ದ್ವಿತೀಯ ಪಿ.ಯು.ಸಿ ಫಲಿತಾಂಶ : ರಾಮಕುಮಾರ ಎಂಬ ವಿದ್ಯಾರ್ಥಿಗೆ ಶೇ.91.83

ಬಳ್ಳಾರಿ

          ನಗರದ ತಿಲಕ್‍ನಗರದಲ್ಲಿರುವ ದಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ಸಾಮಾನ್ಯ ವಿದ್ಯಾರ್ಥಿ ನಿಲಯದ ವಸತಿಯಲ್ಲಿ ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಗ್ರಾಮದ ರಾಮಕುಮಾರ.ಎ ಎಂಬ ವಿದ್ಯಾರ್ಥಿ ವ್ಯಾಸಾಂಗ ಮಾಡುತ್ತಿದ್ದು, 2018-19ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 551(ಶೇ.91.83) ಅಂಕಗಳನ್ನು ಪಡೆದು ಇಲಾಖೆಗೆ ಕೀರ್ತಿ ತಂದಿದ್ದಾನೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತಾರಣಾಧಿಕಾರಿ ವಿರಭದ್ರಯ್ಯ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಸತಿ ನಿಲಯದ ಸಿಬ್ಬಂದಿಗಳು ಹಾಗೂ ನಿಲಯಪಾಲಕರಾದ ಗಾದಿಲಿಂಗಪ್ಪ.ಎ ಅವರು ಶುಭಹಾರೈಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link