ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ : ಅಪರಾಧಿ ವಿರುದ್ಧ ಕಠಿಣ ಕಾನೂನು ಕ್ರಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಕಾಮಾಕ್ಷಿಪಾಳ್ಯದ ಯುವತಿ ಮೆಲೆ ನಡೆದ ಆಸಿಡ್ ದಾಳಿ ಮಾಸುವ ಮನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಾರಕ್ಕಿ ಸಿಗ್ನಲ್ ಬಳಿ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆದಿದ್ದು, ಕುಮಾರಸ್ವಾಮಿ ಲೇಔಟ್ ಠಾಣೆಯ ಪೋಲೀಸರು ಸ್ಥಳಕ್ಕೆ ಬೇಟಿ ಮಾಡಿ ಪರಶೀಲನೆ ನಡೆಸಿದ್ದಾರೆ.

ಪರಿಚಯಸ್ಥನಿಂದಲೇ ಈ ಕೃತ್ಯ ನಡೆದಿದೆ ಸದಸ್ಯ ಘಟನಾ ಸ್ಥಳಕ್ಕೆ ಎಸಿಪಿ ಶಿವಕುಮಾರ್, ಡಿಸಿಪಿ ಹರೀಶ್ ಪಾಂಡೆ ಭೆಟಿ ನಿಡಿ ಪರಿಶಿಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮದುವೆ ತಿಸ್ಕಾರವೇ ಕಾರಣ: ಆರೋಪಿ ಅಹ್ಮದ್ ಎಂಬಾತ ಆಸಿಡ್ ದಾಳಿ ನಡೆಸಿದ್ದಾನೆ. ಈತ ವಿವಾಹಿತ ಮಹಿಳೆಯನ್ನು ಪ್ರತೀಸುತ್ತಿದ್ದ, ಆಕೆಯನ್ನು ಮದೆವೆಯಾಗಲು ಹಿಂದೆಬಿದಿದ್ದ, ಈ ವೇಳೆ ಮದುವೆಯಾಗಲು ತಿರಸ್ಕರಿಸಿದ್ದ ಮಹಿಳೆ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ, ಆಸಿಡ್ ದಾಳಿಯಿಂದ ಮಹಿಳೆ ಬಲಗಣ್ಣು ಗಂಭೀರ ಗಾಯವಾಗಿದ್ದು, ಗಾಯಾಳು ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡೆಸಿದ್ದಾರೆ. ದಾಳಿಯಾದ ಮಹಿಳೆಗೆ ಮದುವೆಯಾಗಿ ಮಗು ಇದೆ. ಆದರೂ ಮದುವೆಯಾಗುವಂತೆ ಪೀಡುಸುತ್ತಿದ್ದ, ಆರೋಪಿ ಅಹ್ಮದ್ ಹಾಗೂ ನೊಂದ ಮಹಿಳೆ ಇಬ್ಬರೂ ಅಗರಬತ್ತಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಹುಳೆ ಕೆಎಸ್ ಲೇಔಟ್ ನಿಂದ ಜೆಪಿ ನಗರ ಕಡೆಗೆ ತೆರಳುತ್ತಿದ್ದಾ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಬೆಳಗ್ಗೆ ಆಸಿಡ್ ಖರೀದಿ ಮಡಿದ್ದ ಆರೋಪಿ : ಆರೋಪಿ ಅಹ್ಮದ್ ಬೆಳಗ್ಗೆ ಫ್ಯಾಕ್ಟರಿಗೆ ಹೋಗುವಾಗ ಅಂಗಡಿಯೊಂದರಲ್ಲಿ ಆಸಿಡ್ ಖರೀದಿಸಿದ್ದು, ಮನೆಯಲ್ಲಿ ಬಾತ್ ರೂಂ ತೊಳೆಯಲು ಆಸಿಡ್ ಬೇಕು ಎಂದು ಸುಳ್ಳು ಹೇಳಿ ಖರೀದಿಸಿದ್ದಾನೆ. ನಂತರ ಫ್ಯಾಕ್ಟರಿಗೆ ಬಂದು ಮಹಿಳೆಯ ಜೊತೆಗೆ ಮಾತಾಡಬೇಕು ಎಂದು ಹೊರಗೆ ಬಂದಿದ್ದಾರೆ, ಈ ವೇಳೆ ಕೊನೆಯದಾಗಿ ಹೇಳು ನನ್ನನ್ನು ಮದುವೆ ಆಗುತ್ತಿಯಾ ಇಲ್ವಾ ಎಂದು ಕೇಳಿದ್ದಾನೆ ಆದರೆ ಮದುವೆ ಮಹಿಳೆ ಒಪ್ಪದ ಕಾರಣ ಮಹಿಳೆ ಮುಖದ ಮೇಲೆ ಆಸಿಡ್ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡ್ : ಆರೋಪಿ ಅಹ್ಮದ್ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡನ್ನ ಹಿಡಿದು ತಂದಿದ್ದನು. ಜೆ.ಪಿ ನಗರ ಮೆಟ್ರೋ ಸ್ಟೇಷನ್ ಹತ್ತಿರ ಬರುತ್ತಿದ್ದಂತೆ, ಮಹಿಳೆಗೆ ಮದುವೆ ಆಗುವಂತೆ ಪೀಡಿಸಿದ್ದಾನೆ. ಆದರೆ ಮಹಿಳೆ ಒಪ್ಪದ ಕಾರಣ ಅಹಮ್ಮದ್ ಆಸಿಡ್ ದಾಳಿ ಮಾಡಿದ್ದಾನೆ. ಸದ್ಯ ಆರೋಪಿ ಅಹಮ್ಮದ್ ನನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಆಸಿಡ್ ದಾಳಿ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿ ರೂಪಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗುವುದು ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ದಾಳಿಯಾಗಿರುವುದು ಬಹಳ ದುರದೃಷ್ಟಕರ. ಈಗಿರುವ ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವ ಚಿಂತನೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 


ಈ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಆಸಿಡ್ ಹಾಕಿದವನ ಮೇಲೆ ಕ್ರಮ ಆಗುತ್ತದೆ. ಆಸಿಡ್ ಹಾಕೋದು ಅಮಾನವೀಯ ಕೃತ್ಯ. ಇದನ್ನ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದರು. ಆಸಿಡ್ ಬ್ಯಾನ್ ಆಗಿದೆ ಅನ್ನಿಸ್ತಿಲ್ಲ. ಅದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಅದರ ಕಾಯ್ದೆ ಏನಿದೆ ಎಂದು ಪರಿಶೀಲಿಸುತ್ತೆನೆ. ಬ್ಯಾನ್ ಮಾಡಬಹುದಾ ಅಂತ ನೊಡುತ್ತಿನಿ. ಆಸಿಡ್ ಬೇರೆ ಬೇರೆ ಕಾರ್ಯಕ್ಕೆ ಬಳಸ್ತಾರೆ, ಅದರಿಂದ ಎಲ್ಲಾ ಕಡೆ ಸಿಗುತ್ತದೆ. ಆಸಿಡ್ ದಾಳಿ ಅಪರಾಧಿ ವಿರುದ್ಧ ಕ್ರಮ ಜರುಗಿಸುತ್ತೆವೆ.

– ಅರಗ ಜ್ಞಾನೇಂದ್ರ, ಗೃಹ ಸಚಿವ

Recent Articles

spot_img

Related Stories

Share via
Copy link