ಹೊಸಪೇಟೆ :
ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರ ಕಳ್ಳರನ್ನು ನಗರದ ಬಡಾವಣೆ ಪೊಲೀಸರು ಬುಧವಾರ ಬಂಧಿಸಿ 15 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹನುಮಂತ ಮತ್ತು ಸಾಗರ್ ಬಂಧಿತರು. ಇನ್ನೊಬ್ಬ ಪರಾರಿಯಾಗಿದ್ದು, ಪತ್ತೆಗೆ ಜಾಲ ಬೀಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಎಸ್‍ಪಿ ಅರುಣ ರಂಗರಾಜನ್ ತಿಳಿಸಿದರು.
ಆರು ತಿಂಗಳಿಂದ ಆರೋಪಿಗಳು ಹೊಸಪೇಟೆ, ಕೂಡ್ಲಿಗಿ, ಹ.ಬೊ.ಹಳ್ಳಿ, ಮರಿಯಮ್ಮನಹಳ್ಳಿ, ಸಂಡೂರು ಹಾಗು ಚಿತ್ರದುರ್ಗ ಸೇರಿ ಇತರೆಡೆ 5.42 ಲಕ್ಷ ರೂ.ಮೌಲ್ಯದ 15 ಬೈಕುಗಳನ್ನು ಕದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ನಗರದ ನೆಹರೂ ಕಾಲನಿಯಲ್ಲಿ ಬಡಾವಣೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲಾ ಬೈಕುಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಬೈಕ್ ಕಳ್ಳತನ ಪ್ರಕರಣ ಭೇದಿಸಿದ ಬಡಾವಣೆ ಠಾಣೆ ಪಿಎಸ್‍ಐ ಮಹಮ್ಮದ್ ಗೌಸ್, ರಂಗಯ್ಯ, ಎಎಸ್‍ಐ ರಾಮಪ್ಪ, ಸಿಬ್ಬಂದಿ ಸಾಬಯ್ಯ, ಆನಂದರೆಡ್ಡಿ, ಜೆ.ಕೊಟ್ರೇಶ್, ಎನ್.ಪ್ರಕಾಶ, ಬಿ.ನಾಗರಾಜ, ಚಿದಾನಂದ, ಎಂ.ಸಂತೋಷಕುಮಾರ್ ಅವರಿಗೆ ಬಹುಮಾನ ನೀಡುವುದಾಗಿ ತಿಳಿಸಿದರು.
ಡಿವೈಎಸ್‍ಪಿ ಕೆ.ಶಿವಾರೆಡ್ಡಿ, ಸಿಪಿಐಗಳಾದ ಸಿದ್ದೇಶ್ವರ್, ನಿಂಗನಗೌಡ ನೆಗಳೂರು, ಪಿಎಸ್‍ಐಗಳಾದ ಎ.ವಿ.ಪಾಟೀಲ, ಮೃತ್ಯುಂಜಯ ಇದ್ದರು.