ಹಾವೇರಿ :
ನಗರದ ತರಕಾರಿ ಮಾರುಕಟ್ಟೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ನೇತೃತ್ವದಲ್ಲಿ ಹಾವೇರಿ ಲೋಕಸಭಾ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಅವರ ಪರವಾಗಿ ಭರ್ಜರಿ ಮತಯಾಚನೆ ಮಾಡಿದರು. ಮುಖಂಡ ಸಂಜೀವಕುಮಾರ ನೀರಲಗಿ ಮಾತನಾಡಿ ಈ ಬಾರಿ ಕಾಂಗ್ರೇಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬರಲಿದೆ. ಬಡವರ ಬಗ್ಗೆ ಕಾಂಗ್ರೇಸ್ ಪಕ್ಷ ಮಾತ್ರ ಕಾಳಜಿ ಹೊಂದಿದ್ದು, ದೇಶದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಗಾಂಧಿವಾದಿ,ಗ್ರಾಮೀಣಾಭಿವೃದ್ದಿಯ ಕನಸುಗಾರರಾದ ಡಿಆರ್ ಪಾಟೀಲ ಅವರಿಗೆ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಜಯಶಾಲಿಯಾಗಿ ಮಾಡುವಂತೆ ಮತಯಾಚನೆ ಮಾಡಿದರು. ಪ್ರಚಾರದಲ್ಲಿ ಶಿವಕುಮಾರ ತಾವರಗಿ,ಪ್ರಭುಗೌಡ ಭಿಷ್ಟನಗೌಡ್ರ,ರಾಜು ಮಧುರಕರ.ನಾಗರಾಜ ಮಾಳಗಾವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
