ಜೆಡಿಎಸ್ ಕಾರ್ಯಕರ್ತರ ವರ್ತನೆಗೆ ಸದನದಲ್ಲಿ ಬಿಜೆಪಿ ಆಕ್ರೋಶ…!!!

ಬೆಂಗಳೂರು

       ಆಪರೇಷನ್ ಕಮಲ ಕಾರ್ಯಾಚರಣೆ ಆಡಿಯೋದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಟೀಕೆ ಮಾಡಿದ್ದ ಆಪಾದನೆ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ಹಾಸನದ ಮನೆ ಮುಂದೆ ಧರಣಿ ನಡೆಸಿ ಕಲ್ಲು ತೂರಾಟ ಮಾಡಿ ದಾಂಧಲೆ ಎಬ್ಬಿಸಿದ್ದ ಜೆಡಿಎಸ್ ಕಾರ್ಯಕರ್ತರ ವರ್ತನೆಗೆ ವಿಧಾನಸಭೆಯಲ್ಲಿಂದು ಭಾರೀ ಆಕ್ರೋಶ ವ್ಯಕ್ತವಾಯಿತು.

      ಮಧ್ಯಾಹ್ನ ಸದನ ಸೇರುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಆಡಳಿತ ಶಾಸಕರು ಸಹ ಪ್ರತಿಯಾಗಿ ದಿಕ್ಕಾರ ಮೊಳಗಿಸಿದರು. ಆರೋಪ, ಪ್ರತ್ಯಾರೋಪಗಳು ವಿನಿಮಯವಾದವು.

       ಮಾಜಿ ಗೃಹ ಸಚಿವ, ಶಾಸಕ ಆರ್. ಅಶೋಕ್, ನಮ್ಮಶಾಸಕ ಪ್ರೀತಂ ಗೌಡ ಅವರ ಮನೆಯ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಇದು ಸರಿಯಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

       ಈ ಆರೋಪಕ್ಕೆ ತಿರುಗಿ ಬಿದ್ದ ಆಡಳಿತ ಪಕ್ಷದಿಂದ ಶಾಸಕರ ಖರೀದಿ ಮಾಡುವವರು ಗೂಂಡಾಗಿರಿ ಬಗ್ಗೆಮಾತಾಡುತ್ತಾರೆ. ಬಿಜೆಪಿಗೆ ಧಿಕ್ಕಾರ. ಡೌನ್ ಡೌನ್ಬಿಜೆಪಿ ಎಂದು ಘೋಷಣೆ ಕೂಗಿದರು.

      ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ನಮ್ಮ ಪಕ್ಷದ ಕಾರ್ಯಕರ್ತರಷ್ಟೇ ಅಲ್ಲದೇ ಪ್ರೀತಮ್ ಗೌಡ ಅವರ ತಾಯಿಯ ಮೇಲೂ ಹಲ್ಲೆನಡೆಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಇದನ್ನುಯಾರೂ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಈ ಬೆಳವಣಿಗೆ ನಡೆದಿದೆ ಎಂದು ಆಪಾದಿಸಿದರು.ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರಿಂದ ಆರೋಪ, ಪ್ರತ್ಯಾರೋಪ ತೀವ್ರಗೊಂಡಿತು. ಈ ಬೆಳವಣೆಯಿಂದ ಬೇಸರಗೊಂಡ ಸಭಾಧ್ಯಕ್ಷ ರಮೇಶ್ ಕುಮಾರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap