ಶಿಗ್ಗಾವಿ :
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಪಗಟ್ಟಿಯಲ್ಲಿ ನೆಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಗಂಜಿಗಟ್ಟಿಮಠ ವಿಧ್ಯಾರ್ಥಿನಿಯರು ಭಾಗವಹಿಸಿ ಸ್ಪರ್ಧೆಯಲ್ಲಿನ ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮಸ್ಥಾನ ವೈಯಕ್ತಿಕ ವಿಭಾಗ : ರಕ್ಷಾ ಕುದರಿ- ಛದ್ಮವೇಷ, ಸಾನಿಯಾ ಬಸನಕೊಪ್ಪ- ಧಾರ್ಮಿಕಪಠಣ( ಅರೇಬಿಕ್), ರಕ್ಷಿತಾ ಚಕ್ರಸಾಲಿ- ಲಘುಸಂಗೀತ, ಅನುಷಾ ನಾಯ್ಕ- ಹಿಂದಿ ಕಂಠಪಾಠ, ಐಶ್ವರ್ಯ ಮಹಾರಾಜಪೇಟ- ಮಣ್ಣಿನ ಮಾದರಿ.
ಪ್ರಥಮಸ್ಥಾನ ಸಾಮೂಹಿಕ ವಿಭಾಗ : ಶಿಲಾ ತಳವಾರ ಹಾಗೂ ಸಂಗಡಿಗರು- ದೇಶಭಕ್ತಿಗೀತೆ, ರೇವತಿ ಗುಂಡಣ್ಣವರ ಹಾಗೂ ಸಂಗಡಿಗರು- ಜಾನಪದ ನೃತ್ಯ.
ದ್ವಿತೀಯ ಸ್ಥಾನ : ಲಕ್ಷ್ಮವ್ವ ಲಮಾಣಿ- ಕನ್ನಡ ಕಂಠಪಾಠ, ರೇವತಿ ಗುಂಡಣ್ಣವರ -ಇಂಗ್ಲೀಷ ಕಂಠಪಾಠ,ಅಶ್ವಿನಿ ಬಾರ್ಕಿ- ದಾರ್ಮಿಕ ಪಠಣ, ಗಿರೀಜಾ ಮುಂಚಿನಕೊಪ್ಪ- ಕಥೆ.
ತೃತೀಯ ಸ್ಥಾನ : ಅಂಬಿಕಾ ಹಿತ್ತಲಮನಿ- ದೇಶಭಕ್ತಿಗೀತೆ, ಲಕ್ಷ್ಮೀ ಕೋಡಿಕೊಪ್ಪ- ಅಭಿನಯ ಗೀತೆ.
ದ್ವಿತೀಯ ಸ್ಥಾನ ಸಾಮೂಹಿಕ ವಿಭಾಗ : ಲತಾ ಅಂಗಡಿ ಹಾಗೂ ಸಂಗಡಿಗರು- ರಸಪ್ರಶ್ನೆ.
ವಿಜೇತರಾದ ಶಾಲೆಯ ಎಲ್ಲ ಮಕ್ಕಳಿಗೂ ಪ್ರಾಂಶುಪಾಲರಾದ ಸುಮಂಗಲಾ ದುರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ಆರ್.ಟಿ.ದುಂಡಪ್ಪನವರ, ಹಿರೂಲಾಲ, ಪ್ರಿಯಾಂಕ, ಗೀತಾ, ಕವಿತಾ, ಕೀರ್ತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ