ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲುಗಳು…!

ಬೆಂಗಳೂರು

       ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ರೈಲುಗಳು ಏಕಮಾರ್ಗದ ವಿಶೇಷ ರೈಲುಗಳಾಗಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

     ಜನರು ಈ ರೈಲು ಸಂಚಾರದ ಉಪಯೋಗ ಪಡೆದುಕೊಳ್ಳಬಹುದು. ಅನೀಶ್ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ, ಹುಬ್ಬಳ್ಳಿ ವಿಶೇಷ ರೈಲುಗಳ ಸಂಚಾರದ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಮೇಲಿನ ವಿಶೇಷ ರೈಲುಗಳ ಎಸಿ ಬೋಗಿಗಳಲ್ಲಿ ಬೆಡ್ ಶೀಟ್ ಮತ್ತು ಹೊದಿಕೆಗಳನ್ನು ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

     ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ? ರೈಲುಗಳ ವೇಳಾಪಟ್ಟಿ; ಹುಬ್ಬಳ್ಳಿ-ಉತ್ತರ ಪ್ರದೇಶದ ಕಾನ್ಪುರ ನಡುವೆ ವಿಶೇಷ ರೈಲು (06557) ಸಂಚಾರ ನಡೆಸಲಿದೆ. ಮೇ 27ರಂದು ರಾತ್ರಿ 11.50ಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಈ ರೈಲು ಹೊರಟು, ಮೇ 29ರ ಬೆಳಗ್ಗೆ 11.10 ಗಂಟೆಗೆ ಕಾನ್ವುರ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.

    ಕೇರಳ-ಕರ್ನಾಟಕ ನಡುವೆ ರೈಲು; ಅಂತಿಮ ಸಮೀಕ್ಷೆಗೆ 5.90 ಕೋಟಿ ಬಿಡುಗಡೆ ಈ ರೈಲು ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಸೊಲ್ಲಾಪುರ, ಕುರ್ಡುವಾಡಿ, ದೌಂಡ್, ಅಹ್ಮದ್‌ ನಗರ, ಕೋಪೆರಗಾಂವ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ರಾಣಿ ಕಮಲಾಪತಿ, ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಓಲೈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

    ಈ ವಿಶೇಷ ರೈಲು 2 ಎಸಿ ತ್ರಿ ಟೈಯರ್ ಬೋಗಿ, 11 ಸೆಕೆಂಡ್ ಕ್ಲಾಸ್ ಸ್ಲೀಪರ್‌ ಬೋಗಿಗಳು, 6 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು 2 ದಿವ್ಯಾಂಗ ಸ್ನೇಹಿ ಕಂಪಾರ್ಟ್‌ ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿವೆ. ಮೇ 27ರಂದು ಸಂಚಾರ ಆರಂಭ; ಯಶವಂತಪುರ-ವಡೋದರಾದ ವಿಶ್ವಾಮಿತ್ರಿ ನಡುವೆ ವಿಶೇಷ ರೈಲು (06565) ಮೇ 27ರಂದು ಬೆಳಗ್ಗೆ 8.15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಸಂಜೆ 4.30 ಗಂಟೆಗೆ ವಡೋದರಾ ನಗರದ ವಿಶ್ವಾಮಿತ್ರಿ ಜಂಕ್ಷನ್‌ಗೆ ತಲುಪಲಿದೆ.

    ಈ ರೈಲು ಮಾರ್ಗದಲ್ಲಿ ತುಮಕೂರು, ಅರಸೀಕೆರೆ, ಚಿಕ್ಕಜಾಜೂ‌ರು, ದಾವಣಗೆರೆ, ಕೊಟ್ಟೂರು, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಪುಣೆ, ವಸಾಯಿ ರೋಡ್, ವಾಪಿ ಮತ್ತು ಸೂರತ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಈ ವಿಶೇಷ ರೈಲು 1 ತ್ರಿ ಟೈಯರ್‌ ಬೋಗಿ, 18 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು 2 ದಿವ್ಯಾಂಗಸ್ನೇಹಿ ಕಂಪಾರ್ಟ್‌ ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್‌ ವ್ಯಾನ್‌ ಹೊಂದಿರಲಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap