ಆಸೆಗಳ ಆಮಿಷವ ಅರ್ಥವಾಗಿಸಲು ಹೋಗಿ
ವ್ಯರ್ಥ ವಾಗಿದೆ ಬದುಕು
ಸ್ವಾರ್ಥ ಸಾಧನೆ ಬದುಕಲ್ಲಿ
ಮೂರ್ಖರಾಗುತಿಹೆವು ನಿತ್ಯ
ಸತ್ಯ ತಿಳಿದೂ ಅರಿಯದವರಂತೆ
ಸುತ್ತ ಮುತ್ತಲಿನ ಮಂದಿ
ದಿಟ್ಟಿಸಿ ನೋಡುವ ಮೊದಲೇ
ಕಟ್ಟಕಡೆಯ ಅವಕಾಶ ವೆಂದು
ಮಾಯವಾಗುವ ಜನರು
ಬಣ್ಣದಾ ಬದುಕಲ್ಲಿ
ಬೆನ್ನ ಬಾಗಿಸಿ ದುಡಿದು
ಬದುಕುವಾ ಬಂಗಾರದ ತತ್ವ
ಬೇಡವಾಗಿದೆ ಬಹುಜನಕೆ.
ಬೋಳಿಸಿ ಬಣ್ಣಹಾಕಿ
ಬಹುಬಗೆಯ ಅಮಿಷಕೆ
ಅರವಳಿಕೆ ಅರೆದು ಇಟ್ಟರು
ಮೂರ್ಖತನಕ್ಕೆ ಮುಹೂರ್ತ
ಮೂರ್ಖ ಪೆಟ್ಟಿಗೆಯ
ಮುಂಜಾವಿನ ಭವಿಷ್ಯ
ಸಂಬಂಧವೇ ಇಲ್ಲದ
ಬಣ್ಣದಾ ಜಾಹಿರಾತು
ಒಂದಕ್ಕೆ ಎರಡು ಮೂರು
ಐವತ್ತು ರಿಯಾಯಿತಿ
ನಂಬಿಕೆಯ ಮಾತೇ
ಕನಸುಗಳ ಕಣ್ಣಿಗೆ
ಮಣ್ಣೆರಚುವ ತಂತ್ರ
ಯಾರೇನೆಂದರೂನು
ಎಲ್ಲವನ್ನು ನಂಬುವ
ನಾವು ಮೂರ್ಖರು ತಾನೇ?
ವಿರೂಪಾಕ್ಷ. ಎಲ್, ತುರುವೇಕೆರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ