ಕೊಟ್ಟೂರು
ನನ್ನನ್ನು ಅಭೂತಪೂರ್ವವಾಗಿ ಲೋಕಸಭೆಗೆ ಆಯ್ಕೆ ಮಾಡಿದ ಬಳ್ಳಾರಿ ಜಿಲ್ಲೆಯ ಮತದಾರರ ಮಗನಾಗಿ, ಬಂಧುವಾಗಿ ನಿಮ್ಮ ಸೇವೆ ಮಾಡುತ್ತ ನನ್ನ ಉಳಿದ ಆಯುಷ್ಯವನ್ನು ಮುಡುಪಾಗಿಡುತ್ತೇನೆ ಎಂದು ಕಾಂಗ್ರೇಸ್ ಪಕ್ಷದ ನೂತನ ಲೋಕಸಭಾ ಸದಸ್ಯ ವಿ.ಎಸ್. ಉಗ್ರಪ್ಪ ಭಾವುಕರಾಗಿ ನುಡಿದರು.ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಭಾನುವಾರ ಮಾತನಾಡಿದರು.
ದೇಶವನ್ನು ಕಾಂಗ್ರೇಸ್ ಮುಕ್ತವಾಗಿಸುವ ಬದಲಾಗಿ ಈ ದೇಶವನ್ನು ಮೋದಿ, ಅಮಿತ್ ಷಾ ಮುಕ್ತ ದೇಶವನ್ನಾಗಿಸಲು ನೆರೆದಿದ್ದ ಜನತೆಗೆ ಕರೆ ನೀಡಿದರು.
ನಾನು ನನ್ನ ಜೀವನದಲ್ಲಿ ಜಾತಿ ರಾಜಕಾರಣ ಮಾಡಲ್ಲ, ಭ್ರಷ್ಟಾಚಾರವಂತೂ ಮಾಡುವುದೇ ಇಲ್ಲ. ಅಭಿವೃದ್ದಿಯೇ ನನ್ನ ಮೂಲ ಮಂತ್ರ ಇದರಲ್ಲಿ ತಪ್ಪಿದರೆ ನನ್ನ ಕೊರಳಪಟ್ಟಿ ಹಿಡಿದು ಕೇಳಿ ಎಂದು ಹೇಳಿದರು.
ನನ್ನನ್ನು ಪ್ರಧಾನಿ ಮಾಡಿ, ಈ ದೇಶದ ರೈತರನ್ನು ಸೈನಿಕರನ್ನು ಕೈಬಿಡುವುದಿಲ್ಲ ಎಂದು ಮೋದಿ ರೈತರ ಸಾಲ ಮನ್ನಾ ಯಾಕೆ ಮಾಡಲಿಲ್ಲ. ದಿನವೂ ಗಡಿಯಲ್ಲಿ ಸೈನಿಕರ ಹತ್ಯೆಯಾಗುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನು ತೆಗಳಿದರು.
ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಮಾತನಾಡಿದರು, ವೇದಿಕೆಯಲ್ಲಿ ಗುಜ್ಜಲ ರಘು, ಲೋಕೇಶ್ ವಿ. ನಾಯಕ, ಶ್ರೀಮತಿ ನಾಗಮಣಿ, ಗುಳಿಗಿ ವೀರೇಂದ್ರ, ಗುರುಸಿದ್ದನಗೌಡ,ಕುಂಬಳಗುಂಟಿ ಉಮೇಶ, ವೆಂಕಟೇಶ, ಸೋಮಪ್ಪ ನಾಯಕ, ಶಿವಯೋಗಿ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
