ವೆಲ್ಲಿಂಗ್ ಟನ್
ನ್ಯೂಜಿಲ್ಯಾಂಡ್ ನ ದಕ್ಷಿಣ ದ್ವೀಪದ ಡುನೇಡಿನ್ ಉತ್ತರದಲ್ಲಿರುವ ಪೈನ್ ಮರಗಳಿಗೆ ಬೆಂಕಿ ತಗುಲಿದ್ದು, ಭಾರಿ ಕಾಡ್ಗಿಚ್ಚಾಗಿ ಪರಿಣಮಿಸಿದೆ.ಸ್ಥಳೀಯ ನಾಗರಿಕ ರಕ್ಷಣಾ ಇಲಾಖೆ ಈ ಸಂಬಂಧ ಮಾಹಿತಿ ನೀಡಿದ್ದು, ಸುಮಾರು 10 ಹೆಕ್ರ್ಟೇ ಅರಣ್ಯಕ್ಕೆ ಬೆಂಕಿ ತಗುಲಿದೆ ಎನ್ನಲಾಗಿದೆ. ಅರಣ್ಯದ ಸುತ್ತಮುತ್ತ ವಾಸಿಸುವ ಜನರಿಗೆ ಆ ಸ್ಥಳದಿಂದ ದೂರಕ್ಕೆ ವಲಸೆ ಹೋಗುವಂತೆ ಸೂಚಿಸಲಾಗಿದೆ.
ಕಾಡ್ಗಿಚ್ಚಿನಿಂದ ಉಂಟಾಗಿರುವ ಸಾವು ನೋವಿನ ಕುರಿತು ಇನ್ನೂ ವರದಿಯಾಗಿಲ್ಲ. ಎರಡು ಹೆಲಿಕಾಪ್ರ್ಟ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 2018ರ ಫೆಬ್ರವರಿಯಲ್ಲಿ ಇಲ್ಲಿನ ಡುನೆಡಿನ್ ಕೈಗಾರಿಕ ಉಪವಲಯದ 20 ಹೆಕ್ರ್ಟೇ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕನಿಷ್ಠ 100 ಮನೆಗಳನ್ನು ತೆರವುಗೊಳಿಸಲಾಗಿತ್ತು ಮತ್ತು ಮೂರು ಕೈಗಾರಿಕಾ ಕಟ್ಟಡಗಳು ನೆಲಸಮವೊಂಡಿದ್ದವು. ನ್ಯೂಜಿಲೆಂಡ್ ನಲ್ಲಿ ಅಕ್ಟೋರ್ಬ ತಿಂಗಳಿಂದ ಬಿಸಿ ಹವೆ ಜಾಸ್ತಿಯಾಗವುದರಿಂದ ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
