ದೆಹಲಿ; ಜಾರಕಿ ಹೊಳಿ ಸಹೋದರರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ತಿಳಿಸಿದರು.
ಬೆಳಗಾವಿಯ ಸಚಿವ ರಮೇಶ್ ಜಾರಕಿ ಹೊಳಿ ಮತ್ತು ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವರ ಆಂತರಿಕ ಕಲಹದಿಂದಾಗಿ ಉಂಟಾಗಿರುವ ಭಿನ್ನಾಬಿಪ್ರಾಯಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ದಿನೇಶ್‍ಗುಂಡೂರಾವ್ ಅವರು, ಈ ಆಂತರಿಕ ಬಿಕ್ಕಟ್ಟಿನಿಂದಾಗಿ ಸರ್ಕಾರದ ಮೇಲೆ ಕಾರ್ಮೋಡ ಕವಿದಿಲ್ಲ. ಪಕ್ಷಕ್ಕೆ ತೊಂದರೆ ಕೊಡುವಂತಹ ಕೆಲಸ ರಮೇಶ್ ಜಾರಕಿ ಹೊಳಿ ಮಾಡುವುದಿಲ್ಲ. ಯಾರೇ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡಬಾರದು. ಇದಕ್ಕೆ ಸಂಬಂದಿಸಿದಂತೆ ಕೆಲ ವಿಚಾರ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅವರು ಹೇಳಿದರು.







