ಬಳ್ಳಾರಿ:
ಗಣಿನಾಡು ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಪಾಲಿಟೆಕ್ನಿಕ್, ಐಟಿಐ ಹಾಗೂ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲುಗೆ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮನವಿ ಮಾಡಿದ್ದಾರೆ.
ನಿನ್ನೆ (ಏ.29) ಎಂಆರ್ಎಸ್ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಶಾಸಕ ಸೋಮಶೇಖರ ರೆಡ್ಡಿ ಅವರು ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಕೊನೆಯ ಉಸಿರು ಇರೋವರೆಗೂ ನಾನು ಮುಸಲ್ಮಾನರಿಗೆ ದ್ರೋಹ ಮಾಡಲ್ಲ. ಒಂದು ವೇಳೆ ದ್ರೋಹವಾದರೆ ನಾನು ಆ ದಿನವೇ ರಾಜಕೀಯದಿಂದ ಹೋರ ಹೋಗುವೆ ಎಂದು ಶಪಥ ಮಾಡಿದರು.
ಬಾಲ್ಯದಲ್ಲಿ ಕಲೆಗಾರ ಅಬ್ದುಲ್ ಅಂತಾ ನನ್ನ ಪ್ರಾಣ ಸ್ನೇಹಿತ ಇದ್ದ. ಬಾಲ್ಯದಲ್ಲಿ ನಾನು ಅವನ ಜತೆ ರಂಜಾನ್ ಉಪವಾಸ ಆಚರಣೆ ಮಾಡುತ್ತಿದ್ದೆ. ಒಮ್ಮೊಮ್ಮೆ ನಾನು ಆವೇಶದಲ್ಲಿ ಮಾತನಾಡಿ ಬಿಡ್ತಿನಿ, ಅದು ನನಗೆ ಗೊತ್ತಾಗಲ್ಲ. ಆದರೆ, ನನ್ನ ಮನಸ್ಸಿನಲ್ಲಿ ಅದನ್ನು ಇಟ್ಟುಕೊಳ್ಳಲ್ಲ, ತಕ್ಷಣ ನಾನು ಅದನ್ನು ಮರೆತುಬಿಡುವೆ ಎನ್ನುತ್ತಾ ಈ ಹಿಂದೆ ಮುಸ್ಲಿಂ ಸಮುದಾಯದ ವಿರುದ್ಧ ವೀರಾವೇಶದ ಹೇಳಿಕೆ ನೀಡಿ ನೀಡಿದ್ದಕ್ಕೆ ತೇಪೆ ಹೆಚ್ಚಲು ರೆಡ್ಡಿ ಮುಂದಾದರು.
ನಿನ್ನೆ ರಾತ್ರಿ ಇಫ್ತಿಯಾರ್ ಕೂಟದಲ್ಲಿ ಸೋಮಶೇಖರ ರೆಡ್ಡಿ ಹೇಳಿಕೆ ಬೆನ್ನಲ್ಲೇ ಅವರ ಹಳೆಯ ಹೇಳಿಕೆ ವೈರಲ್ ಆಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮುಸ್ಲಿಮರ ವಿರುದ್ಧ ಸೋಮಶೇಖರ್ ರೆಡ್ಡಿ ಅವರು ವೀರಾವೇಶದ ಭಾಷಣ ಮಾಡಿದ್ದರು. ಏನಾದ್ರೂ ಜಾಸ್ತಿ ನಕರಾ ಮಾಡಿದರೆ, ನಿಮ್ಮ ಪರಿಸ್ಥಿತಿ ನೆಟ್ಟಗಿರಲ್ಲ.
ಒಬ್ಬೊಬ್ಬ ಹಿಂದು ಒಬ್ಬೊಬ್ಬ ಶಿವಾಜಿಯಾಗಿ ಖಡ್ಗ ಹಿಡಿದು ಬರ್ತಾನೆ ಎಚ್ಚರ. ಹೇಯ್ ನೀವು ಇರುವುದು ಕೇವಲ 20 ಪರ್ಸೆಂಟ್ ಮತ್ತು ನಾವಿರೋದು 80 ಪರ್ಸೆಂಟ್. ಇಲ್ಲಿ ಇರಬೇಕು ಎಂದರೆ, ನಾವು ಹೇಳಿದ ಹಾಗೆ ಕೇಳಬೇಕು. ಹೆಚ್ಚು ಮಾತನಾಡಿದ್ರೆ ನಿಮ್ಮ ದೇಶಕ್ಕೆ ಕಳಿಸುತ್ತೇವೆ. ಬಾಲ ಮುಚ್ಚಿಕೊಂಡು ಇಲ್ಲಿ ಇರಿ ಎಂದು 2020ರ ಜನವರಿ 3ರಂದು ನಡೆದ ಸಮಾವೇಶವೊಂದರಲ್ಲಿ ವೀರಾವೇಶದ ಭಾಷಣವನ್ನು ರೆಡ್ಡಿ ಮಾಡಿದ್ದರು. ಇದೀಗ ಆ ವಿಡಿಯೋ ಮತ್ತೆ ವೈರಲ್ ಆಗಿದೆ.
4ನೇ ಅಲೆಯ ಭೀತಿ: ಭಾರತದಲ್ಲಿ 24ಗಂಟೆಯಲ್ಲಿ 3,688 ಕೋವಿಡ್ ಪ್ರಕರಣ ಪತ್ತೆ, 50 ಮಂದಿ ಸಾವು
ಇನ್ನು ನಿನ್ನೆ (ಏ.29) ರಾತ್ರಿ ರೆಡ್ಡಿ ಸಹೋದರರ ಆಪ್ತ ಅಲಿ ಖಾನ್ರಿಂದ ಇಫ್ತಿಯಾರ್ ಕೂಟ ಆಯೋಜನೆ ಮಾಡಲಾಗಿತ್ತು. ಈ ಕೂಟದಲ್ಲಿ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ