ಪ್ರಧಾನಿ ಮೋದಿ ಭದ್ರತಾ ಲೋಪ; ಸೋಮವಾರ ‘ಸುಪ್ರೀಂ’ ಆದೇಶ

ನವದೆಹಲಿ:

ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ನಲ್ಲಿ ಮಹತ್ವದ ವಿಚಾರಣೆ ನಡೆಯಿತು.

ವಿಚಾರಣೆ ನಡೆಸಿದ ಕೋರ್ಟ್​ ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಆದೇಶ ನೀಡುವುದಾಗಿ ತಿಳಿಸಿ ತೀರ್ಪನ್ನ ಕಾಯ್ದಿರಿಸಿದೆ.

ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಹೈಕೋರ್ಟ್ ​ರಿಜಿಸ್ಟರ್ ಜನರಲ್ ನೇಮಿಸಿ ಆದೇಶ ಹೊರಡಿಸಿದೆ.

ಸದ್ಯಕ್ಕೆ ಯಾವುದೇ ಕ್ರಮ ಬೇಡ

​ರಿಜಿಸ್ಟರ್ ಜನರಲ್​ ಆಫ್​ ಪಂಜಾಬ್​ & ಹರಿಯಾಣ ಹೈಕೋರ್ಟ್​ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರಿಗೆ ಮಾಹಿತಿ ನೀಡಲು ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಿದೆ.

ಚಂಡೀಗಢ ಪೊಲೀಸ್ ಡಿಜಿ, ಎನ್​​ಐಎ ಅಧಿಕಾರಿಗಳ ನೇಮಕ ಮಾಡಿದೆ. ಮಾತ್ರವಲ್ಲ ಸದ್ಯಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪಂಜಾಬ್ ಸರ್ಕಾರ, ಕೇಂದ್ರ ಇಲಾಖೆಗಳಿಗೆ ಸುಪ್ರೀಂ ಸೂಚನೆ ನೀಡಿದೆ. ಸೋಮವಾರ ಸಂಪೂರ್ಣ ಮಾಹಿತಿ ಆಧರಿಸಿ ಮುಂದಿನ ಆದೇಶ ನೀಡೋದಾಗಿ ಕೋರ್ಟ್​ ಹೇಳಿದೆ.

 ಟ್ರಾವೆಲ್ ಮಾಹಿತಿ ದಾಖಲಿಸಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಟ್ರಾವೆಲ್​​ನ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಸುರಕ್ಷಿತವಾಗಿಡಿ.

ಅದಕ್ಕೆ ಬೇಕಾಗುವ ಸಹಕಾರ ಹಾಗೂ ಹೆಚ್ಚಿನ ಮಾಹಿತಿಗಳನ್ನ ಪಂಜಾಬ್ ಪೊಲೀಸರು ಮತ್ತು ಎಸ್​ಪಿಜಿ ಘಟಕಗಳಿಂದ ಪಡೆದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ ರಿಜಿಸ್ಟ್ರಾರ್ ಜನರಲ್​ಗೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link