ಶಿರಿಗೇರಿ
ಗ್ರಾಮದ ಯುವಕರು ಮತ್ತು ಮುಖಂಡರು ಸೇರಿ.ನಿಧಿ ಸಂಗ್ರಹಿಸಿ ಕೊಡಗು ಮಡಿಕೇರಿ ಸಂತ್ರಸ್ತರಿಗೆ ಹಣ ಸಹಾಯ ಮಾಡಿದರು ಯಡಬೀಡದೆ ವರುಣ ರಾಯನ ಅರ್ಭಟಕ್ಕೆ ಸಾರ್ವಜನಿಕರ ಜೀವನ ಅಸ್ತವ್ಯಸ್ಥವಾಗಿ 20 ಕ್ಕೂ ಅದಿಕ ಜನ ಮರಣಸಿದ್ದಾರೆ. ಆಸ್ತಿಗಳನ್ನು ಕಳೆದುಕೋಂಡು ಎಷ್ಟೊ ಸಂಸಾರಗಳು ಭೀದಿಗೆ ಬಂದಿದ್ದರೆ ಅದ್ದರಿಂದ ಅಲ್ಲಿನ ಸಂತ್ರಸ್ತರಿಗೆ ನೆ ರವಿಗೆ ಶಿರಿಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಅತ್ತಿರ ಪರಿಹಾರ ನಿಧಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ 57800ರೂ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಡಿ.ಡಿ ಯನ್ನು ಕಳಿಸಿದರು.
ಖಾದರ್ ಬಾಷ ,ಖಾದ್ರಿ ವೈದ್ಯರು,ವಿ ಹನುಮೇಶ, ಜಲಾಲಿ ಪೀರ್, ನೆನಕ್ಕ ವಿರುಪಾಕ್ಷಿ, ಜೆ ಎರ್ರಿಸ್ವಾಮಿ, ಖಾಜಾಪೀರ್, ಸದ್ದಾಂ, ಸಲಿಂ,ರಮೇಶ್, ಇನ್ನಿತರರು ಸೇರಿ ಒಂದುವಾರ ಪ್ರತಿದಿನ ತಮ್ಮ ಸ್ವಂತ ಕರ್ಚಿನಲ್ಲಿ ಮುದ್ದಟನೂರು, ಮಾಳಪುರ,ಹಾವಿನಹಾಳು,ಗುಂಡಿಗೆನೂರು,ಕೊಂಚಿಗೇರಿ,ದಾಸಾಪುರ,ಸಿದ್ದರಾಂಪುರ ಗ್ರಾಮಗಳಿಗೆ ತೆರಳಿ ಶಾಲಾಮಕ್ಕಳ ಹತ್ತಿರ ಪರಿಹಾರ ನಿಧಿಯನ್ನು ಸಂಗ್ರಹಿಸಿ ಕಳಿಸಿ ಮಾನವಿಹತೆ ಮೆರದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
