ಹಾವೇರಿ:
ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರಿಂದ ಗಣೇಶ ಚತುರ್ಥಿ ಆಚರಣೆ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಕಾರಣ ಸಂಘಟಕರ ಹಾಗೂ ಸಮಾಜ ಮುಖಂಡರ ಪೂರ್ವಭಾವಿ ಸಭೆಯನ್ನು ಸೆಪ್ಟೆಂಬರ್ 10 ರಂದು ಸಾಯಂಕಾಲ 4 ಗಂಟೆಗೆ ನಗರದ ಜಿಲ್ಲಾ ಗುರುಭವನದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದೆ.
ಈ ಸಭೆಗೆ ನಗರದ ಗಣ್ಯ ವ್ಯಕ್ತಿಗಳು, ಹಾವೇರಿ ಶಹರ ಪೊಲೀಸ್ ಠಾಣೆಯ ನಾಗರಿಕ ಸಮಿತಿಯ ಸದಸ್ಯರು ಮತ್ತು ಹಾವೇರಿ ಶಹರ ಪೊಲೀಸ್ ಠಾಣೆಯ ಯುವ ಸಮಿತಿ ಸದಸ್ಯರು ಹಾಗೂ ಗಣೇಶ ಮೂರ್ತಿಯ ಸಂಘಟಕರು ಹಾಜರಾಗುವಂತೆ ಹಾವೇರಿ ಶಹರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.