ನವ ವಿವಾಹಿತನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ಕಾರಣ ನಿಗೂಢ!

ಬೆಳಗಾವಿ :

ಕಳೆದ ಏಂಟು ತಿಂಗಳ ಹಿಂದಷ್ಟೇ ಆತ ಮದುವೆ ಆಗಿದ್ದ. ಕೆಲಸಕ್ಕೆ ತೆರಳಿ ಬೈಕ್​ನಲ್ಲಿ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕಿರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಕಾಗವಾಡ ತಾಲೂಕಿನ ಐನಾಪುರ-ಕಾತ್ರಾಳ ಕ್ರಾಸ್​ನ ರಸ್ತೆ ಪಕ್ಕದಲ್ಲಿ ನಡೆದಿದೆ.

ಕಾತ್ರಾಳ ಗ್ರಾಮದ ನಿವಾಸಿ ಚಿಂತಾಮಣಿ ಬಂಡಗರ (26) ಕೊಲೆಯಾದ ವ್ಯಕ್ತಿ. ಚಿಂತಾಮಣಿ‌ ಬಂಡಗರ ಕಳೆದ ಏಂಟು ತಿಂಗಳ ಹಿಂದಷ್ಟೇ ಮದುವೆ ಆಗಿದ್ದನು. ಎರಡು ತಿಂಗಳ ಹಿಂದೆ ಐನಾಪುರ ಗ್ರಾಮದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ. ನಿನ್ನೆ ತಡರಾತ್ರಿ ಮೆಡಿಕಲ್ ಶಾಪ್​ ಕೆಲಸ ಮುಗಿಸಿಕೊಂಡು ಐನಾಪೂರದಿಂದ ಕಾತ್ರಾಳ ಕಡೆ ವಾಪಸಾಗುತ್ತಿದ್ದರು.

ಕೆಲ ದುಷ್ಕರ್ಮಿಗಳು ಚಿಂತಾಮಣಿಯನ್ನು ಹಿಂಬಾಲಿಸಿದ್ದಾರೆ. ನಿರ್ಜನ ಪ್ರದೇಶ ಬರುತ್ತಿದ್ದಂತೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಚಿಂತಾಮಣಿ ಮೇಲೆ ದಾಳಿ ಮಾಡಿದ್ದಾರೆ. ಚೂಪಾದ ಆಯುಧದ ಪೆಟ್ಟು ಬಿದ್ದಿದ್ದರಿಂದ ಚಿಂತಾಮಣಿ ಬೈಕ್​ನಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಚಿಂತಾಮಣಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇನ್ನು ಈ ದಾರಿಯಲ್ಲಿ ಸಂಚರಿಸುವವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link