ಡಿ ಆರ್ ಪಾಟೀಲರ ಪರವಾಗಿ ಮಿಂಚಿನ ಮತಯಾಚನೆ

ಹಾವೇರಿ :

        ನಗರದ ವಾರ್ಡ ನಂ 12.13 ಮತ್ತ್ತು 16 ರಲ್ಲಿ ಶಿವಬಸವ ನಗರ ಮತ್ತು ಶಿವಯೋಗಿ ನಗರ ಭಾಗದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾದ ಡಿ ಆರ್ ಪಾಟೀಲ ಪರ ನೇತೃತ್ವದಲ್ಲಿ ನೂರಾರು ಯುವಕರು ಮಹಿಳೆಯರು ಹಾಗೂ ಕಾರ್ಯಕರ್ತರು ಸೇರಿ ಮನೆ ಮನೆಗೆ ತೆರಳಿ ಮಿಂಚಿನ ಮತಯಾಚನೆ ನಡೆಸಿದರು.

       ಯುವ ನಾಯಕರು ತೆರಳಿ ಕಾಂಗ್ರೆಸ್ ಪಕ್ಷವು ಜ್ಯಾತ್ಯಾತಿತತೆಯ ಸಿದ್ದಾಂತವನ್ನು ಹೊಂದಿದ್ದು, ಇದರ ನೆಲೆಗಟ್ಟಿನ ಮೇಲೆ ಸಾರ್ವಜನಿಕರಿಗೆ ಉಪಯೋಗವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವನ್ನು ಮಾಡಿದೆ ಎಂದು ತಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೇಸ್ ಪಕ್ಷ ಅಭ್ಯರ್ಥಿ ಡಿ ಆರ್ ಪಾಟೀಲರಿಗೆ ನೀಡವಂತೆ ಪ್ರತಿ ಮನೆಮನೆಗೆ ತೆರಳಿ ಮತಯಾಚಿಸಲಾಯಿತು.

       ಈ ಸಂದರ್ಭದಲ್ಲಿ ಸಂಜೀವ ಕುಮಾರ ನೀರಲಗಿ, ಲಿಂಗರಾಜ ಶಿವಣ್ಣವರ, ಶ್ರೀಧರ ಆನವಟ್ಟಿ, ಸಂಗಪ್ಪ ಅಂತಾಪುರ, ಜಗಧೀಶ ಬಸೇಗಣ್ಣಿ, ಪ್ರಭು ಬಿಷ್ಟನಗೌಡ್ರ, ಸಿ ಎಸ್. ಲಕ್ಷೇಶ್ವರಮಠ, ಬಸವರಾಜ ಬಳ್ಳಾರಿ, ಉಳಿಯಪ್ಪ ಹಲಗಣ್ಣವರ, ಅತಾಮುಲಾ ಖಾಜಿ, ಮುಗುದೂರ, ಅಪ್ಪಾಲಾಲ ಯಾದವಾಡ, ಜಾಬಿನ್, ದಾವಲಶಾಬ ಮುಗದೂರ. ಡಾ. ಸಂಜಯ ಡಾಂಗೆ ಮಮತಾ ಜಾಬಿನ್. ಮಲೇಶ ಪಟ್ಟಣಶೇಟ್ಟಿ ಇನ್ನೂ ಮುಂತಾದ ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link