ಚರ್ಚ್ ನ ಆರೋಗ್ಯಮಾತೆ ಕಣ್ಣಿನಿಂದ ನೀರು..!

ಹರಿಹರ:

      ಕ್ರೈಸ್ತರ ಧಾರ್ಮಿಕ ಕೇಂದ್ರವಾದ ನಗರದ ಆರೋಗ್ಯ ಮಾತೆ ಚರ್ಚ್ ಆವರಣದಲ್ಲಿರುವ ಹರಕೆಯ ಆರೋಗ್ಯ ಮಾತೆ ವಿಗ್ರಹದ ಕಣ್ಣಿನಿಂದ ನೀರು ಹರಿದ ಘಟನೆ ನಡೆದಿದೆ.

      ಆವರಣದಲ್ಲಿರುವ ಮರಿಯಾ ನಿವಾಸ ಶಾಲೆ ಜವಾನ ಸೆಲೀನ್ ಎಂಬ ವ್ಯಕ್ತಿ ನಿತ್ಯದಂತೆ ಪ್ರಾರ್ಥನೆ ಮಾಡಲೆಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

      ನಂತರ ಈ ವಿಷಯವನ್ನು ಫಾದರ್ ಅಂಥೋನಿ ಪೀಟರ್‍ರ ಗಮನಕ್ಕೆ ತಂದರು. ಪೀಟರ್‍ರವರು ಹಾಗೂ ಇತರರು ಸ್ಥಳಕ್ಕೆ ಹೋಗಿ ನೋಡಿದಾಗ ಎಡಗಣ್ಣಿನಿಂದ ಕಣ್ಣೀರಿನ ಹಾಗೆ ನೀರು ತೊಟ್ಟಿಕ್ಕುತ್ತಿತ್ತು. ಅದನ್ನು ಒಂದು ಬಟ್ಟೆಯಿಂದ ಒರೆಸಿದಾಗ ಕೆಲ ಸಮಯದ ನಂತರ ಮತ್ತೆ ನೀರು ಹರಿಯಲಾರಂಭಿಸಿತಂತೆ.

     ಸುದ್ದಿ ತಿಳಿದ ಭಕ್ತರು, ಆಸಕ್ತರು ಚರ್ಚ್‍ಗೆ ಆಗಮಿಸಿ ಮೂರ್ತಿಯನ್ನು ವೀಕ್ಷಿಸಿದರು. ಸೆ.8ರಂದು ಮೇರಿ ಮಾತೆ ಉತ್ಸವ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಮಾತೆ ಕಣ್ಣಲ್ಲಿ ನೀರು ಹರಿದಿರುವುದು ಭಕ್ತರಲ್ಲಿ ಕೌತುಕ ಮೂಡಿಸಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link