ಬೆಂಗಳೂರಿನಲ್ಲಿ ಮಧ್ಯರಾತ್ರಿವರೆಗೂ ಹೋಟೆಲ್ ಓಪನ್ ಗೆ ಅನುಮತಿ

ಗುಡಿಬಂಡೆ ಭರತ್ ಜಿ.ಎಸ್

ಬೆಂಗಳೂರು : ಕಳೆದ ಎರಡು ವರ್ಷದಲ್ಲಿ ಹೋಟೆಲ್ ಉದ್ಯಮ ತೀವ್ರ ನಷ್ಟ ಅನುಭವಿಸಿತು, ಇನ್ನೇನು ಎಲ್ಲಾ ಸರಿಹೋಯಿತು ಅನ್ನುವಷ್ಟರಲ್ಲಿ ಮತ್ತೆ ನಾಲ್ಕನೇ ಅಲೆ ಅಬ್ಬರಿಸುಲು ಸಿದ್ದವಾಗಿದೆ. ಈ ನಡುವೆ 24 ಗಂಟೆ  ತೆರೆಯಲು ಸರಕಾರ ಆದೇಶ ನೀಡಿತ್ತು, ಈಗ ಪೊಲೀಸರು ಸಹ ಅನುಮತಿ ನೀಡಿದ್ದು ಹೋಟೆಲ್ ಉದ್ಯಮದವರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ 24 ಗಂಟೆ ಹೋಟೆಲ್, ಬೇಕರಿ, ಸ್ವೀಟ್​ ಸ್ಟಾಲ್​ಗಳು ಹಾಗೂ ಐಸ್​ ಕ್ರೀಮ್​ ಶಾಪ್​ಗಳು ತೆರೆದಿರುತ್ತವೆ.. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದ್ದು. ಇದೇ ಮೊದಲ ಬಾರಿಗೆ ಹೋಟೆಲ್​ಗಳು ರಾತ್ರಿ ಪೂರ್ತಿ ತೆರೆಯಲು ಅವಕಾಶ ನೀಡಲಾಗಿದೆ.

ಸಿಲಿಕಾನ್​ ಸಿಟಿ ಯಾವಾಗಲೂ ಜನ ಜನಜಂಗುಳಿಯಿಂದ ಕೂಡಿರುತ್ತೆ. ರಾತ್ರಿಯಲ್ಲಿ ಸಾವಿರಾರು ಜನರು ಕೆಲಸ ಮಾಡ್ತಿದ್ದಾರೆ. ನೈಟ್ ಶಿಪ್ಟ್ ನಲ್ಲಿ ಕೆಲಸ ಸಾವಿರಾರು ಜನರಿಗೆ ಊಟ, ತಿಂಡಿಗೆ ಅನುಕೂಲವಾಗಲಿದೆ.

24 ಗಂಟೆ ಹೋಟಲ್ ತೆರೆಯಲು ಸರ್ಕಾರ ಅನುಮತಿ : ದಿನದ 24 ಗಂಟೆ ಹೋಟೆಲ್​ ತೆರೆಯಲು ಅನುಮತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಆದೇಶವನ್ನು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಸ್ವಾಗತಿಸಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಎಲ್ಲಾ ಹೋಟೆಲ್​ಗಳು ಬೇಕರಿ, ಸ್ಟೀಟ್ ಸ್ಟಾಲ್​, ಐಸ್​ ಕ್ರೀಮ್​ ಪಾರ್ಲರ್​ ಹಾಗೂ ಇತರೆ ಅಂಗಡಿಗಳನ್ನು ತೆರೆಯಲು ಸರ್ಕಾರ ಪೊಲೀಸ್ ಇಲಾಖೆಯ ಗಮನಕ್ಕೂ ತಿಳಿಸಿದೆ.

ಅನುಮತಿ ಕೊಟ್ಟ ಪೊಲೀಸ್ ಇಲಾಖೆ  : ಹೋಟೆಲ್ ಸೇರಿದಂತೆ ಇತರೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹೋಟೆಲ್ ಉದ್ದಿಮೆ ಸಂಘದವರು ಪೊಲೀಸರ ಅನುಮತಿಗಾಗಿ ಮನವಿ ಪತ್ರವನ್ನು ನೀಡಿದ್ದರು. ಈಗ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ರವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜನರ ಅನುಕೂಲಕ್ಕಾಗಿ ರಾತ್ರಿ 1 ರವರೆಗೆ ಹೋಟೆಲ್ ತೆರೆದಿರಬಹುದು. ಹಾಗೂ ಹೋಟೆಲ್ ನಲ್ಲಿ 10 ಜನರಿಗಿಂತ ಹೆಚ್ಚು ಸಿಬ್ಬಂದಿಗಳು ಇದ್ದರೆ ಮಾತ್ರ ಹೋಟೆಲ್ ತೆರೆದಿರುತ್ತದೆ.

ಕೆಲಸಗಾರರಿಗೆ ಸಂತೋಷ : ರಾತ್ರಿಯಲ್ಲಿ ಕೆಲಸ ಮಾಡುವ ಅನೇಕ ಜನರಿಗೆ ಇದರಿಂದ ಅನುಕೂಲ, ಆಟೋ, ಕ್ಯಾಬ್ ಚಾಲಕರು, ಪ್ರಯಾಣಿಕರು ಸೇರಿದಂತೆ ಅನೇಕ ಜನರು ಕೆಲಸ ರಾತ್ರಿ 11 ರ ನಂತರ ಊಟ ಸಿಗುತ್ತಿರಲಿಲ್ಲ, ಆದರೆ ಈಗ ಭಯಪಡುವ ಅವಶ್ಯಕತೆ ಇಲ್ಲ, ಇನ್ಮುಂದೆ ರಾತ್ರಿಯಲ್ಲಿ ಊಟಕ್ಕಾಗಿ ಪರದಾಡುವ ಅವಶ್ಯಕತೆ ಇಲ್ಲ  ಇದರಿಂದ ಹೋಟೆಲ್ ಮಾಲಿಕರು ಹಾಗೂ ಸಾರ್ವಜನಿಕರು ಇಬ್ಬರಿಗೂ ಅನುಕೂಲ ಆಗಲಿದೆ.

Recent Articles

spot_img

Related Stories

Share via
Copy link
Powered by Social Snap