ಹಾಸನ:
ನನಗೆ ಕೊಟ್ಟಿದ್ದನ್ನು ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಶಾಸಕ ಹೆಚ್.ಡಿ.ರೇವಣ್ಣ ಗುಡುಗಿದ್ದಾರೆ .ಹಾಸನದ ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ, ಇನ್ನು ಮೂರು ವರ್ಷ ಸ್ವಲ್ಪ ತಡೆಯಿರಿ. ಬಳಿಕ ನನಗೆ ಕೊಟ್ಟಿದ್ದನ್ನು ನಾನು ಬಡ್ಡಿ ಸಮೇತ ತೀರಿಸುತ್ತೇನೆ.
ಹಾಸನದಲ್ಲಿ ಹೆಚ್.ಎಸ್.ಪ್ರಕಾಶನನ್ನು ನಾಲ್ಕು ಬಾರಿ ಗೆಲ್ಲಿಸಿದ್ದರು. 2013ರಲ್ಲಿ ಪ್ರಕಾಶ್ ಗೆ ಸೀಟ್ ಕೊಡಿಸಿಕೊಂಡು ಬಂದೆ. ಅಲ್ಪಸಂಖ್ಯಾತರಿಂದಾಗಿ ಪ್ರಕಾಶ್ ಸೋತರು. 2023ರ ಚುನಾವಣೆಯಲ್ಲಿ ಹಾಸನದಲ್ಲಿ 50 ಸಾವಿರ ವೋಟಿಗೆ ಒಂದು ವೋಟ್ ಕಡಿಮೆಯಾದರೂ ರಾಜೀನಾಮೆ ಕೊಡ್ತೀನಿ ಎಂದಿದ್ದರು. ಆ ಚುನವಣೆಯಲ್ಲಿ ಸ್ವರೂಪ್ ನಿಲ್ಲಲು ಯತ್ನಿಸಿದ್ದ. ಆ ಚುನಾವಣೆಯಲ್ಲಿ ನನ್ನ ಹೆಂಡತಿ ನಿಲ್ಲಿಸಲು ನಾನು ದಡ್ಡನಲ್ಲ. ನಾನೇ ಅವರನ್ನು ಬಿಟ್ಟಿದ್ದೆ. ರೇವಣ್ಣನೇ ನಿಲ್ಲಲಿ ಎಂದಾಗ ಸ್ವರೂಪ್ ಅವರನ್ನು ನಿಲ್ಲಿಸಿದೆ ಎಂದಿದ್ದಾರೆ.
ಹಾಸನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶ್ವಪುರದಲ್ಲಿ ಸೋಲಬೇಕಾಯ್ತು. ಪಾಪ ಪ್ರಜ್ವಲ್ ಗೂ ಗೊತ್ತಾಗಿಲ್ಲ. ಆತ ಒಳ್ಳೆ ಹುಡುಗ. ನಮ್ಮ ದುಡ್ಡು ತೆಗೆದುಕೊಂಡು ಬೇರೆ ಎಲ್ಲೋ ಹಾಕಿದರು. ಅವರೆಲ್ಲ ನನ್ನ ಕೈಗೆಸಿಗದೇ ಎಲ್ಲಿಗೆ ಹೋಗ್ತಾರೆ? ಇನ್ನು ಮೂರು ವರ್ಷ ಸುಮ್ಮನಿರಿ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಸವಾಲು ಹಾಕಿದರು.