ನನ್ನ ದೇಶ  – ನನ್ನ ಕವಿತೆ ಕಾರ್ಯಕ್ರಮ

ಹಾವೇರಿ :
   
       ಇತ್ತೀಚೆಗೆ ಭಯೋತ್ಪಾದಕರಿಂದ  ಹತ್ಯೆಗೀಡಾದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ  ನನ್ನ ದೇಶ  – ನನ್ನ ಕವಿತೆ ಎಂಬ ಹೃದಯ ಸ್ಪರ್ಶಿ ಕವಿಗೋಷ್ಠಿ   ಇಲ್ಲಿಯ ಹೊಸಮಠದ ಆವರಣದಲ್ಲಿ ಜರುಗಿತು. ದೇಶಪ್ರೇಮವನ್ನು ಸಾರುವುದರ  ಜೊತೆಗೆ ಶ್ರದ್ಧಾಂಜಿಲಿ ಯನ್ನೂ ಸಲ್ಲಿಸುವ ಉದ್ದೇಶದ ಕವಿಗೋಷ್ಠಿಯ ಸಾನಿಧ್ಯವನ್ನು ಬಸವಶಾಂತಲಿಂಗ ಮಹಾಸ್ವಾಮಿಗಳು ವಹಿಸಿ  ದೇಶ ಶೋಕದಲ್ಲಿ ಮುಳುಗಿ ಸಿಟ್ಟು ಆಕ್ರೋಶಗಳು ಹೊರ ಹೊಮ್ಮುತ್ತಿರುವ ಈ ಕಾಲದಲ್ಲಿ, ಜನ ಸಮುದಾಯಕ್ಕೆ  ಸಂಯಮ ಮತ್ತು ಆತ್ಮ ಸ್ಥೈರ್ಯ ತುಂಬುವ ಶಬ್ದ ರೂಪದ ಕಾವ್ಯ ಬೇಕಾಗಿದೆ. ಈ  ಕೆಲಸವನ್ನು  ಕವಿಗಳು ಮತ್ತು ಸಮಾಜ ಚಿಂತಕರು ಮಾಡಬೇಕು.  ಕಾವ್ಯ ಹುಟ್ಟುವುದೇ ಶೋಕದಲ್ಲಿ  ಎಂದರು.  
            ಮುಖ್ಯ ಅತಿಥಿಯಾಗಿ ಹೆಚ್ಚುವರಿ ಪೊಲೀಸ ವರಿಷ್ಟಾಧಿಕಾರಿ ಜಗದೀಶ ಅವರು ಮಾತನಾಡಿ  ಸಾಕಷ್ಟು ಕಠೋರ  ಅವಘಡಗಳನ್ನು ನೋಡಿದ ನನ್ನಂಥವನಿಗೂ ಯೋಧರ ದುರಂತ ಮತ್ತು ಕುಟುಂಬದವರ ಆಕ್ರಂದನವನ್ನು ನೋಡಿ ಕಣ್ಣೀರು ಬಂದವು. ದೇಶಕ್ಕಾಗಿ ನಾವು ಒಂದಾಗಬೇಕಾದ ಕಾಲ ಈಗ ಬಂದಿದೆ ಎಂದರು. 
     
          ಹಿರಿಯ ಕವಿ ಸತೀಶ ಕುಲಕರ್ಣಿ ಮಾತನಾಡಿ ಗಡಿಯ ಹೊರಗೆ ಭಯೋತ್ಪಾದಕರು ಇರುವಂತೆ, ಗಡಿಯ ಒಳಗೂ ಇದ್ದಾರೆ. ಜವಾಬ್ದಾರಿಯುತ ನಾಗರಿಕರಾದ ನಾವು ಎಚ್ಚೆತ್ತುಕೊಂಡು ಈ ದೇಶ ನನ್ನದು ಎಂಬ ಭಾವನೆ ಹುಟ್ಟಿಸಬೇಕಾಗಿದೆ  ಎಂದರು.
ಪ್ರಾಸ್ತಾವಿಕ  ನಾಗರಾಜ ನಡುವಿನಮಠ ಕಾವ್ಯದ ಮೂಲಕ ಜನರಿಗೆ ದೇಶಪ್ರೇಮದ ಸಂದೇಶ ತಲುಪಿಸುವುದೇ ನನ್ನ ದೇಶ ನನ್ನ ಕವಿತೆ ಎಂಬ ಕವಿಗೋಷ್ಠಿಯ ಉದ್ದೇಶವೆಂದರು.
 
         ಮಾಜಿಸೈನಿಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಶಿಸುನಳ್ಳಿ, ಶ್ರೀಮತಿ ರೇಣುಕಾ ಗುಡಿಮನಿ ಮಾತನಾಡಿದರು. ಮಾಜಿ ಸೈನಿಕರಾದ ಖವಾಸ್, ಎಸ್. ವ್ಹಿ. ಕರಮಡಿ, ಎಸ್. ಸಿ. ಹುಣಸಿಕಟ್ಟಿ. ಎನ್. ಎಸ್. ಜಾದವ್, ಬಿ. ಎಸ್. ಕಂಕನವಾಡಿ, ಬಸವ ಸಮಿತಿಯ ಮುರಿಗೆಪ್ಪಕಡೇಕೊಪ್ಪ, ಶಿವಬಸಪ್ಪ ಮುದ್ದಿ, ಡಾ. ವ್ಹಿ. ಪಿ. ದ್ಯಾಮಣ್ಣನವರ, ಮಂಜಿನಾಥ ಅಂಗಡಿ, ಇಂದುಧರ ಯರೇಶೀಮಿ, ಎಸ್ ಆರ್ ಹಿರೇಮಠ, ಸಿ. ಆರ್. ಮಾಳಗಿ ಮುಂತಾವರು ಭಾಗವಹಿಸಿದ್ದರು. 
         ಕವಿಗಳಾದ ಸರ್ವಶ್ರೀ ಎಂ. ಬಿ. ನಾಗಲಾಪೂರ, ಜಿ ಎಂ ಓಂಕಾರಣ್ಣನವರ, ರವಿಚಂದ್ರ ಕೊಳ್ಳಿ, ವಸಂತ ಕಡತಿ, ಎಂ. ಕೆ. ಭಾಗ್ಯ, ಶ್ರೀಮತಿ ಪಿ. ಡಿ. ಕನವಳ್ಳಿ, ಅಕ್ಕಮಹಾದೇವಿ ಹಾನಗಲ್ಲ, ಸಂತೋಷ ಪಿಸೆ, ರಾಜು ಭಕ್ಷಿ, ಶಿವಯೋಗಿ ಬೆನ್ನೂರ, ಆರ್. ಸಿ. ನಂದೀಹಳ್ಳಿ ಹಾಗೂ ವಿಶ್ವನಾಥ ಬೊಂಗಾಡೆ ಕಾವ್ಯು ವಾಚನ ಮಾಡಿದರು. ಆರಂಭದಲ್ಲಿ ರುಸ್ತುಮ್ ನಂದೀಹಳ್ಳಿ ದೇಶಭಕ್ತಿ ಗೀತೆ ಹಾಡಿದರು. ಸಿ.ಎ. ಕೂಡಲಮಠ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಗೋಷ್ಠಿ ನಡೆಸಿದರು.  ಕೊನೆಯಲ್ಲಿ ಮೇಣಬತ್ತಿ ಬೆಳಗುವ ಮೂಲಕ ಮೌನ ಸಭೆ ನಡಯಿತು.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link