ಬ್ಯಾಡಗಿ:
ಕೊಡಗು ಮತ್ತು ಕೇರಳದ ಪ್ರವಾಹ ಸಂತ್ರಸ್ಥರ ನೆರವಿಗೆ ರಾಜ್ಯದ ಪ್ರತಿಯೊಬ್ಬರ ಮನಸ್ಸು ಮತ್ತು ದೇಹಗಳು ಸ್ಪಂದಿಸಿವೆ, ಪರಿಹಾರ ಕಾರ್ಯಗಳು ಒಂದು ಸರ್ಕಾರಕ್ಕಿಂತಲೂ ಹೆಚ್ಚು ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ನಡೆಯುತ್ತಿರುವ ಕಾರ್ಯ ಶ್ಲಾಘನೀಯ ಎಂದು ಬಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಇಎಸ್‍ಎಂ ಮಹಾವಿದ್ಯಾಲಯ ಹಾಗೂ ಯುವ ರೆಡ್ ಕ್ರಾಸ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕೊಡಗು ಮತ್ತು ಕೇರಳ ನೆರೆ ಸಂತ್ರಸ್ಥರಿಗೆ ಧನಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಮತ್ತು ಕೇರಳದಲ್ಲಿ ವರುಣನ ರೌದ್ರನರ್ತನಕ್ಕೆ ಕಂಡೂ ಕೇಳರಿಯದಷ್ಟು ಪ್ರಾಣ ಸೇರಿದಂತೆ ಆಸ್ತಿ ಪಾಸ್ತಿ ಹಾನಿಯಾಗಿದೆ, ಆಶ್ರಯ ಕಳೆದುಕೊಂಡ ಲಕ್ಷಾಂತರ ನಾಗರಿಕರು ಇಂದು ನಿರಾಶ್ರಿತರಾಗಿದ್ಧಾರೆ, ನಿತ್ಯವೂ ಬೆಳಕನ್ನು ಹರಿಸುಸುವದೇ ಕಷ್ಟವಾಗಿದೆ ಎಂದರು.
ಮಳೆ ಎಂದರೆ ನಡುಕ ಬರುತ್ತಿದೆ: ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟನಷ್ಟಗಳನ್ನು ಕಣ್ಣುಗಳಿಂದ ನೋಡುವುದಿರಲಿ ಕಿವಿಗಳಿಂದ ಕೇಳಿದರೇ ಸಾಕು ಮೈ ಜುಮ್ಮೆನಿಸುತ್ತದೆ, ಸಂಕಷ್ಟದಲ್ಲಿ ಸಿಲುಕಿದವರಿಗೆ ಯಾವುದಾದರೊಂದು ರೀತಿಯಲ್ಲಿ ಸಹಾಯ ಹಸ್ತ ಚಾಚಲು ರಾಜ್ಯದಲ್ಲಿನ ಶಾಲಾ ಮಕ್ಕಳು, ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡ ಮಟ್ಟದ ಅಧಿಕಾರಿಗಳು, ವ್ಯಾಪಾರಸ್ಥರು ರೈತರು, ವಿವಿಧ ಸಂಘಟನೆಗಳು ಸಿದ್ಧವಾಗಿರುವ ಕಾರ್ಯ ಶ್ಲಾಘನೀಯ ಎಂದರು.
ದುರುಪಯೋಗವಾಗದಂತೆ ಮನವಿ:ಸಾರ್ವಜನಿಕರಿಂದ ಸಂಗ್ರಹಸಿದ ಹಣ, ಧಾನ್ಯ ಹಾಗೂ ಇನ್ನಿತರ ವಸ್ತುಗಳು ನಿಜವಾಗಿಯೂ ಸಂತ್ರಸ್ಥರಿಗೆ ತಲುಪುವಂತಾಗಬೇಕು, ಕೆಲ ಸಮಯ ಸಾಧಕರು ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ ಅವರು, ಡೋಂಘೀ ಪರಹಾರ ಸಂಗ್ರಹಗಾರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ ಅವರು, ಯಾವುದೇ ಕಾರಣಕ್ಕೂ ಅಂತಹ ಕೃತ್ಯಗಳಲ್ಲಿ ಯಾರೊಬ್ಬರೂ ಭಾಗಿಯಾಗದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಇಎಸ್‍ಎಂ ಪ್ರಾಚಾರ್ಯ ಕೆ.ಜಿ.ಖಂಡೇಬಾಗೂರ, ಉಪನ್ಯಾಸಕರಾದ ಕಟಗಿಹಳ್ಳಿ, ಸಿ.ಶಿವಾನಂದಪ್ಪ, ಪಿ.ಎಂ.ರಾಮಗಿರಿ, ಚನ್ನಮ್ಮ ಕೋರಿಶೆಟ್ಟರ, ಉಜ್ಜಯನಿಮಠ, ಎಸ್.ಡಿ.ಬಾಲಾಜಿರಾವ್, ಎಸ್.ಜಿ.ವೈದ್ಯ, ಸಿಬ್ಬಂದಿಗಳಾದ, ಎಂ.ಆರ್.ಕೋಡಿಹಳ್ಳಿ, ಆನಂದ, ಎಸ್.ಎಚ್.ಕುರಕುಂದಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.