ತಾತ್ಸರ ಭಾವನೆಯಿಂದ ಹೊರಬಂದು ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ:ಜೋಗದ ನೀಲಮ್ಮ

ಹೊಸಪೇಟೆ:

            ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಎದುರಾಗಿರುವ ಕುಡಿಯುವ ನೀರಿಗೆ ಸಮಸ್ಯೆಗೆ ಅಧಿಕಾರಿಗಳು ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ತಾತ್ಸರ ಭಾವನೆಯಿಂದ ಹೊರ ಬಂದು ಕೂಡಲೇ ಗ್ರಾಮಗಳಿಗೆ ಭೇಟಿ ಸಮರ್ಪಕ ಕುಡಿಯುವ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ತಾಕೀತು ಮಾಡಿದರು.

            ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕುಡಿಯುವ ನೀರಿನ ಸಮಸ್ಯೆಗೆ ಬೀದಿ-ಬೀದಿ ಅಲೆಯುಂತಾಗಿದೆ. ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುತ್ತಾರೆ. ಸಬೂಬು ಹೇಳುವುದು ಬಿಟ್ಟು ನೀರಿನ ಸಮಸ್ಯೆ ನಿವಾರಿಸಿ ಎಂದು ಕುಡಿವ ನೀರು ಮತ್ತು ನೈರ್ಮಲ್ಯ ಎಇಇ ಪಂಪಾಪತಿ ಅವರನ್ನು ತರಾಟೆಗೆ ತೆಗೆದುಕೊಂಡರು.

          ಧರ್ಮಸಾಗರ ಗ್ರಾಮದ ನಮ್ಮ (ಅಧ್ಯಕ್ಷರ) ನಿವಾಸಕ್ಕೆ ಸರಿಯಾಗಿ ನೀರು ಬರುತ್ತಿಲ್ಲ, ಇನ್ನು ಜನ ಸಾಮಾನ್ಯರ ಪಾಡೇನು ಎಂದ ಅವರು, ಗ್ರಾಮಸ್ಥರು ಮನೆ ಬಾಗಿಲಿಗೆ ಬಂದು ವ್ಯಂಗವಾಗಿ ಮಾತನಾಡುತ್ತಿದ್ದಾರೆ. ಶೀಘ್ರವೇ ಸಾರ್ವಜನಿಕರಿಗೆ ನೀರು ಕೊಡಿ ಎಂದು ಹರಿಹಾಯ್ದರು.

          ತಾಲೂಕಿನ ಎಲ್ಲ ಗ್ರಾಮಗಳಿಗೆ ಕೂಡಲೇ ಭೇಟಿ ನೀಡಿ ನೀರು ಪೂರೈಸುವ ಕೆಲಸ ಮಾಡುತ್ತೇನೆ ಎಂದು ಎಇಇ ಪಂಪಾಪತಿ ಹೇಳುತ್ತಿದಂತೆ ಇಒ ಟಿ.ವೆಂಕೋಬಪ್ಪ ಮಧ್ಯೆ ಪ್ರವೇಶಿಸಿ ಬರಿ ಬಾಯಿ ಮಾತಲ್ಲಿ ಹೇಳುವುದು ಬೇಡ ಮೊದಲು ನೀರು ಕೊಡುವ ಕೆಲಸ ಮಾಡಿ ಎಂದು ಜಾಡಿಸಿದರು.

          ಕೃಷಿ ಸಹಾಯಕ ನಿರ್ದೇಶಕ ವಾಮದೇವ ಮಾತನಾಡಿ, ರೈತರಿಗೆ ಬೇಕಾದ ಬೀಜೋಪಚಾರದ ಕೊರತೆ ಇಲ್ಲ. ಉದ್ದು, ಅಲಸಂದಿ, ಶೇಂಗಾ ಸೇರಿ ವಿವಿಧ ಬೀಜಗಳಯ ದಾಸ್ತಾನು ಇದೆ. ಮತ್ತು ಕೃಷಿ ಜಮೀನಿನಲ್ಲಿ ಆಕಸ್ಮಿಕ ಸೊಪ್ಪೆ ಬಣವಿಗೆ ಬೆಂಕಿ ಬಿದ್ದ ಪ್ರಕರಣಗಳಿಗೆ 10-20 ಸಾವಿರ ರೂಗಳ ಹೆಚ್ಚಳವಾಗಿದ್ದು, ಈ ಬಗ್ಗೆ ರೈತರ ಗಮನಕ್ಕೆ ತರಬೇಕಿದೆ ಎಂದರು.

          ಇಒ ವೆಂಕೋಬಪ್ಪ ಮಾತನಾಡಿ, ರೈತರಿಗೆ ಇಲಖೆ ಸೌಲಭ್ಯಗಳ ಬಗ್ಗೆ ತಿಳುವಕೆ ಕಡಿಮೆ ಇರುತ್ತದೆ. ಹಾಗಾಗಿ ಕೃಷಿ ಅಧಿಕಾರಿಗಳೆ ಮನೆ ಮನೆಗೆ ತೆರಳಿ ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.

          ತೋಟಗಾರಿಕ ಸಹಾಯಕ ಅಧಿಕಾರಿ ತಿರಲಾಪುರ ಮಾತನಾಡಿ, ತೋಟಗಾರಿಕ ಇಲಾಖೆಯಲ್ಲಿ ಯಾವುದಾರು ಯೋಜನೆಗಳಲ್ಲಿ ಬೇರೆ ಬೇರೆ ಸ್ಕೀಮ್‍ಗಳಿರುತ್ತವೆ. ಅಲ್ಲದೇ ವಿವಿಧ ಬೆಳೆಗಳಿಗೆ ಡ್ರಿಪ್ ಮಾಡಿಸಿಕೊಳ್ಳಲು ತಾಲೂಕಿನಾದ್ಯಂತ ಸುಮಾರು 250 ಅರ್ಜಿಗಳು ಬಂದಿವೆ ಎಂದರು.

          ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖ ಮಾತನಾಡಿ, ತೋಟಗಾರಿಕೆ ಇಲಖೆ ಅಡಿಯಲ್ಲಿ ರೈತರಿಗೆ ಅನುಕೂಲವಾಗುವಂತ ಸಾಕಷ್ಟು ಯೋಜನೆಗಳು ಇವೆ. ಆದರೆ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಸರಿಯಾದ ಸಂಪರ್ಕ ಹೊಂದರೆ ತಾತ್ಸಾರ ಮನೋಭಾವ ಬೆಳೆಸಿಕೊಂಡಿದ್ದೀರಿ. ಹೀಗಾಗಿ ಯೋಜನೆ ಫಲ ರೈತರಿಗೆ ಮುಟ್ಟುತ್ತಿಲ್ಲ ಎಂದು ತೋಟಗಾರಿಕೆ ಅಧಿಕಾರಿ ವಿರುದ್ಧ ಗರಂ ಆದರು.

          ಪಶು ಅಧಿಕಾರಿ ಡಾ.ಅಕ್ತರ್ ಸಭೆಯಲ್ಲಿ ಜಾನುವಾರು, ಮತ್ತು ಸೌಲಭ್ಯಗಳ ಬಗ್ಗೆ ಹೇಳುವುದನ್ನು ತಡಪಡಿಸುತ್ತಿರುವಾಗ, ನಡುವೆ ಪ್ರವೇಶಿಸಿದ ಇಒ ಟಿ.ವೆಂಕೋಬಪ್ಪ, ರೀ ಸಾಹೇಬ್ರೆ ಡಾ.ಬೆಣ್ಣೆಯವರು ಎಲ್ಲಿದ್ದಾರೆ, ಸಭೆಗೆ ಏಕೆ ಗೈರಾಗಿದ್ದಾರೆ. ಅವರಿಗೆ ಕಳೆದ ಸಭೆಯಲ್ಲಿ ಜಾನುವಾರುಗಳ ವಿಮೆ ಬಗ್ಗೆ ಮಾಹಿತಿ ಕೇಳಲಾಗಿತ್ತು. ಸಭೆಗಳಿಗೆ ಗೈರಾಗುವುದ ಅಧಿಕಾರಿಗಳಿಗೆ ಶೋಭೆ ಅಲ್ಲ ಎಂದು ಹಿಗ್ಗಾಮುಗ್ಗ ಪಶು ಇಲಾಖೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

             ಬಿಇಒ ಎಲ್.ಡಿ.ಜೋಷಿ ಮಾತನಾಡಿ, ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಗಳಿಗೆ 30 ಮಂದಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ತಾಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳ ಶಾಲೆಗಳ ಪೈಕಿ ಶೇ 90 ರಷ್ಟು ಶಾಲೆಗಳು ಶೇ 90 ರಷ್ಟು ಫಲಿತಾಂಶ ಬರುವಬಂತೆ ನೋಡಿಕೊಳ್ಳುವಂತೆ ಯೋಜನೆ ತಯಾರಿಸಲಾಗಿದೆ. ಮತ್ತು ನಗರದ ಮುನ್ಸಿಪಾಲ್ ಹಾಗೂ ಸರ್ದಾರ್ ಪಟೇಲ್ ಶಾಲೆಗಳಲ್ಲಿ ಫಲಿತಾಂಶ 50ಕ್ಕಿಂದ ಕಡಿಮೆ ಇದ್ದು, ವಿಶೇಷ ಅನುದಾನ ನೀಡಿ  ಮತ್ತು ಶೇ.90 ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಯ ಮಕ್ಕಳಿಗೆ ಮತ್ತು ಶಾಲೆಯ ಶಿಕ್ಷಕರಿಗೆ ಹಿಮಾಲಯ ಪ್ರವಾಸ ಕರೆದುಕೊಂಡು ಹೋಗುತ್ತಿವೆ. ಮತ್ತು ಸರ್ಕಾರದ ಅದೇಶದಂತೆ ಗುಣಮಟ್ಟ ಕೊರತೆಯಿಂದ ಇನ್ನೂ 150 ಸೈಕಲ್‍ಗಳನ್ನು ವಿತರಿಸಿಲ್ಲ ಎಂದರು.

          ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಶಾಸಕರ ಮತ್ತು ಗುತ್ತೆಗೆದಾರರ ಕೈಗೊಂಬೆಯಾಗಿದ್ದಾರೆ. ರಸ್ತೆಯ ಬದಿಯಲ್ಲಿನ ಜಂಗಲ್ ಕಟ್ ಮಾಡುವುದರ ಬಗ್ಗೆ ಸಾರ್ವಜನಿಕರು ಹೇಳಿದರೆ ಗಮನಕ್ಕಿಲ್ಲ. ಮತ್ತು ಜಿಪಂ, ತಾಪಂ ಸದಸ್ಯರ ಹೇಳಿದರಂತು ಕೇರ್ ಮಾಡುವುದಿಲ್ಲ. ಈ ಬೆಳವಣಿಗೆ ಸರಿ ಅಲ್ಲ. ಮತ್ತು ಕಂಪ್ಲಿಯಿಂದ ಬಳ್ಳಾರಿಗೆ ತೆಳುವ ರಸ್ತೆಯ ಬದುವಿನಲ್ಲಿ ಮುಳ್ಳುಕಂಟಿ ಜಾಸ್ತಿ ಇದೆ. ಚಿರತೆಗಳ ಕಾಟ ಹೆಚ್ಚಾಗಿದೆ, ಒಬ್ಬೊಬ್ಬರೆ ರಸ್ತೆಯಲ್ಲಿ ಓಡಾಡದಂತ ಪರಿಸ್ಥಿತಿ ಇದೆ. ಈಗಿದ್ದರೂ ಪಿಡಬ್ಲೂಡಿ ಅಧಿಕಾರಿಗಳು ಸಭೆಗೆ ಗೈರಾಗುವ ಮೂಲಕ ಗರ್ವ ತೋರಿಸುತ್ತಿದ್ದಾರೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ. ಕೆ.ಷಣ್ಮುಖ ಆಕ್ರೋಶ ವ್ಯಕ್ತಪಡಿಸಿದರು.

          ತಾಪಂ ಉಪಾಧ್ಯಕ್ಷ ಬಿ.ಎಸ್.ಶಿವಮೂರ್ತಿ, ಸದಸ್ಯರಾದ ಬಿಎಸ್.ರಾಜಪ್ಪ, ಮಜ್ಗಿ ಶಿವಪ್ಪ, ಸಿಡಿಪಿಒ ಸುದೀಪ್, ಬಿಆರ್‍ಪಿ ಗುರುಬಸವರಾಜ್, ದೇವದಾಸ್, ಎಂ.ಪಿ.ದೊಡ್ಮನಿ, ಡಾ.ಸತೀಶ್, ಮುನಿಸ್ವಾಮಿ, ದೇವರಾಜ್, ಯರ್ರಿಸ್ವಾಮಿ ಇತರರಿದ್ದರು.

 

Recent Articles

spot_img

Related Stories

Share via
Copy link
Powered by Social Snap