ಹರಪನಹಳ್ಳಿ:

ಕ್ರೀಡೆಗಳಿಂದ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಂಡಲ್ಲಿ ಮಾನಸಿಕವಾಗಿಯು ಸದೃಡತೆಯನ್ನು ಹೊಂದಲು ಸಾದ್ಯ ಎಂದು ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದೇವರ ತಿಮ್ಮಲಾಪುರ ಸರಕಾರಿ ಉನ್ನತ್ತಿಕರಿಸಿದ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸೋಮುವಾರ 2018-19ನೇ ಸಾಲಿನ ಉತ್ತರ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವಾಗಿರಲು ಕ್ರೀಡೆಗಳು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು ಹಾಗೂ ಕ್ರೀಡೆಗಳನ್ನು ಯಾವುದೇ ತಾರತಮ್ಯವಿಲ್ಲದೇ ಪಾರದರ್ಶಕವಾಗಿ ನಡೆಸಬೇಕು ಎಂದ ಅವರು ಆಟದ ಜತೆಗೆ ಪಾಠವು ಅವಶ್ಯಕತೆ ಇದ್ದು ಪಠ್ಯೇತರ ಚಟುವಟಿಕೆ ಕ್ರೀಡೆ, ಸಾಂಸ್ಕøತಿಕ ರಂಗದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಾಲೂಕಿಗೆ ಯಶಸ್ಸು ತನ್ನಿ ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್ ಗುಂಡು ಎಸೆಯುವ ಮೂಲಕ ಕ್ರೀಡೆಗಳನ್ನು ಉದ್ಘಾಟಿಸಿ ಮಾತನಾಡಿ ಸದೃಢ ಆರೋಗ್ಯಕ್ಕೆ ಕ್ರೀಢೆ ಬಹು ಮುಖ್ಯವಾಗಿದ್ದು ತಮ್ಮ ವಿದ್ಯಾಬ್ಯಾಸದ ಜತೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಈ ಮೂಲಕ ಓಲಂಪಿಕ್ ಕ್ರೀಡೆಯಲ್ಲೂ ಭಾಗವಹಿಸುವ ಮುಖಾಂತರ ತಾಲೂಕಿಗೆ, ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತನ್ನಿ ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ ಮಾತನಾಡಿ ಆಟ ಆಡುವ ಮೂಲಕ ದೈಹಿಕವಾಗಿ, ಮಾನಸಿಕವಾಗಿ ಸಾಮಥ್ರ್ಯ ಹೆಚ್ಚಿಸಿಕೊಳ್ಳಿ ಇದರಿಂದ ಮನಸ್ಸು ಕೂಡ ಉಲ್ಲಾಸಗೊಳ್ಳುತ್ತದೆ ಎಲ್ಲರೂ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಎಂದರು.
ನೌಕರರ ಸಂಘದ ಅಧ್ಯಕ್ಷ ಬಸವರಾಜ್ ಸಂಗಪ್ಪನವರ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗನಗೌಡ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜಶೇಖರ, ಎಸ್.ರಾಮಪ್ಪ, ಶಾಲೆಗಳ ಎಸ್‍ಡಿಎಂಸಿ ಅಧ್ಯಕ್ಷ ಜಿ.ವೆಂಕಟೇಶ್, ಸದಸ್ಯರಾದ ಭರ್ಮಪ್ಪ, ಅಡವಿಹಳ್ಳಿ ಗ್ರಾಪಂನ ಕೆಂಚಪ್ಪ, ಮಾದಪ್ಪ, ಕೊಟ್ರೇಶ್, ಲಕ್ಷ್ಮಣ, ನಾಗಪ್ಪ, ಶಿಕ್ಷಣ ಇಲಾಖೆಯ ಉದಯಶಂಕರ, ಎಚ್.ಎಸ್.ಬಂಕಾಪುರ, ಸಿಆರ್‍ಪಿ ಆಂಜನೇಯ, ಮುಖ್ಯಗುರುಗಳಾದ ಎಚ್.ಎಂ.ಮಂಜುಳಾ, ಟಿ.ಎಚ್.ಎಂ.ಲತಾ, ಐ.ಜಿ.ಕವಿತಾ, ಯು.ಎಸ್.ನರಸುಬಾಯಿ, ಹಾಗೂ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








