ಹಗರಿಬೊಮ್ಮನಹಳ್ಳಿ:
ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಎದುರಿಗೆ ಕಾಂಗ್ರೆಸ್ ಎನ್ನುವದಕ್ಕಿಂತ, ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ಕಂಡ ದೇಶದ ನರೇಂದ್ರ ಮೋದಿಯವರಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಪಕ್ಷಕ್ಕೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಅಲ್ಲದೆ, ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿರುವ ದೇವೇಂದ್ರಪ್ಪನವರು ನಮ್ಮ ಜಿಲ್ಲೆಯ ಮನೆಮಗನಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಕರೆದಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪನವರ ಗೆಲುವಿಗಾಗಿ ಶ್ರಮಿಸುತ್ತೇವೆ. ಈ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಮತಗಳನ್ನು ತಂದುಕೊಡುವ ಮೂಲಕ ಅಭ್ಯರ್ಥಿ ದೇವೇಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದರು.
ಲೋಕಸಭಾ ಚುನಾವಣೆಗೆ ಬಳ್ಳಾರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಹಗರಿಬೊಮ್ಮನಹಳ್ಳಿಗೆ ಬಂದಿರುವ ಅಭ್ಯರ್ಥಿ ಅರಸಿಕೆರೆ ದೇವೇಂದ್ರಪ್ಪನವರು ಸುಕ್ಷೇತ್ರ ನಂದೀಪುರದ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿ, ಪಟ್ಟಣದ ಹಾಲಸ್ವಾಮಿ ಮಠ, ಕೊಟ್ಟೂರಿನ ಚಾನುಕೋಟಿ ಮಠ, ಮರಿಯಮ್ಮನಹಳ್ಳಿ ಮಠ, ಬೂದುಬುಜಂಗ್ ಮಠ, ಹನಸಿ ಮಠ ಸೇರಿದಂತೆ ಇನ್ನೂ ಅನೇಕ ಮಠಮಾನ್ಯಗಳಿಗೆ ಬೇಟಿ ನೀಡಿ ಅಲ್ಲಿಯ ಮಠಾಧೀಶ್ವರರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯಲಿದ್ದಾರೆ. ಅಭ್ಯರ್ಥಿ ದೇವೇಂದ್ರಪ್ಪನವರು ಸರಳ ಸಜ್ಜನಿಕೆಯ ನೇರ ನಡೆನುಡಿಯ ವ್ಯಕ್ತಿಯಾಗಿದ್ದು ಮೂಲತಃ ಇವರು ರೈತರಾಗಿದ್ದಾರೆ ಎಂದು ಹೇಳಿದರು.
ಮಾರ್ಚ್ 30, 31ರಂದು ಕ್ಷೇತ್ರಾಧ್ಯಂತ ಗ್ರಾಮಪಂಚಾಯಿತಿವಾರು ಮತ ಯಾಚನೆ ಮಾಡಲಿದ್ದಾರೆ.
ಬಿಜೆಪಿ ಅಭ್ಯರ್ಥಿ ಅರಸೀಕೆರೆ ದೇವೇಂದ್ರಪ್ಪ ಮಾತನಾಡಿ ದೇಶಕ್ಕೆ ಮತ್ತೊಮ್ಮೆ ನರೇಂದ್ರಮೋದಿಯವರ ಅವಶ್ಯಕತೆ ಇದೆ, ಪಕ್ಷದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವ ಇಚ್ಛೆಯಿಂದ ದುಡಿಯುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಎನ್ನಿಸುತ್ತದೆ. ನಾನು ಸಹ ನಿಮ್ಮ ಜಿಲ್ಲೆಯ ಹಾಗೂ ನಿಮ್ಮ ಮನೆ ಮಗನಾಗಿದ್ದೇನೆ ಎಂಬುದನ್ನು ದಯವಿಟ್ಟು ಮರೆಯಬೇಡಿ. ಸರ್ಕಾರದ ಯೋಜನೆಗಳನ್ನು ಮಾತ್ರ ಜಿಲ್ಲೆಯ ಕಟ್ಟಕಡೆಯ ಮತದಾರನ ಮನೆಬಾಗಿಲಿಗೂ ತಲುಪಿಸುವ ಕೆಲಸಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನರೇಗಲ್ ಕೊಟ್ರೇಶ್, ಕಾರ್ಯದರ್ಶಿ ಡಾ.ಅಜ್ಜಯ್ಯ, ನಗರ ಘಟಕದ ಅಧ್ಯಕ್ಷ ಸಂದೀಪ್ ಶಿವಮೊಗ್ಗ, ಎಸ್‍ಟಿ ಘಟಕದ ಟಿ.ಮಹೇಂದ್ರ, ಓಬಿಸಿ ತಾಲೂಕು ಅಧ್ಯಕ್ಷ ಕಲ್ಲಹಳ್ಳಿ ನಿಂಗಪ್ಪ, ತಾ.ಪಂ. ಮಾಜಿ ಸದಸ್ಯ ಬೆಣ್ಣಿಕಲ್ಲು ಪ್ರಕಾಶ, ಪುರಸಭೆ ಸದಸ್ಯರಾದ ಮೃತ್ಯುಂಜಯ ಬದಾಮಿ, ಎಚ್.ಎಂ.ಚೋಳರಾಜ, ಬಿ.ಗಂಗಾಧರ, ಹುಳ್ಳಿ ಮಂಜುನಾಥ, ಲಕ್ಷ್ಮಣ ಕಲಾಲ್, ಮುಖಂಡರಾದ ಕಿನ್ನಾಳ ಸುಭಾಷ್, ರಾಜಲಿಂಗಪ್ಪ, ನಿವೃತ್ತ ಎ.ಎಸ್.ಐ.ಜಾತಯ್ಯ, ಬಸವರಾಜ ಬಡಿಗೇರ್, ರಾಜು ಪಾಟೀಲ್, ಗಿರಿರಾಜ ರೆಡ್ಡಿ, ಫಕೃದ್ದೀನ್ ಸಾಬ್, ಚಂದ್ರಪ್ಪ, ಪರಶುರಾಮ, ಮಾಲವಿ ಬಸವರಾಜ, ಫೋಟೋ ನಾಗರಾಜ, ರಾಹುಲ್, ಪ್ರದೀಪ್, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








