ಹಾವೇರಿ :
ಇಜಾರ ಲಕಮಾಪುರಿನ ಡಿಸಿ ಆಪೀಸ್ ರೋಡಿನ ತುಂಗಾ ಮೇಲ್ದಂಡ ಸಮೀಪದ ಶ್ರೀ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಂಘದ ಕಛೇರಿಯಲ್ಲಿ ಸಂಘದ ಪದಾಧಿಕಾರಿಗಳು ವಿನಾಯಕ ,ಗಣೇಶ ಪ್ರತಿಷ್ಠಾನ ಮಾಡಿ ಪೂಜೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಸಿದ್ಲಿಲಿಂಗಪ್ಪ ವ್ಹಿ ಅಜ್ಜಣ್ಣನವರ ಮಾತನಾಡಿ ವಿಘ್ನ ನಿವಾರಕನಾದ ಗಣೇಶ ಪ್ರತಿಷ್ಠಾನವನ್ನು ಈ ವರ್ಷದಿಂದ ಪ್ರಾರಂಭ ಮಾಡಲಾಗಿದ್ದು, ನಮ್ಮ ಸಮಾಜದ ಹಾಗೂ ಸರ್ವರಿಗೂ ವಿನಾಯಕ ಒಳಿತು ಮಾಡಲಿ ಎಂಬ ಉದ್ದೇಶದಿಂದ ನಮ್ಮ ಕಛೇರಿಯಲ್ಲಿ ಗಣೇತ್ಸೋತ್ಸವ ಮಾಡಲಾಗಿದೆ. ಇದನ್ನು ಮುಂದೆ ಪ್ರತಿ ವರ್ಷವೂ ಆಚರಿಸಲು ಸಂಘ ತೀರ್ಮಾನಿಸಿದೆ ಎಂದು ಎಲ್ಲರ ಬಾಳಲ್ಲಿ ವಿನಾಯಕ ಆಶಾಕಿರಣವಾಗಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರುದ್ರಪ್ಪ ಎಂ ಹಡಪದ. ಸಮಾಜ ಮುಖಂಡ ಗಂಗಾಧರ ಅಜ್ಜಣ್ಣನವರ. ಶಿವಲಿಂಗಯ್ಯ ಹಿರೇಮಠ.ಮುರಗೇಶ ಎ.ಸೇರಿದಂತೆ ಇತರರು ಪಾಲ್ಗೊಂಡಿದ್ದರು.
