ಹರಪನಹಳ್ಳಿ:
ಜಿಲ್ಲೆಯಲ್ಲಿ ಸತತ 25 ವರ್ಷಗಲಿಂದಲೂ ಲೋಕಸಭೆಗೆ ಬಿಜೆಪಿ ಪಕ್ಷ ಆಡಳಿತ ಮಾಡುತ್ತಿದ್ದರೂ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಆದ್ದರಿಂದ ಕೆಲಸ ಮಾಡದ ಬಿಜೆಪಿಗೆ ಮತಹಾಕದೇ ಮೈತ್ರಿ ಅಭ್ಯಾರ್ಥಿ ಹೆಚ್.ಮಂಜಪ್ಪವರಿಗೆ ಮತ ನೀಡಬೇಕು ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ ಹೇಳಿದರು.
ಪಟ್ಟಣದ ಆಚಾರ್ಯ ಬಡಾವಣೆಯಲ್ಲಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಪಕ್ಷದ ಸಂಘಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಒಡಂಬಡಿಕೆಯಂತೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಹೆಚ್.ಮಂಜಪ್ಪ ಜೆಡಿಎಸ್ ಕಾರ್ಯಕರ್ತರು ಮತಯಾಚನೆ ಮಾಡಿ ಕ್ಷೇತ್ರದಿಂದ ಬಿಜೆಪಿಯ ಅಧಿಕಾರವನ್ನು ಕಿತ್ತುಕೊಳ್ಳಬೇಕು. ಬಿಜೆಪಿ ಪಕ್ಷ ಪ್ರಚಾರ ಮಾಢಿ ಮತಗಳಿಸುತ್ತಿದೆ. ಸಾಧನೆ ಮಾತ್ರ ಶೂನ್ಯ. ಕೆಲಸ ಮಾಡುವವರಿಗೆ ಮತ ನೀಡಿ ಬಿಜೆಪಿಗೆ ಮತ ನೀಡಬೇಡಿ. ಕಾಂಗ್ರೆಸ್ ಪಕ್ಷದವರು ಕೇವಲ ಅಹಿಂದ ಮಂತ್ರಕ್ಕೆ ಮಣೆಹಾಕದೇ ಎಲ್ಲಾ ಜನಾಂಗದವರೊಂದಿಗೆ ಬೆರೆತು ಮತಯಾಚಣೆ ಮಾಡಬೇಕು. ಅಂತರಾಳದಲ್ಲಿ ಮಾತ್ರ ಬೇಕಾದರೆ ಅಹಿಂದ ಇರಲಿ ಎಂದು ಕಿವಿಮಾತು ಹೇಳಿದರು.
ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಬೇರು ಗಟ್ಟಿಯಾಗಿವೆ ಆದರೆ ನಾಯಕತ್ವದ ಕೊರತೆಯಿಂದ ಕ್ಷೀಣಿಸಿತ್ತು. ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತೆ ಪಕ್ಷಕ್ಕೆ ಅರಸಿಕೇರಿಯ ಎನ್.ಕೊಟ್ರೇಶ್ ದೊರಕಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಉತ್ಸಹ ಚಿಮುತ್ತಿದೆ. ಜಿಲ್ಲೆಯಲ್ಲಿ 1ಲಕ್ಷ 40 ಸಾವಿರ ಮತಗಳನ್ನು ಜೆಡಿಎಸ್ ಪಕ್ಷ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪಡೆದಿದೆ. ಈ ಮತಗಳೊಂದಿಗೆ ಕಾಂಗ್ರೆಸ್ ಪಕ್ಷದ ಮತಗಳು ಸೇರಿದರೆ ಲೋಕಸಭೆ ಚುನಾವಣೆಯಲ್ಲಿ ಗೆಲವು ಸುಲಭ. ಅಲ್ಲದೇ ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಕಲ್ಪವೃಕ್ಷವಾಗಿದೆ ಎಂದರು.
ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ವಲಸೆ ಬಂದವರಿಗೆ ಹೆಚ್ಚು ಆದ್ಯತೆ ನೀಡಿ ಗೆಲ್ಲಿಸುತ್ತಿರುವಿರಿ ಈ ಬಾರಿ ನಮಗೂ ಒಂದು ಚಾನಸ್ ಕೊಟ್ಟು ನೋಡಿ ಕ್ಷೇತ್ರದ ಅಭಿವೃದ್ಧಿ ಮಾಡಿತೋರಿಸುತ್ತೇವೆ. ಬಳ್ಳಾರಿ ಜಿಲ್ಲೆಗೆ ಹೋಗಿರುವಿರಿ ಸವಲತ್ತುಗಳನ್ನು ಪಡೆಯಿರಿ ಆದರೆ ದಾವಣಗೆರೆ ಜಿಲ್ಲೆಯ ಸಂಭಂಧ ಹಾಗೇ ಮುಂದುವರಿಯಲಿ ಎಂದರು.
ಜೆಡಿಎಸ್ ಮುಖಂಡ ಎನ್.ಕೊಟ್ರೇಶ್ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಾತಿ ಸಂಘರ್ಷದಿಂದ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಹಚ್ಚಿದ ಬೆಂಕಿಯಿಂದ ಸೋಲು ಕಂಡಿದ್ದೇನೆ. ಈ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ರೈತರಿಗೆ ನೀಡಿರುವ ಸಾಲ ಮನ್ನಾ, ಬೀದಿ ಬದಿ ವ್ಯಾಪಾರಿಗಳಿಗೆ ನೀಡಿದ ಸಾಲ ಭಾಗ್ಯ ಇನ್ನೂ ಹಲವಾರು ಕಾರ್ಯಕ್ರಮಗಳಿಂದ ಬಡಜನತೆಯ ಪರೋಪಕಾರಿಯಾಗಿದ್ದಾರೆ.
ಇವರ ಕೈ ಬಲಪಡಿಸಲು ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಣ್ಣ ಅವರು ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಬಯಸಿರಲಿಲ್ಲ. ಆದರೆ ಪಕ್ಷದ ವರಿಷ್ಠರ ತೀರ್ಮಾನದಂತೆ ಚುನಾವಣೆ ಕಣಕ್ಕೆ ಧುಮಿಕಿದ್ದೇನೆ.
ಒಳ ಜಗಳ ಎನೇ ಇದ್ದರೂ ಮೈತ್ರಿ ಧರ್ಮ ಪಾಲನೆ ಮಾಡಬೇಕು. ಕೆಲ ಹಂತದ ರಾಜಕೀಯ ಜನಪ್ರತಿನಿಧಿಯಾಗಿ ಬೆಳೆದು ಬಂದಿದೇನೆ. ಹಣವಿಲ್ಲದೇ ಜನರ ಮನ್ನಣೆಯನ್ನು ಗಳಿಸಿದ್ದೇನೆ. 20 ವರ್ಷಗಳಿಂದ ಸ್ಥಳೀಯ ಚುನಾಯಿತ ಪ್ರತಿನಿಧಿಯಾಗಿ ಪಟ್ಟಣದ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿಗಳಲ್ಲಿ ಆಡಳಿತ ಮಾಡಿದ ಅನುಭವಿದೆ. ಅಹಿಂದ ವರ್ಗಕ್ಕೆ ಎಂದು ಸೀಮಿತ ಮಾಡುವ ವರ್ಗ ಒಂದಿದೆ ಅವರಾಡುವ ಮಾತಿಗೆ ಬೀಗ ಹಾಕಲು ಸಾಧ್ಯವಿಲ್ಲ.
ಜಾತಿ ರಹಿತ, ತತ್ವ ಸಿದ್ದಂತಾಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಜೆಡಿಎಸ್ ಪಕ್ಷದ ಎನ್.ಕೊಟ್ರೇಶ್ ಬೆಂಬಲದಿಂದ ಆನೆ ಬಲ ದೊರಕಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಡುತ್ತೇವೆ. ಕ್ಷೇತ್ರದಲ್ಲೆ ಯಾವುದೇ ಕೆಲಸ ಮಾಡದ ಬಿಜೆಪಿಯನ್ನು ಮನೆಗೆ ಕಳಿಸಿ ಬದಲಾವಣೆ ಮಾಡಬೇಕಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡರಾದ ಗಿರಿರಾಜರೆಡ್ಡಿ, ಪಾಟೇಲ್ ಬೆಟ್ಟನಗೌಡ, ಜಿಲ್ಲಾಧ್ಯಕ್ಷ ಚಿದಾನಂದಪ್ಪ, ನಾಗಣ್ಣ, ಕೆ.ಪರಶುರಾಮಪ್ಪ ಹಾಗೂ ಇತರರು ಮಾತನಾಡಿದರು.
ಜೆಡಿಎಸ್ ಮುಖಂಡರಾದ ಡಾ.ಮಂಜುನಾಥ ಉತ್ತಂಗಿ, ಶಿಕಾರಿ ಬಾಲಪ್ಪ, ಇಮ್ರಾನ್, ಸುರೇಶ್, ಶಿರಹಟ್ಟಿ ದಂಡೆಪ್ಪ, ಶೀಲಮ್ಮ, ಗಣೇಶ್ ದಾಸಕರಿಯಪ್ಪ, ಹೂವಿನಮಡಗು ಚಂದ್ರಪ್ಪ, ಎಸ್.ಆರ್.ತಿಮ್ಮಣ್ಣ, ಮೈದೂರು ರಾಮಪ್ಪ, ಎ.ಮೂಸಸಾಬ್, ಜಾಕೀರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜೀನಪ್ಪ, ಮುಖಂಡರಾದ ಜಿ.ಪಂ.ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪ್ರಕಾಶ ವಕೀಲ, ಸಾಬಳ್ಳಿ ಜಂಬಣ್ಣ, ಎಂ.ವಿ.ಅಂಜೀನಪ್ಪ, ವೆಂಕಟೇಶ್ ವಕೀಲ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
