ಕೊಪ್ಪಳ:
ಲಾಕ್ ಡೌನ್ ಮಾಡಿದರೆ ಕೋವಿಡ್-19 ಸೋಂಕು ಹೋಗುತ್ತದೆ, ಇಲ್ಲದಿದ್ದರೆ ಹೋಗುವುದಿಲ್ಲ ಎನ್ನುವುದು ತಪ್ಪು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದರು.ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಲ್ಲ ಕಡೆ ಕೋವಿಡ್ 19 ಪ್ರಕರಣಗಳು ಜಾಸ್ತಿ ಆಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದರು.
ಕಾಯಿಲೆ ಯಾರನ್ನೂ ಬಿಡಲ್ಲ, ಮಾಧ್ಯಮದವರನ್ನು, ಜನಪ್ರತಿನಿಧಿಗಳನ್ನೂ ಬಿಡಲ್ಲ.ಸರಕಾರದ ಕ್ರಮಗಳಿಗೆ ಜನರ ಸಹಕಾರ ಬೇಕು. ರಾಜ್ಯ ಸರಕಾರ ವಿಫಲ ಆಗಿಲ್ಲ ಎಂದರು.ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಪ್ರಾಮಾಣಿಕ, ಸತ್ಯ ಹರಿಶ್ಚಂದ್ರರಂಥ ವ್ಯಕ್ತಿ ಅಂತ ಕಾಣುತ್ತೆ. ಅದಕ್ಕೆ ಅವರನ್ನ ಜನ ಏಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಎಂದರಲ್ಲದೆ, ರಾಜ್ಯದಲ್ಲಿ ಎಲ್ಲೂ ರಸಗೊಬ್ಬರದ ಕೊರತೆಯಾಗಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ