ಬಂದೂಕಿನ ಸಿಡಿಮದ್ದಿಗೆ
ಎದೆಯನೊಡ್ಡಿ ನಡೆದರು
ಗಣವಾಗಲು ಗುಣವಂತರು
ಋಣ ತೀರಿಸಿ ಮಡಿದರು
ಗಣ ರಾಜ್ಯ, ಪ್ರಜಾ ರಾಜ್ಯ
ನಾಡೆಂದರೆ ಅದು ನಮ್ಮದು
ಪ್ರಜೆಯಿಂದ, ಪ್ರಜೆಗಾಗಿ,
ಪ್ರಜೆಗೋಸ್ಕರ ಇರುವುದು
ಸೆರೆಯ ಸಂಕೋಲೆ ಕಳಚಿ
ಗಣವಾಯಿತು ದೇಶವು
ಗುಣವಂತರ ದೇಶವು
ಸರ್ವವೂ… ಸ್ವತಂತ್ರವು…
ನೂರಾರು ಮತಗಳ ನಡುವೆ
ಸಾವಿರಾರು ಜಾತಿಗಳ ಗೊಡವೆ
ಹಲವು ಭಾಷೆ ಒಲವ ವಸ್ತ್ರ
ಗಣ ದೇಶ ವಾಸಿಗಳು
ಸರ್ವರೂ… ಸ್ವತಂತ್ರರು…
ಮೃಗದ ಸೇಡು ಮನುಜ ಪಾಡು
ಜಗದ ಜಾಡು ಅರಿತು ನೋಡು
ಹಿಂದೆ ಒಮ್ಮೆ ಇಣುಕಿ ನೋಡು
ಸ್ವಂತಕ್ಕೆ ಏನೂ ಇಲ್ಲಾ
ಸಮಾಜಕೆ… ಸರ್ವಸ್ವವೆಲ್ಲಾ…
ಕಟ್ಟಿಕೊಟ್ಟು ಹೋದರು
ನೆನಪನಿಟ್ಟು ನಡೆದರು
ಅಜರಾಮರರಾದರು
ಅವರೇ ನಮ್ಮ ವೀರರು
ಸ್ವಾತಂತ್ರ ತಂದ ಶೂರರು,