ಜಾತಿಬೀಜ ಬಿತ್ತುವವರಿಗೆ ಬುದ್ದಿಕಲಿಸಿ

ಹಾನಗಲ್ಲ:

                  ತಾಲೂಕಿನ ವಿವಿಧ ಗ್ರಾಮಗಳಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮತ ಪ್ರಚಾರ ಕೈಗೊಂಡು ಮಾತನಾಡಿದರು  ಕಾಂಗ್ರೇಸ್ ಪಕ್ಷದವರು ಐದು ವರ್ಷದ ಅವಧಿಯಲ್ಲಿದ್ದಾಗ ಈ ಕ್ಷೇತ್ರದಲ್ಲಿ ಏನು ಮಾಡಿಲ್ಲಾ. ಅಧಿಕಾರ ಇದ್ದಾಗ ಹಾನಗಲ್ಲ ತಾಲೂಕನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಜಾತಿಯಂತ ವಿಷ ಬೀಜವನ್ನು ಬಿತ್ತುವ ಮೂಲಕ ಧರ್ಮವನ್ನು ಒಡೆಯುವಂತ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

ಹಾನಗಲ್ಲ ಉಪಚುನಾವಣೆ ಹಿನ್ನಲೆ ತಾಲೂಕಿನ ಮಕರವಳ್ಳಿ, ಹೊಂಕಣ, ತಿಳವಳ್ಳಿ, ಬ್ಯಾತನಾಳ, ಕುಸನೂರ, ಬ್ಯಾಗವಾದಿ, ಹಾಗೂ ಉಪ್ಪಣಸಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಚುನಾವಣಾ ಪ್ರಚಾರದಲ್ಲಿ ಕೈಗೊಂಡು ಮಾತನಾಡಿದ ಅವರು, ಪಕ್ಕದ ತಿಳವಳ್ಳಿ ಏತ ನೀರಾವರಿ ಯೋಜನೆಗೆ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯವರಿದ್ದಾಗ ನಾನು ನೀರಾವರಿ ಸಚಿವನಾಗಿದ್ದೆ ಆಗ ಸಿಎಂ ಉದಾಸಿಯವರು ಲೋಕೊಪಯೋಗಿ ಸಚಿವರಿದ್ದ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ತಿಳವಳ್ಳಿ ಏತ ನೀರಾವರಿಗೆ ಚಾಲನೆ ನೀಡಿದ್ದಾರೆ.
ನೀರಾವರಿ ಯೋಜನೆಗೆ ಕಾಂಗ್ರೇಸ್‍ನವರು ಸುಮಾರು 513 ಕೋಟಿ ರೂ. ಯೋಜನೆ ಮಾಡುವುದಾಗಿ ಹೇಳಿ ಬಂದಿದ್ದರು, ಆದರೆ ಲೆಕ್ಕ ನೋಡಿದ ಮೇಲೆ ಅದರಲ್ಲಿ 425 ಕೋಟಿ ರೂ. ಸಿ.ಎಂ.ಉದಾಸಿಯವರು ಅನುಮೊದÀನೆ ಮಾಡಿದಂತ ಯೋಜನೆಯಿತ್ತು. ಆದರೆ ಕಾಂಗ್ರೇಸ್ಸಿನವರು ಚಿನ್ನದ ತಟ್ಟೆಯಲ್ಲಿ ಊಟಕೊಡುವ ಬರವಸೆ ನೀಡುತ್ತಾರೆ ಹೊರತು ಯಾವ ಒಂದು ಯೋಜನೆಯುತಾಲೂಕಿನಲ್ಲಿ ಆಗಿಲ್ಲ ಎಂದರು.
ಕೊವಿಡ್ ಸಂಧರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ನಾವು ಎದುರಿಸಿದ್ದೇವೆ, ಹಾನಗಲ್ಲ ತಾಲೂಕಿನಲ್ಲಿ ಸಂಸದ ಶಿವಕುಮಾರ ಉದಾಸಿಯವರ ನೇತೃತ್ವದಲ್ಲಿ 15 ಸಾವಿರಕ್ಕಿಂತ ಹೆಚ್ಚು ಕಿಟ್‍ಗಳನ್ನು ಬಡವರಿಗೆ ಹಂಚಿದ್ದೇವೆ. ಶೇ.80 ರಷ್ಟು ಮೊದಲನೆ ಹಂತದ ವ್ಯಾಕ್ಸೀನೆಷÀನ್ ಲಸಿಕೆಯನ್ನ ನೀಡಿದ್ದೆವೆ. ಈಡೀ ದೇಶದಲ್ಲಿ ಉಚಿತ ಲಸಿಕೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೊದಿಯವರು ನಮ್ಮ ಆರೋಗ್ಯದ ಜೊತೆಗೆ ದೇಶದ ಸಂರಕ್ಷಣೆ ಮಾಡಿರುವ ಬಗ್ಗೆ ಇಂದು ಸ್ಮರಿಸಬೇಕಿದೆಬಂದುಗಳೆ ಎಂದರು.
ಈ ಸಂಧರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಇಂಧನ ಸಚಿವ ಸುನೀಲಕುಮಾರ ಅಭ್ಯರ್ಥಿ ಶಿವರಾಜ ಸಜ್ಜನರ ಮಾತನಾಡಿದರು
ಪ್ರಚಾರದಲ್ಲಿ ಮಾಜಿ ಸಚಿವ ಆರ್.ಶಂಕರ, ಚನ್ನಗೀರಿ ತಾಲೂಕಿನ ಶಾಸಕ ವಿರಪಾಕ್ಷಪ್ಪ ಮಾಡಾಳು, ಮಾಜಿ ಶಾಸಕ ಯು.ಬಿ.ಬಣಕಾರ, ಬಸವರಾಜ ಹಾದಿಮನಿ ಇದ್ದರು.

 

Recent Articles

spot_img

Related Stories

Share via
Copy link