ರಂಗಭೂಮಿ ಕಲಾವಿದರಿಗೆ ಸನ್ಮಾನ

ಸಿರುಗುಪ್ಪ:

       ನಗರದ ಯಲ್ಲಾಲಿಂಗಾ ನಗರದಲ್ಲಿನ ಹಿರಿಯ ರಂಗಭೂಮಿ ಕಲಾವಿದ ಜಿ.ವೀರನಗೌಡ ರವರ ನಿವಾಸದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಕಲಾವಿದೆ ಸುಜಾತಮ್ಮ ರಂಗಭೂಮಿಯಲ್ಲಿ ಅಪಾರ ಸಾಧನೆ ತೋರಿದ ಹಾರ್ಮೋನಿಯಂ ವಾದಕ ಮತ್ತು ರಂಗಭೂಮಿ ನಿರ್ದೇಶಕ ಜಿ.ವೀರನಗೌಡ ಹಾಗೂ ಬಯಲಾಟ ಪುಸ್ತಕ ರಚಯತ ಕಲಾವಿದ ಜಾನಪದ ತಜ್ಞ ಡಾ.ಚೇತನ್‍ಕುಮಾರ್ ರವರನ್ನು ಸನ್ಮಾನಿಸಿ ಮಾತನಾಡಿದ ಅವರು ಬಯಲಾಟ ಹಾಗೂ ನಾಟಕಗಳು ಇಂದಿಗೂ ಉಳಿದಿರುವುದಕ್ಕೆ ನಾಟಕ ಬಯಲಾಟ ನಿದೇರ್ಶಕರುಗಳ ಶ್ರಮವೆ ಕಾರಣವಾಗಿದ್ದು, ಗ್ರಾಮಗಳಿಗೆ ತೆರಳಿ ಬಯಲಾಟ ಪತ್ರಧಾರಿಗಳಿಗೆ ಸೂಕ್ತ ತರಬೇತಿಯನ್ನು ನೀಡಿ ಬಯಲಾಟ ಪ್ರದರ್ಶನ ನಡೆಸುವ ಮೂಲಕ ಬಯಲಾಟ ಕಲೆ ಉಳುವಿಗೆ ಕಾರಣಕರ್ತರಾಗಿದ್ದಾರೆ.

        ಬಯಲಾಟ ಪ್ರದರ್ಶನ ಕಂಡರೆ ಮಾತ್ರ ಸಂಗೀತಜ್ಞರು, ಮಹಿಳಾ ಪಾತ್ರಧಾರಿಗಳು, ಸಾರಥಿ ಸೇರಿದಂತೆ ತೆರೆಮರೆಯಲ್ಲಿ ರಂಗಭೂಮಿಗೆ ದುಡಿಯುವ ಕೈಗಳಿಗೆ ಕೆಲಸ ದೊರೆಯುತ್ತದೆ. ಗ್ರಾಮೀಣ ಭಾಗದಲ್ಲಿ ಉಳಿದಿರುವ ರಂಗಭೂಮಿಯನ್ನು ನಗರ ಪ್ರದೇಶಗಳಲ್ಲಿ ಜನಪ್ರಿಯಗೊಳಿಸುವ ಕಾರ್ಯಗಳು ನಡೆಯಬೇಕು ಎಂದು ತಿಳಿಸಿದರು.

        ನಂತರ ರಾಜ್ಯ ಪ್ರಶಸ್ತಿ ವಿಜೇತೆ ಕಳೆದ 62ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಲಾವಿದೆ ಬಯಲಾಟ ಸುಜಾತಮ್ಮರವರನ್ನು ಸನ್ಮಾನಿಸಲಾಯಿತು. ಹಾರ್ಮೋನಿಯಂ ಮಾಸ್ಟರ್‍ಗಳಾದ ಬೂದುಗುಪ್ಪ ಯರ್ರಿಸ್ವಾಮಿ, ಚಿಟಿಗಿನಹಾಳ್ ಸೋಮಶೇಖರ್ ಸೇರಿದಂತೆ ಇನ್ನಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link