ಬಿಬಿಎಂಪಿಯಲ್ಲಿ ಜು18ರಂದು ಬೀದಿ ಬದಿ ವ್ಯಾಪಾರಿಗಳ “ಸ್ವ-ನಿಧಿ ಮಹೋತ್ಸವ” ಆಚರಣೆಗೆ ಸಿದ್ದತೆ

ಬೆಂಗಳೂರು : ಬೃಹತ್ ಮಹಾನಗರ ಪಾಲಿಕೆಯಲ್ಲಿ “ಸ್ವಾತಂತ್ರ್ಯ ಅಮೃತಮಹೋತ್ಸವ”ದ ಆಚರಣೆಯ ಸಲುವಾಗಿ ಡಾ|| ರಾಜ್ ಕುಮಾರ್ ಗಾಜಿನ ಮನೆ, ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಇದೇ ತಿಂಗಳ18- ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 07:00 ಗಂಟೆ ರವರೆಗೆ ಬೀದಿ ಬದಿ ವ್ಯಾಪಾರಿಗಳ “ಸ್ವ-ನಿಧಿ ಮಹೋತ್ಸವ” ಆಚರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಸಾಂಸ್ಕೃತಿಕ ಮತ್ತು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಅವುಗಳ ಮಾಹಿತಿ ಹೀಗಿದೆ.
  • ಬೀದಿ ಬದಿ ವ್ಯಾಪಾರಿಗಳ ಕುಟುಂಬದವರಿಂದ ಕಲೆ, ಜಾನಪದ, ನೃತ್ಯ, ಹಾಡು, ರಂಗೋಲಿ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
  • ಬೀದಿ ಬದಿ ವ್ಯಾಪಾರಿಗಳ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗುವುದು.
  • ಬೀದಿ ಬದಿ ವ್ಯಾಪಾರಿಗಳ ಸ್ವ-ನಿಧಿ ಯೋಜನೆಯನ್ನು ಸದುಪಯೋಗಮಾಡಿಕೊಂಡಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪುರಸ್ಕರಿಸಲಾಗುವುದು.
  • ಬೀದಿ ಬದಿ ವ್ಯಾಪಾರಿಗಳ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಕ್ರಿಯಾ ಶೀಲವಾಗಿ ಪಟ್ಟಣ ಮಾರಾಟ ಸಮಿತಿಯ ಸದಸ್ಯರನ್ನು ಗುರುತಿಸಿ ತೊಡಗಿಸಿಕೊಂಡಿರುವ ಪುರಸ್ಕರಿಸಲಾಗುವುದು.
  • ಬೀದಿ ಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಚಟುವಟಿಕೆಯನ್ನು ಉತ್ತಮವಾಗಿ ಆನ್ ಲೈನ್ “ಮೇ ಭಿ ಡಿಜಿಟಲ್ ಹೂ” ಅಡಿಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳನ್ನು ಗುರುತಿಸಿ ಗೌರವಿಸಲಾಗುವುದು.
  • ಬೀದಿ ಬದಿ ವ್ಯಾಪಾರಿಗಳ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಉತ್ತಮವಾಗಿ ಉಪಯೋಗಿಸಿಕೊಂಡು ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಂಡಿರುವ ವ್ಯಾಪಾರಿಗಳಿಂದ ತಮ್ಮ ಯಶೋಗಾಥೆಯನ್ನು ವಿವರಿಸಲು ಅವಕಾಶ ಕಲ್ಪಸಲಾಗುವುದು.
  • ಮಹೋತ್ಸವದಲ್ಲಿ ಪಿ.ಎಂ ಸ್ವ-ನಿಧಿ ಯೋಜನೆಯಡಿ ಸಾಲ ಮಂಜೂರಾಗಿ ಸಾಲ ಬಿಡುಗಡೆಯಾಗದಿರುವ ಬೀದಿ ವ್ಯಾಪಾರಿಗಳಿಗೆ ವಿವಿಧ ಬ್ಯಾಂಕ್ ಅಧಿಕಾರಿಗಳಿಂದ ಸಾಲದ ಹಣ ಬಿಡುಗಡೆ ಮಾಡಲು ಸಾಲ ಮೇಳದ ಆಯೋಜನೆ.
  • ಈ ಮಹೋತ್ಸವದಲ್ಲಿ ಬೀದಿ ವ್ಯಾಪಾರಿಗಳಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥ ಮಾರಾಟ ಮಾಡಲು ಮಳಿಗೆಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
  • ಬೀದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟಿನ ಬಗ್ಗೆ ತರಬೇತಿ ಹಾಗೂ ಆಹಾರ ಗುಣಮಟ್ಟದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು.
  • ಮೇಳದಲ್ಲಿ ಸುಮಾರು 3,000 ಬೀದಿ ಬದಿ ವ್ಯಾಪಾರಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸುವ ನಿರೀಕ್ಷೆಯಿದೆ.
  • ಬೀದಿ ವ್ಯಾಪಾರಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಡೆಸಿ “ಸ್ವ-ನಿಧಿ ಸಮೃದ್ಧಿ” ಯೋಜನೆಗೆ ಒಳಪಡಿಸಲಾಗುವುದು. ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

Recent Articles

spot_img

Related Stories

Share via
Copy link
Powered by Social Snap