ಜಗಳೂರು ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು- ಸಚಿವ ಎಂ.ಆರ್.ಶ್ರೀನಿವಾಸ್

ಜಗಳೂರು:

    ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಹಿಂದುಳಿದ ತಾಲ್ಲೂಕು ಆಗಿರುವ ಜಗಳೂರು ಅಭಿವೃದ್ಧಿಗೆ ವಿಶೇಷ ಹೊತ್ತು ನೀಡಲಾಗುವುದೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಶ್ರೀನಿವಾಸ್(ವಾಸು) ಅವರು ಹೇಳಿದರು.

    ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ತಾಲ್ಲೂಕಿನ ಬರನಿರ್ವಹಣೆ ಮತ್ತು ಗೋಶಾಲೆಗಳ ಭೇಟಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕಳೆದೆರಡು ದಿನ ಗಳಿಂದ ನಡೆದಿರುವ ಅಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳು ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಜುಲೈ ಮೊದಲ ವಾರ ದಲ್ಲಿಯೇ ಇತ್ಯಾರ್ಥ ಪಡಿಸಿ ಸಮಸ್ಯೆ ಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

     ಸಚಿವರು ಸಂಸದರು ಗ್ರಾಮಗಳ ವೀಕ್ಷಣೆಬಂದಾಗ ಸಣ್ಣ ಪುಟ್ಟ ಸಮಸ್ಯೆಗಳನ್ನು ಜನರು ಹೇಳುವಂತ್ತಾದರೆ ಇಲ್ಲಿಯವರೆಗೆ ಅಧಿಕಾರಿಗಳೇನೂ ಕತ್ತೆ ಕಾಯುತ್ತಿದ್ದೀರಾ ಎಂದು ತರಾಟೆ ತೆಗೆದು ಕೊಂಡ ಅವರು ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಸರಿಯಾದ ರೀತಿಯಲ್ಲಿ ಜನರಿಗೆ ಸ್ಪಂಧಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ.

     ನಿಮ್ಮೆಲ್ಲ ಕಾರ್ಯಗಳು ಪ್ರಗತಿ ವರಧಿಯಲ್ಲಿದೆ ಆದರೆ ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿಲ.್ಲ ಮುಂದಿನ ಕೆಡಿಪಿ ಸಭೆಯ ಒಳಗಾಗಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಆಯಾಯ ಅಧಿಕಾರಿಗಳು ನೇರ ಹೊಣೆ ಎಂದರು.

       ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಬೋರ್‍ವೆಲ್ ಕೊರೆಯಿಸಿ ತಿಂಗಳು ಕಳೆದರು ಮೋಟಾರ್ ಪಂಪ್ ಅಳವಡಿಸಿಲ್ಲ. ಬಹುಗ್ರಾಮ ಕುಡಿಯುವನೀರಿನ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಮೊದಲು ಅದನ್ನು ಜಾರಿಗೆ ತನ್ನಿ ಕೇಂದ್ರದಿಂದ ಬೇಕಾದ ಅನುಧಾನವನ್ನು ಕೊಡಿಸುತ್ತೇನೆ. ವಿಶೇಷ ವಾಗಿ ಜಗಳೂರು ತಾಲ್ಲೂಕಿನ ಅಭಿವೃದ್ಧಿಗೆ ಅಧಿಕಾರಿಗಳು ಹೆಚ್ಚುಒತ್ತು ನೀಡಿ ಕಾರ್ಯಗತವಾಗಬೇಕು. ಕೇಂದ್ರ ಸರಕಾರದ ಹಲವು ಯೋಜನೆಗಳು ರೈತರ ನೆರವಿಗೆ ಬರುವಂತಾಗಿವೆ ಅವುಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗ ಬೇಕೆಂದರು.

       ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಇಂಜಿ ನಿಯರ್‍ಗಳ ಕಾರ್ಯವೈಖರಿ ಅತ್ಯಂತ ಕಳಪೆ ಮಟ್ಟದಲ್ಲಿದ್ದು ಬಹುತೇಕ ಹಣ ದುರಪಯೋಗವಾಗಿದೆ. ಮೊದಲು ಅದನ್ನು ತನಿಖೆಮಾಡಿ ತಪ್ಪಿತಸ್ತರ ವಿರುದ್ಧ ಜಿಲ್ಲಾಧಿ ಕಾರಿಗಳು ಕ್ರಮಕೈಗೊಳ್ಳಲಿ ಎಂದರು.

      ಜಿಲ್ಲೆಯಲ್ಲಿ ಮೊದಲ ಭಾರಿಗೆ ಉಸ್ತುವಾರಿ ಸಚಿವರು ಜಗಳೂರು ತಾಲ್ಲೂಕಿನ ಬಗ್ಗೆ ಕಾಳಜಿಯನ್ನು ವಹಿಸಿದ್ದಾರೆ ಅವರ ಸಲಹೆ ಸೂಚನೆ ಯಂತೆ ಕಾರ್ಯನಿರ್ವಹಿಸಬೇಕು ಜೊತೆಗೆ ಸಂಸದರ ಸಹಕಾರದಿಂದ ತಾಲ್ಲೂಕಿನ ಅಭಿವೃದ್ಧಿಗೆ ಅನುಧಾನವನ್ನು ನೀಡುತ್ತಿದ್ದು ಇಂತಹ ಉತ್ತಮಕಾರ್ಯಕ್ಕೆ ತಾಲ್ಲೂಕು ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಗುವುದು ಎಂದರು.

       ಜಿಲ್ಲಾಧಿಕಾರಿ ಶಿವಮೂರ್ತಿ ಮಾತನಾಡಿ ತಾಲ್ಲೂಕಿನಲ್ಲಿ 76 ಗ್ರಾಮಗಳು ಸಮಸ್ಯಾತ್ಮಾಕವಾಗಿದ್ದು ಈಗಾಲೇ ಪ್ರತಿದಿನ 279 ಟ್ಯಾಂಕರ್‍ಗಳಲ್ಲಿ ನೀರನ್ನು ಪೂರೈಸಲಾಗುತ್ತಿದೆ 37 ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ 80 ಹಳ್ಳಿಗಳಲ್ಲಿ ಸಮಸ್ಯೆಗಳಿರುವುದು ಕಂಡುಬಂದಿದೆ. ಟಾಸ್ಕ್‍ಸ್ಪೋರ್ಷ್ ಯೋಜನೆಯಡಿ 243 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಕುಡಿಯುವ ನೀರಿನ ಸಂಬಂಧಿಸಿದಂತೆ ಅಗತ್ಯವಾದ ಅನುಧಾನವಿದ್ದು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

         ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ್ಯೆ ಶೈಲಜಾ ಬಸವರಾಜ್, ಸದಸ್ಯರಾದ ಮಂಜಣ್ಣ, ಶಾಂತ ಕುಮಾರಿ, ಸಿಇಓ ಬಸವರಾಜೇಂದ್ರ, ಪೋಲೀಸ್ ವರಿಷ್ಠಾಧಿಕಾರಿ ಚೇತನ್ ಕುಮಾರ್, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಹುಲ್ಲಮನಿ ತಿಮ್ಮಣ್ಣ, ಇಓ ಜಾನಕಿರಾಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link