವರು ಸತ್ಯಾಗ್ರಹದ ಪ್ರಯೋಗಗಳನ್ನು ನಡೆಸಿದರು ಎಂದರು.
ಬೇಡ ಎನ್ನುವ ಪದ ಬಹಳ ಬಲಿಷ್ಠವಾದ, ಆತ್ಮ ಶಕ್ತಿಯುಳ್ಳ ವ್ಯಕ್ತಿ ಮಾತ್ರ ಉಪಯೋಗಿಸಲು ಸಾಧ್ಯ ಎಂಬುದನ್ನು ಗಾಂಧೀಜಿ ಅವರು ತೋರಿಸಿಕೊಟ್ಟರು. ಎಷ್ಟೇ ಉತ್ತಮ ಮಟ್ಟದ ವಸ್ತ್ರಗಳಿರಲಿ, ಆಸ್ಪತ್ರೆಗಳಿರಲಿ, ನ್ಯಾಯಾಲಯಳಿರಲಿ, ಶಾಲೆಗಳಿರಲಿ, ಅವುಗಳನ್ನು ಬೇಡ ಎಂದು ತಿರಸ್ಕರಿಸುವುದನ್ನು ಗಾಂಧೀಜಿಯವರು ನಮಗೆ ಕಲಿಸಿಕೊಟ್ಟರು. ಬೇಡ ಎನ್ನುವ ಪದ ಸಣ್ಣ ಮಗು ಸುಲಭವಾಗಿ ವ್ಯಕ್ತಪಡಿಸುತ್ತದೆ, ಆದರೆ ದೊಡ್ಡವರು ಮುಜುಗರದಿಂದ, ಭಯದಿಂದ, ಸಂಕೋಚದಿಂದ, ನಾಚಿಕೆಯಿಂದ, ಬೇಡ ಎನ್ನುವ ಪದವನ್ನು ನಾವು ಹೆಚ್ಚು ಬಳಸುವುದಿಲ್ಲ. ಹಾಗಾಗಿ ಭಾರತೀಯರಿಗೆ ಬೇಡ ಎನ್ನುವ ಧೈರ್ಯವಿಲ್ಲ ಎಂಬ ಮಾತನ್ನು ಗಾಂಧೀಜಿಯವರು ಪದೇ ಪದೇ ಹೇಳುತ್ತಿದ್ದರು ಎಂದರು

   ಬೇಡ ಎಂಬ ಪದವನ್ನು ರೂಢಿಸಿಕೊಳ್ಳಿ, ಹೋರಾಟದಲ್ಲಿ ಪಾಲ್ಗೊಳ್ಳಿ ಎಂಬುದನ್ನು ಅವರು ಸ್ವಾತಂತ್ರ ಸಂಗ್ರಾಮದಲ್ಲಿ ಬಳಸಿಕೊಂಡರು. ಈಗಲೂ ಸಹ ಮತ್ತೊಮ್ಮೆ ನಮಗೆ ವಿದೇಶಿ ವಸ್ತ್ರಗಳ ಆಕ್ರಮಣ, ವಸ್ತುಗಳ ಮೋಹ ಅವರ ಶಾಲೆಗಳು, ನ್ಯಾಯಾಲಯಗಳು, ಅವರ ಕಾರ್ಖಾನೆಗಳು, ನಮಗೆ ಹೆಚ್ಚು ಇಷ್ಟವಾಗುತ್ತಾ ಬರುತ್ತಿದೆ. ಇವುಗಳನ್ನು ಬೇಡ ಎಂಬುದನ್ನು ಮತ್ತೆ ನಾವು ರೂಢಿ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಶಿಕ್ಷಣದಲ್ಲೇ ನಾವು ಮಕ್ಕಳಿಗೆ ಇದರ ಬಗ್ಗೆ ತರಬೇತಿ ನೀಡಿ, ಸರಳವಾದ ಜೀವನವನ್ನು ನಡೆಸುವುದನ್ನು ಹೇಳಿಕೊಡಬೇಕಾಗಿದೆ. ಬೇಡ ಎನ್ನುವ ಪದ ನಮ್ಮ ಸ್ವಾವಲಂಬಿ ಜೀವನದ ಸಂಕೇತವಾಗಿ ನಿಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರಿ. ರಾಮಲಿಂಗಶೆಟ್ಟಿ, ಮುಖ್ಯೋಪಾಧ್ಯಯನಿ ಶ್ರೀಮತಿ ಚುಡಾವಣೆ, ಸಹ ಶಿಕ್ಷಕಿಯರಾದ ರಾದ, ರೇಣುಕಾ, ವಿಜಯಲಕ್ಷ್ಮಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap