ಪಟ್ಟಣ ಪಂಚಾಯ್ತಿ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಗೆ ಶಾಸಕ ಭೀಮಾನಾಯ್ಕ ಭರವಸೆ

ಕೊಟ್ಟೂರು:


      ಪಟ್ಟಣಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೇಸ್ 20ಕ್ಕೆ ಇಪ್ಪತ್ತು ಸ್ಥಾನಗಳನ್ನು ಗೆಲ್ಲಲಿದೆ ಎಂದು ಶಾಸಕ ಎಸ್. ಭೀಮಾನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.

      ಪಟ್ಟಣದಲ್ಲಿ ಪ.ಪಂಗೆ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎಂ.ಎಂ.ಜೆ. ಹರ್ಷವರ್ದನ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದರು. ಹರ್ಷವರ್ಧನ ಮುಂದಾಳತ್ವದಲ್ಲಿ ಈಗಾಗಲೇ ನಾಲ್ಕು ಬಾರಿ ಅವರ ಬೆಂಬಲಿಗರು ಪಟ್ಟಣ ಪಂಚಾಯ್ತಿ ಆಡಳಿತದ ಚುಕ್ಕಾಣಿಯಿಡಿದಿದ್ದು, ಈಗ ಐದನೇ ಬಾರಿಯು ಪಟ್ಟಣ ಪಂಚಾಯ್ತಿ ಅವರ ಬೆಂಬಲಿಗರೇ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

      ಕೊಟ್ಟೂರು ಪಟ್ಟಣದ ಅಭಿವೃದ್ದಿಗೆ ನೀಲನಕ್ಷೆ ಸಿದ್ದವಾಗಿದ್ದು, ಪ್ರತಿವಾರ್ಡಗೆ ಒಂದು ಕೋಟಿ ರು.ಅನುದಾನ ತಂದು ವಾರ್ಡಗಳನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.

      ಪಟ್ಟಣದಲ್ಲಿ ಸರ್ಕಾರಿ ಕ್ರೀಡಾಂಗಣ ನಿರ್ಮಿಸಲು ಡಿಎಂಎಫ್ ಅನುದಾನದಿಂದ 4.60 ಕೋಟಿ ರು. ಬಿಡುಗಡೆಯಾಗಲಿದೆ ಆದಷ್ಟು ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

      ಕೊಟ್ಟೂರುನಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಡಿಎಂಎಫ್ ಅನುದಾನದಲ್ಲಿ 300 ಕೋಟಿ ರು. ಕಾಯ್ದರಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗವನ್ನು ನೋಡಲಾಗಿದೆ ಎಂದು ತಿಳಿಸಿದರು.

      ಡಿಎಂಎಫ್ ಅನುದಾನದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 10 ಸಾವಿರ ಫಲಾನುಭವಿಗಳನ್ನು ಆದಷ್ಟು ಶೀಘ್ರದಲ್ಲಿ ಆಯ್ಕೆ ಮಾಡಲಾಗುವುದು. ಒಬ್ಬ ಫಲಾನುಭವಿಗೆ 10 ಸಾವಿರ ರು.ಯಲ್ಲಿ ಕುರಿಗಳನ್ನು ನೀಡಲಾಗುವುದು ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link