ಕೊಟ್ಟೂರು :
ಬಂಜಾರ ಸಮುದಾಯದ ಸರ್ವತೋಮುಖದ ಅಭಿವೃದ್ದಿಗಾಗಿ ರಾಜ್ಯದ ಎಲ್ಲಾ ಬಂಜಾರ ಶಾಸಕರೊಂದಿಗೆ ಸೆಪ್ಟಂಬರ್ 6ರ ನಂತರ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ನಿಯೋಗ ಹೋಗುವುದಾಗಿ ಶಾಸಕ ಭೀಮಾನಾಯ್ಕ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪಟ್ಟಣ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೇಸ್ ಅಭ್ಯರ್ಥಿಗಳ ಪರ ಮನೆ ಮನೆಗೆ ತೆರಳಿ ಮತಯಾಚನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬಂಜಾರ ಅಭಿವೃದ್ದಿ ನಿಗಮಕ್ಕೆ ಸರ್ಕಾರ ಕನಿಷ್ಟ ಎರಡು ನೂರು ಕೋಟಿ ರು. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಬಂಜಾರ ಸಮುದಾಯದ ಎಲ್ಲಾ ಶಾಸಕರು ಮನವಿ ಮಾಡಲಾಗುವುದು ಎಂದರು.
ಬಂಜಾರ ಸಮುದಾಯದವರು ಗುಳೆ ಹೋದಾಗ, ಬಳ್ಳಾರಿ ಜಿಲ್ಲೆಯಲ್ಲಿಯೇ ನೂರಾರು ಮಕ್ಕಳು ಶಿಕ್ಷಣದಿಂದ ಪೋಷಕರ ವಾತ್ಸಲ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಪತ್ರಕರ್ತರು ಶಾಸಕ ಭೀಮಾನಾಯ್ಕ ಅವರನ್ನು ಪ್ರಶ್ನಿಸಿದಾಗ,
ಈ ಸಮಸ್ಯೆಯನ್ನು ತಪ್ಪಿಸಲು ಮತ್ತು ಗುಳೆ ಹೋಗುವುದನ್ನು ತಪ್ಪಿಸಲು ಕಸೂತಿ, ನೆರಗಾ ಯೋಜನೆ, ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಳ್ಳಲು ವಿಶೇಷ ಯೋಜನೆ ರೂಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಸೆಪ್ಟಂಬರ್ 6ರ ನಂತರ ಪಕ್ಷಬೇಧ ಮರೆತು ನಾನೇ ಸಮುದಾಯದ ಎಲ್ಲಾ ಶಾಸಕರಿಗೆ ಪೋನ್ ಮಾಡಿ ಸಭೆ ಕರೆದ ಬಂಜಾರ ಸಮುದಾಯದ ಸಮಸ್ಯೆಗಳನ್ನು ಕುರಿತು ಚರ್ಚೆ ಮಾಡಿ, ಮುಖ್ಯಮಂತ್ರಿ ಕಾಣಲು ದಿನಾಂಕ ನಿಗಧಿಗೊಳಸುವುದಾಗಿ ತಿಳಿಸಿದರು.
ಕಾಂಗ್ರೇಸ್ ಮುಖಂಡ ಹರ್ಷವರ್ಧನ, ಬಿ.ಎಸ್. ವೀರೇಶ, ಕರಡಿಕೊಟ್ರಯ್ಯ, ಮುಟುಗನಹಳ್ಳಿ ಕೊಟ್ರೇಶ, ಎಪಿಎಂಸಿ ಸದಸ್ಯ ಬೂದಿ ಶಿವಕುಮಾರ್, ಪಟ್ಟಣ ಪಂಚಾಯ್ತಿಗೆ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
