ಡಾ.ಬಾಬು ಜಗಜೀವನ್ ರಾಂ ಜಯಂತಿ ಆಚರಿಸದೆ ಅವಮಾನಿಸಿದೆ : ದಲಿತ ಸಂಘರ್ಷ ಸಮಿತಿ

ಬಳ್ಳಾರಿ

      ಈ ದೇಶ ಕಂಡಂತಹ ರಾಷ್ಟ್ರ ನಾಯಕರಲ್ಲಿ ಒಬ್ಬರಾದ ಅಪ್ರತಿಮ ಹೋರಾಟಗಾರ ಮತ್ತು ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಜಯಂತಿಯನ್ನು ಕುರುಗೋಡು ತಹಶಿಲ್ದಾರರ ತಾಲುಕು ಕಛೇರಿಯಲ್ಲಿ ಆಚರಣೆ ಮಾಡದೇ ತಹಶಿಲ್ದಾರ ಪದ್ಮ ಮತ್ತವರ ಸಿಬ್ಬಂದಿ ಯವರು ಅವಮಾನಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ (ವೆಂಕಟೇಶ್ ಬಣ) ದ ಜಿಲ್ಲಾ ಅದ್ಯಕ್ಷ ಮಹೇಶ್ ಕುರುವಳ್ಳಿ ಆರೋಪಿಸಿದರು.

      ಜಗಜೀವನ್ ರಾಂ ಜಯಂತಿಯನ್ನು ಆಚರಣೆ ಮಾಡದೇ ಇರುವುದರಿಂದ ಸೋಮವಾರದಂದು ವಿವಿಧ ಸಂಘಟನೆಯ ಮುಖಂಡರು ಗಳು ಹಾಗೂ ಸದಸ್ಯರುಗಳು ಅಪಾರ ಜನಸಂಖ್ಯೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅವರು ಜಿಲ್ಲಾಧಿಕಾರಿ ಜೊತೆಯಲ್ಲಿ ಚರ್ಚಿಸಿ ದಲಿತ ನಾಯಕ ಎಂಬ ಒಂದೇ ಕಾರಣದಿಂದ ತಹಶಿಲ್ದಾರ ಪದ್ಮ ಮೆಡಮ್ ಜಯಂತಿ ನಿರಾಕರಣೆ ದೇಶದ ಜನರಿಗೆ ಅವಮಾನ ಮಾಡಿದ ಪಡಿಸಿದ್ದಾರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಮಾನತು ಗೋಳಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.

      ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ಬಾಬು ಜಗಜೀವನ್ ರಾಂ ರಾಷ್ಟ್ರದ ಆರ್ಥಿಕ ದಿವಾಳಿತನದ ಸಂದರ್ಭಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಯಶಸ್ಸು ಕಂಡುಕೊಂಡಿ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದನ್ನು ಪಡೆದು ಈ ದೇಶಕ್ಕೆ ಕೀರ್ತಿ ತಂದು ಕೊಟ್ಟಂತ ಮಹಾನ್ ಚೇತನಕ್ಕೆ ಜಾತಿಯ ಬಣ್ಣ ಹಚ್ಚಿ ಕೋಮು ಗಲಭೆಗೆ ಪ್ರೋತ್ಸಾಹ ನೀಡುವ ಕುಮ್ಮಕ್ಕು ಮಾಡುತ್ತಿದ್ದಾರೆ, ವಿಷಯ ತಿಳಿದ ನಾವೆಲ್ಲರೂ ತಹಶಿಲ್ದಾರರ ಬಳಿಗೆ ತೆರಳಿ ವಿಚಾರಿದಾಗ ನಮಗೆ ಅಧಿಕೃತ ಯಾವುದೇ ಆದೇಶ ಬಂದಿಲ್ಲ ಎನ್ನುವ ಉತ್ತರ ನೀಡಿದರು.

      ಇದರಿಂದ ನಮಗೆ ನೋವು ಉಂಟಾಗುವ ರೀತಿಯಲ್ಲಿ ನಡೆದುಕೊಂಡರು, ಎಂದು ಅವರ ವಿರುದ್ಧ ಹಾರಿಹಾಯ್ದರು. ಅವರು ತಾಲ್ಲೂಕಿನ ದಂಡ ಅಧಿಕಾರಿಗಳು ಸಮಾಜದ ಶಾಂತಿ ಕಾಪಾಡುವ ಬದಲು ಶಾಂತಿ ಭಂಗ ತರುವ ಮೂಲಕ ಜಾತಿ ಪದ್ದತಿಯು ಎತ್ತಿ ಹಿಡಿಯುವ ಮುಖಾಂತರ ವಿಷ ಬೀಜ ಬಿತ್ತಿ ಸಸಿಗಳೆಂಬ ಜನರನ್ನು ಬೆಳೆಸುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಕಿಡಿಕಾರಿದರು,

       ಇದು ಅಲ್ಲದೇ ಬಾದನಹಟ್ಟಿ, ಯರ್ರಂಗಳಿ,ಗೇಣಿಕಿಹಾಳ್ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕೂಡ ಜಯಂತಿ ಆಚರಿಸಿಲ್ಲ ಇವರುಗಳ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಸಮಿತಿ ರಚಿಸಿ ಕೂಲಂಕುಷವಾಗಿ ತನಿಖೆ ನಡೆಸಿ ಷಡ್ಯಂತ್ರ ಮಾಡಿದವರಿಗೆ ಸೂಕ್ತವಾದ ರೀತಿಯಲ್ಲಿ ಕ್ರಮವನ್ನು ಜರುಗಿಸಬೇಕೆಂದು ಮಾದ್ಯಮದ ಮುಖಾಂತರ ಒತ್ತಾಯಿಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಹಾಗೂ ದಲಿತ ನಾಯಕರು ಬುದ್ದಿ ಜೀವಿಗಳು ಹಲವು ಸಮುದಾಯದ ಹಿರಿಯರು ಭಾಗವಹಿಸಿದ್ದರು

      ತಹಶಿಲ್ದಾರರ ನ್ನು ಪೋನ್ ಮುಖಾಂತರ ವಿಚಾರಿಸಿ ಮಾತನಾಡಿದಾಗ ಇಲ್ಲಿ ಹಿಂದೆ ಬಸವರಾಜ್ ಎಂಬುವವರು ಗ್ರೇಡ್-2 ತಹಶಿಲ್ದಾರರು ಇದ್ದು ಅವರಿಗೆ ಗ್ರೇಡ್-1 ಕೂಡ ಪ್ರಬಾರ ನೀಡಲಾಗಿತ್ತು, ಅದುದರಿಂದ ನಾನು ಬಂದಾಗಿನಿಂದ ಜನರಿಗೆ ತೊಂದರೆ ಯಾಗದಂತೆ ಕೆಲಸ ನಿರ್ವಹಣೆ ಮಾಡುವ ಮುಖೇನ ಜನ ಮನ್ನಣೆ ಗಳಿಸಿದ್ದೇನೆ, ಅದಕ್ಕಾಗಿ ನನ್ನ ವಿರುದ್ಧ ಎತ್ತಿ ಕಟ್ಟಿ ಜಯಂತಿ ಆಚರಣೆ ಮಾಡಿದರು ಕೂಡ ಈ ರೀತಿಯಲ್ಲಿ ಆರೋಪ ಮಾಡುತ್ತಾರೆ ಎಂದರು, ನಾನು ಇಲ್ಲಿ ಇರುವುದು ಅವರಿಗೆ ಇಷ್ಟವಿಲ್ಲ
ಅವರೇ ಈ ತರಹದ ಷಡ್ಯಂತ್ರ ಮಾಡುಸುತ್ತಿದ್ದಾರೆ, ಪ್ರಜಾ ಪ್ರಗತಿ ಪತ್ರಿಕೆ ನೀಡಿದ ವಿವರ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link