ಕೊಟ್ಟೂರು :
ತೇರುಬಯಲು ಬಸವೇಶ್ವರ ಯುವಕ ಸಂಘದಿಂದ 31 ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಕುಂಭದ್ರೋಣ ಮಳೆಯಿಂದ ಮಡಿಕೇರಿ, ಕೊಡಗು ಹಾಗೂ ಕೇರಳದಲ್ಲಿ ಹಿಂದೆಂದೂ ಕಂಡರಿಯಾದ ರೀತಿಯಲ್ಲಿ ಹಾನಿಗೊಳಗಾದ ದೃಶ್ಯಗಳ ಕುರಿತು ವಿವಿಧ ಆವಾತರಗಳಲ್ಲಿ ವಿನಾಯಕನಿದ್ದಾನೆಂಬ ದ್ವನಿ ಮತ್ತು ಬೆಳಕಿನ ವಿಷೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪಟ್ಟಣದಲ್ಲಿ ಗುರುವಾರ ಎಪಿಎಂಸಿ ಆವರಣದಲ್ಲಿ ವರ್ತಕರ ಸಮಿತಿಯಿಂದ ಗೌರಿ ಗಣೇಶ ಉತ್ಸವದಲ್ಲಿ ವಿಷೇಶ ಬಿಲ್ವಾರ್ಚನೆಯ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ನಂಬಿದ ಭಕ್ತರ ಇಷ್ಟಾರ್ಥಗಳನೆಲ್ಲಾ ನಿರ್ವಿಘ್ನವಾಗಿ ವಿಘ್ನೆಶ್ವರ ನೆರವೆರಿಸಲಿ ಎಂದು ಡೊಣ್ಣೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಚಾರ್ಯರ ಸ್ವಾಮಿ ಆಶಿರ್ವಾದಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್.ವೀರೇಶ, ಚಾಪಿ ಚಂದ್ರಪ್ಪ, ಕೆಸಿಟಿ. ಕೊಟ್ರಯ್ಯ, ಜೇಟ್ಮಲ್,ರಾಂಪುರದ ವಿವೇಕಾನಂದ, ಕಾಮಶೆಟ್ಟಿ ಕೊಟ್ರೇಶ್, ಪೋರಾಜ್ಜ, ಮಂಜುನಾಥ, ಜಿ.ವೀರೇಶ್‍ಎಂ.ಶಾಂತಪ್ಪ ಆರ್ಚಕರಾದ ಚಿದಂಬರ ಭಟ್ ಮುಂತಾದವರು ಇದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ