ಕಾಮಗಾರಿ ತಡೆದು ನಿವಾಸಿಗಳ ಪ್ರತಿಭಟನೆ

ಹರಪನಹಳ್ಳಿ:

      ಪಟ್ಟಣದ ವಾಲ್ಮೀಕಿ ನಗರದಲ್ಲಿ ನಡೆಯುತ್ತಿರುವ ಮಂಡ್ಯ-ಹೂವಿನ ಹಡಗಲಿ ರಾಜ್ಯ ಹೆದ್ದಾರಿ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಶುಕ್ರವಾರ ಕಾಮಗಾರಿಗೆ ತಡೆವೊಡ್ಡಿ ಪ್ರತಿಭಟನೆ ನಡೆಸಿದರು.

      ಪಟ್ಟಣದ ವಾಲ್ಮೀಕಿ ನಗರದ ಆಂಜನೇಯ ದೇವಸ್ಥಾನದಿಂದ ಹಾಲಸ್ವಾಮಿ ಮಠದವರಿಗೆ ಒಂಬತ್ತುವರೆ ಮೀಟರ್ ಅಗಲದಲ್ಲಿ ಕಾಂಕ್ರಿಟ್ ಪೂರ್ಣಗೊಳಿಸಲಾಗಿದೆ. ಆದರೆ ಇನ್ನೂಳಿದ ಕಾಮಗಾರಿಯನ್ನು ಕೇವಲ ಏಳುವರೆ ಮೀಟರ್ ಅಗಲದಲ್ಲಿ ಸಿಸಿ ರಸ್ತೆ ನಿರ್ಮಿಸುತ್ತಿರುವುದು ತಾರತಮ್ಯ ನೀತಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

      ರಾಜ್ಯ ಹೆದ್ದಾರಿಯ ಕಾಮಗಾರಿ ಕೈಗೊಂಡಿರುವ ದಾವಣಗೆರೆ ಮೂಲದವರೊಬ್ಬರು ತರಾತುರಿಯಲ್ಲಿ ಕೆಲಸ ಮುಗಿಸಲು ಹೊರಟಿದ್ದಾರೆ. ಲೋಕೋಪಯೋಗಿ ಇಲಾಖೆ ಮಾರ್ಗಸೂಚಿಯ ಅನ್ವಯ ರಸ್ತೆ ನಿರ್ಮಿಸದೇ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಪ್ರಮುಖ ಮಾರ್ಗಗಳನ್ನು ಸಂಪರ್ಕಿಸುವ ಈ ರಸ್ತೆ ಕಿರಿದಾದರೆ ಸಂಚಾರಿಗಳಿಗೆ ತೀವ್ರ ತೊಂದರೆ ಆಗುತ್ತದೆ. ಹೀಗಾಗಿ ಮೇಲಧಿಕಾರಿಗಳು ಕೂಡಲೇ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆ ವೇಳೆ ಭಜರಂಗಿ ಹನುಮಂತ, ನಿಟ್ಟೂರು ಹಾಲಪ್ಪ, ಐನಳ್ಳಿ ದುರಗಪ್ಪ, ದ್ಯಾಮಜ್ಜಿ ಹನುಮಂತ, ತಳವಾರ ತಿಮ್ಮಪ್ಪ, ಡಿ.ಪಿಂಕಿ, ದೊಡ್ಡ ಹಾಲಪ್ಪ, ದುರಗಪ್ಪ, ಶಿರಹಟ್ಟಿ ಕೆಂಚಮ್ಮ, ಪಟ್ನಾಮದ್ ಸೂಲೋಚನಮ್ಮ, ರಾಯದುರ್ಗದ ಬಿದ್ದಪ್ಪ, ಕುಮಾರನಹಳ್ಳಿ ನಾಗರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link