ಶ್ರೀಸತ್ಯಸಾಯಿ ಛಾಯಾಗ್ರಾಹಕರ ಸಂಘದ ಅಹವಾಲುಗಳ ಸ್ವೀಕರಣೆ

0
11

ಶಿಗ್ಗಾವಿ :

       ಪತ್ರಿಕೋದ್ಯಮದವರಿಗೆ ಇರುವ ಸಂಘಟನೆ ಮತ್ತು ಗುರುತಿಸುವಿಕೆ ರೀತಿಯಲ್ಲಿ ಛಾಯಾಗ್ರಾಹಕರಿಗೂ ವೃತ್ತಿಯನ್ನು ಮೌಲ್ಯಮಾಪನ ಮಾಡುವ ಮತ್ತು ಛಾಯಾಗ್ರಾಹಕರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರಕಾರದ ನೀತಿಯಲ್ಲಿ ಬದಲಾವಣೆಯಾಗಬೇಕಿದ್ದು ಈ ವಿಚಾರವನ್ನು ವಾರ್ತಾ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಛಾಯಾಗ್ರಾಹಕರ ವಯಸ್ಸಿನ ವೃತ್ತಿಯ ಅಧಾರದ ಮೇಲೆ ಸರಕಾರದ ವಲಯದಲ್ಲಿ ನ್ಯಾಯಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

       ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ತಾಲೂಕಾ ಶ್ರೀಸತ್ಯಸಾಯಿ ಛಾಯಾಗ್ರಾಹಕರ ಸಂಘದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಛಾಯಾಗ್ರಹಣದಲ್ಲಿ ನನ್ನದು ಸ್ವಂತ ಆಸಕ್ತಿ ಇದ್ದು, ನಾನು ಹಲವಾರು ಛಾಯಾಚಿತ್ರಗಳನ್ನು ತೆಗೆದು ಪ್ರಿಂಟ್‍ಗಳನ್ನು ಸಹಿತ ಮಾಡಿದ್ದೇನೆ ವಿಶೇಷವಾಗಿ ನಿಸರ್ಗದ ಛಾಯಾಚಿತ್ರಗಳನ್ನು ತೆಗೆದಿದ್ದೇನೆ, ಛಾಯಾಗ್ರಹಣ ನನ್ನ ಹವ್ಯಾಸವೂ ಆಗಿದೆ ಎಂದ ಶಾಸಕರು ನಾನೂ ಸಹಿತ ನಿಮ್ಮವನೇ ಎಂದರು.

       ತಾಲೂಕಿನಲ್ಲಿ ಎಲ್ಲ ರಂಗಗಳಲ್ಲಿಯೂ ಬದಲಾವಣೆಯಾಗಿದೆ, ಆ ಎಲ್ಲ ಬದಲಾವಣೆಗೆ ಸಾಕ್ಷಿ ಈ ನಮ್ಮ ಛಾಯಾಗ್ರಾಕರು, ಹೀಗಾಗಿ ಇಡಿ ನಮ್ಮ ತಾಲೂಕಿನ ಅಭಿವೃದ್ದಿಯಲ್ಲಿ ತಾವೂ ಕೂಡಾ ಪಾಲುದಾರರಾಗಿದ್ದೀರಿ ಮತ್ತು ಅಭಿವೃದ್ದಿಯ ಅವಿಭಾಜ್ಯ ಅಂಗವೂ ಸಹಿತ ತಾವಾಗಿದ್ದೀರಿ ಎಂದರು, ಸ್ವಂತ ನಿವೇಶನದ ಬದಲಾಗಿ ವಿವಿಧ ಯೋಜನೆಯ ಅಡಿಯಲ್ಲಿ ಮನೆ ಕಟ್ಟಲು ಬೇಕಾದ ಅನುಕೂಲ ಮಾಡುವ ಬರವಸೆ ನೀಡಿದ ಅವರು ಪತ್ರಕರ್ತರ ಭವನದ ಪಕ್ಕದಲ್ಲಿಯೇ ಛಾಯಾಗ್ರಾಹಕರ ಭವನ ನಿರ್ಮಿಸಿ ಕೊಡಲು ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಜೊತೆಗೆ ಗಂಗಮ್ಮ ಟ್ರಷ್ಟ ವತಿಯಿಂದ ಬರುವ ನವಂಬರ 1 ರಂದು ನೀವೇ ತಾಲೂಕಿನಲ್ಲಿ ಒಬ್ಬ ಉತ್ತಮ ಛಾಯಾಗ್ರಾಹಕರನ್ನು ತಮ್ಮ ಸಂಘದಿಂದ ಆಯ್ಕೆ ಮಾಡಿ ಕೊಟ್ಟರೆ ಅವರನ್ನು ಟ್ರಷ್ಟ್ ವತಿಯಿಂದ ಸನ್ಮಾನಿಸಲಾಗುವುದು ಆ ಆಯ್ಕೆಯನ್ನು ತಾಲೂಕಾ ಛಾಯಾಗ್ರಾಹಕ ಸಂಘವೇ ಮಾಡಿ ಕೊಡಬೇಕು ಎಂದರು.

      ಒಟ್ಟಾರೆ ಛಾಯಾಗ್ರಾಹಕರ ಸಂಘದೊಂದಿಗೆ ನಾ ಇದ್ದು ನಿಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಲಾಗುವುದೆಂದು ಬರವಸೆ ನೀಡಿದರು.

     ಕಾರ್ಯಕ್ರಮದಲ್ಲಿ ತಾಲೂಕಾ ಶ್ರೀ ಸತ್ಯಸಾಯಿ ಛಾಯಾಗ್ರಾಹಕರ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾದ್ಯಕ್ಷ ರಂಗನಾಥ ಗಾಯಕವಾಡ, ಅದ್ಯಕ್ಷರಾದ ಉದಯಶಂಕರ ಹೊಸಮನಿ, ಬಂಕಾಪೂರ ಛಾಯಾಗ್ರಾಹಕರ ಸಂಘದ ಅದ್ಯಕ್ಷ ಮಂಜುನಾಥ ಹೊಸಮನಿ, ತಾಲೂಕಾ ಮುಖಂಡರಾದ ದೇವಣ್ಣ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಸಿದ್ಲಿಂಗಪ್ಪ ಕಾರಡಗಿ ಸೇರಿದಂತೆ ತಾಲೂಕಿನ ಎಲ್ಲ ಛಾಯಾಗ್ರಾಹಕರು ಹಾಗೂ ಮುಖಂಡರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here