ಫಲಾನುಭವಿಗಳ ಮನೆಗಳ ರದ್ದು ಮಾಡದಂತೆ ಮನವಿ

ಶಿಗ್ಗಾವಿ :

  2015-16 ಮತ್ತು 2016-17 ನೇ ಬಸವ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಆಶ್ರಯ ಫಲಾನುಭವಿಗಳ ಮನೆಗಳನ್ನು ರದ್ದು ಮಾಡದೇ ಮುಂದುವರೆಸುವಂತೆ ಅಗ್ರಹಿಸಿ ತಾಲೂಕಾ ಗ್ರಾಮ ಪಂಚಾಯತನ ಕೆಲ ಸದಸ್ಯರು ಹಾಗೂ ಮುಖಂಡರು ತಾಲೂಕಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎನ್ ಕಾಂಬ್ಳೆ ಅವರಿಗೆ ಶುಕ್ರವಾರ ಮನವಿ ಅರ್ಪಿಸಿದರು.
ಮನವಿ ಅರ್ಪಿಸಿ ಮಾತನಾಡಿದ ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ, ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಿಗೆ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆಗಳು ಮಂಜೂರಾಗಿದ್ದು ಮಂಜೂರಾದ ಮನೆಯಲ್ಲಿ ಸುಮಾರು 250 ಕ್ಕೂ ಹೆಚ್ಚು ಮನೆಗಳನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಿದ್ದಾರೆ ಇದಕ್ಕೆ ಕಾರಣವೇನೆಂಬುದು ಆ ಬಡ ಕುಟುಂಬಗಳಿಗೆ ತಿಳಿಯದಾಗಿದೆ, ಆರ್.ಜಿ.ಎಚ್.ಸಿ.ಎಲ್ ನಿಂದ ಕೊಟ್ಟಂತಹ ಮನೆಗಳನ್ನು ನಿಗಧಿತ ಅವಧಿಯೋಳಗೆ ಕಟ್ಟಿಕೊಳ್ಳಲು ಆಗಿಲ್ಲ ಕಾರಣ ಸತತವಾಗಿ ಮೂರು ವರ್ಷಗಳಿಂದ ಉಂಟಾದ ಬರಗಾಲದಿಂದ ಹಣಕಾಸಿನ ತೊಂದರೆಯಿಂದ ಆಗಿಲ್ಲ ಎಂದರು.

   ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹಿತ ಕೆಲವು ಫಲಾನುಭವಿಗಳು ಪ್ಲಿಂತ್ ಹಾಗೂ ಲಿಂಟಲ್ ಲೇವಲ್ಲಿನ ವರೆಗೆ ಮನೆಗಳನ್ನು ಕಟ್ಟಿಸಿದ್ದಾರೆ ಅವರ ಮುಂದಿನ ಗತಿ ಏನು ? ಎಂದು ಕಪ್ಪು ಪಟ್ಟಿಯಲ್ಲಿರುವ ಫಲಾನುಭವಿಗಳು ಗ್ರಾಮ ಪಂಚಾಯತಿಯ ಸದಸ್ಯರನ್ನು ಪ್ರಶ್ನಿಸುವಂತಾಗಿದೆ, ಬೇರೆ ಯೋಜನೆಯಲ್ಲಿ ಮನೆಗಳನ್ನು ಕಟ್ಟಿ ಕೊಡಬೆಕೆಂದರೇ ಈ ಫಲಾನುಭವಿಗಳು ಈಗಾಗಲೇ ಮನೆಗಳನ್ನು ಪಡೆದಿದ್ದಾರೆ ಎಂದು ಪಿಡಿಓಗಳು ಹೇಳುತ್ತಿದ್ದಾರೆ ಇದರಿಂದ ಅರ್ದ ಮನೆ ಕಟ್ಟಿ ನಿಂತ ಫಲಾನುಭವಿಗಳಿಗೆ ತೀರ್ವ ತೊಂದರೆಯಾಗಿದ್ದು ಕೂಡಲೇ ನಿಗಮದ ನಿಯಮಗಳ ಪ್ರಕಾರ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಫಲಾನುಭವಿಗಳಿಗೆ ಅನ್ಯಾಯವಾದರೆ ತಾಲೂಕಾ ಪಂಚಾಯತ ಕಾರ್ಯಾಲಯಕ್ಕೆ ಬೀಗ ಹಾಕಿ ಫಲಾನುಭವಿಗಳೋಂದಿಗೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

  ಮೌನೇಶ ವಾಲ್ಮೀಕಿ, ನಾಗನಗೌಡ ಪಾಟೀಲ, ಬಸವರಾಜ ಪಾಟೀಲ, ನಿಂಗಪ್ಪ ಗೋದಾಯಿ, ವಿರುಪಾಕ್ಷಗೌಡ ಪಾಟೀಲ, ಮಲ್ಲೇಶಪ್ಪ ಬೂಧಿಹಾಳ, ಸಿಕಂದರಸಾಬ್ ನಧಾಫ್ ಸೇರಿದಂತೆ ಅನೇಕರು ಇದ್ದರು.

Recent Articles

spot_img

Related Stories

Share via
Copy link