ಹಾವೇರಿ :
ಶಿಕ್ಷಕರು ದೇಶದ ಅಭಿವೃದ್ಧಿಯ ಸಂಕೇತವಾಗಿ ಹಾಗೂ ಮಕ್ಕಳನ್ನು ಸತ್ಪ್ರಜೆಯನ್ನಾಗಿ ಮಾಡುವ ಕಾಯಕದಂತೆ ಸೇವೆ ಮಾಡುವವರಾಗಿದ್ದಾರೆ ಎಂದು ಟಿಎಂಎಇಎಸ್ ದೈಹಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿಜಿ ಪೂಜಾರ ಹೇಳಿದರು. ನಗರದ ಟಿಎಂಎಇಎಸ್ ದೈಹಿಕ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಆಯೋಜಿಸಿದ ಡಾ || ಸರ್ವಪಲ್ಲಿ ರಾಧಾಕೃಷ್ಣನ್ ಅವರ 130 ನೇ ಜನ್ಮ ದಿನೋತ್ಸವದ ಶಿಕ್ಷಕರ ದಿನಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ನವರು ಎಲ್ಲರಿಗೂ ಆದರ್ಶದಾಯಕ ವ್ಯಕ್ತಿತ್ವ ಉಳ್ಳವರಾಗಿದ್ದರು. ದೇಶಕ್ಕೆ ನಿಸ್ವಾರ್ಥ ಸೇವೆ ಮನೋಭಾವದವರಾಗಿ ಅವರ ಜನ್ಮ ದಿನವನ್ನು ದೇಶ ಕಟ್ಟುವ ಕೆಲಸ ಮಾಡುವ ಶಿಕ್ಷಕರ ಹೆಸರಿನಲ್ಲಿ ಆಚರಿಸಿ ಎಂದು ಹೇಳುವ ಮೂಲಕ ಶ್ರೇಷ್ಠ ಕಾಯಕ ಮಾಡುವ ಶಿಕ್ಷಕರ ದಿನಾಚರಣೆ ಮಾಡುವಂತೆ ಹೇಳಿದರು.ತಾವು ಮುಂದಿನ ಶಿಕ್ಷಕರಾಗುವವರು ಉತ್ತಮ ನಡತೆಯೊಂದಿಗೆ ಆದರ್ಶ ಗುಣಗಳನ್ನು ಬೆಳಿಸಿಕೊಳ್ಳಬೇಕಾಗುತ್ತದೆ. ಸಮಾಜ ಶಿಕ್ಷಕರನ್ನು ಗೌರವ ಭಾವದಿಂದ ನೋಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯ ತಮ್ಮ ಕೈಯಲ್ಲಿ ಇದೆ. ಉತ್ತಮ ಸೇವೆಯ ನಿಮ್ಮಿಂದ ಸಮಾಜಕ್ಕೆ ದೊರೆಯುವಂತಾಗಲಿ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಸಂದೇಶ ಪಾಲನೆಯಾಗಲಿ ಎಂದು ಸಿಜಿ ಪೂಜಾರ ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಪಿಎಸ್ ತಟ್ಟಿ.ಎಂಕೆ ಪೂಜಾರ ಸಿಬ್ಬಂದಿಗಳಾದ ಕೆಎಂ ಅಂಬಗೇರ.ಕೆಎಸ್ ಮಟ್ಟಿಮಟ್ ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಧಿಗಳು ಭಾಗವಹಿಸಿದ್ದರು.