ಮಾತೃಹೃದಯಿ ಸಿದ್ಧಗಂಗೆ ಶಿವಕುಮಾರ ಶ್ರೀಗಳು

0
88

 ನೋಟದಿಂದಲೇ ನಲ್ಮೆ ತೋರಿದ
ತಾಯಿ ಮಡಿಲು, ತ್ರಿವಿಧ ದಾಸೋಹಿ.
ನೊಂದು ಬೆಂದು, ಮುಂದೇನೆಂದು ಯೋಚಿಸುತ್ತ ನಿಂತವರ
ಕೃಪೆಯಾಗಿ ಸಲಹಿದ ಸರ್ವಜನ ಪರಿಗ್ರಾಹಿ.

ಜಾತಿಮತಗಳ ಮೀರಿ
ಎಲ್ಲರೊಳಗೊಂದಾದ ಯೋಗಿವರ್ಯ.
ಮೌಢ್ಯ ಮುಸುಕನು ತೊರೆದು, ಮಾನವತೆಯೇ
ಮಹಾಬಲವೆಂದು ಸಾರಿದ ಪ್ರತಿಭಾಸೂರ್ಯ 

ಹೆತ್ತೊಡಲ ಪ್ರೀತಿಯಲಿ, ಸಿಹಿಯಾಗಿ ಉಲಿದಿಲ್ಲಿ
ಸಾರ್ಥಕ ಗುರಿತೋರಿದ ಸಾಕಾರಮೂರ್ತಿ,
ವಿಶಾಲದೃಷ್ಟಿ, ವಿಶ್ವಮಾನವ ಪ್ರೀತಿಯನು
ದಶದಿಸೆಗೂ ಪಸರಿಸಿದ ಕರುನಾಡ ಕೀರ್ತಿ.

ಬೆಂಗಾಡು ಭೂಮಿಯಲ್ಲೂ
ಉತ್ತು ಬೆಳೆ ಬೆಳೆದ ಕರ್ಮಯೋಗಿ,
ಸತ್ಯಗುಣ ನೀತಿಯಲಿ ಸಂಯಮದಿ
ತಪದಿ ಬಾಳಿದ ಜ್ಞಾನಯೋಗಿ.

ಬಸವ, ಬುದ್ಧ, ರಾಮಕೃಷ್ಣ ಪರಮಹಂಸ, ವಿವೇಕಾನಂದರ
ಸಮನ್ವಯ ತತ್ವವನ್ನು ಅನುಸರಿಸಿ ತೋರಿದ ಪೂಜ್ಯ ಶ್ರೀಗುರು,
“ವಿದ್ಯೆ ಕಡಿಮೆಯಾದರೂ, ನಡತೆ ಶುದ್ಧವಿರಬೇಕು” – ಎಂದು
ಸಾರಿದ ನವಯುಗ ಕಲ್ಪತರು.

-ಡಿ. ನಾರಾಯಣ,
ಸೀಗೇಹಳ್ಳಿ

LEAVE A REPLY

Please enter your comment!
Please enter your name here