ಹಗರಿಬೊಮ್ಮನಹಳ್ಳಿ:
ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತೆ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಟ್ಟಣದ ಹಗರಿ ಆಂಜನೇಯ ಸ್ವಾಮಿ ದೇಗುಲದ ಆವಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತ್ಯುತ್ಸವದ ಪ್ರಯುಕ್ತ ಬಸವಣ್ಣನವರ ಭಾವಚಿತ್ರದ ಮೆರವಣಿಗೆಗೆ ಅವರು ಚಾಲನೆ ನೀಡಿದ ಬಳಿಕ ಮಾತನಾಡಿದರು. ಬಸವಣ್ಣನವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾತಿ ಜಂಜಾಟಗಳನ್ನು ತೊಡೆಯಲು ಪಣತೊಟ್ಟವರು. ಪ್ರತಿಯೊಬ್ಬರನ್ನು ಒಂದೇ ದೃಷ್ಠಿಯಿಂದ ನೋಡುತ್ತಿದ್ದರು. ತಮ್ಮ ಅನುಭವ ಮಂಟಪದಲ್ಲಿ ಎಲ್ಲಾ ಧರ್ಮಿಯ ಮುಖಂಡರಿಗೆ ಅವಕಾಶ ಕಲ್ಪಿಸಿಕೊಟ್ಟಂತಹ ಮಹಾನ್ ವ್ಯಕ್ತ ಬಸವಣ್ಣನವರು ಎಂದು ಬಣ್ಣಿಸಿದರು.
ನಂತರ ಅಶ್ವರೋಢ ಬಸವೇಶ್ವರರ ಕಂಚಿನ ಮೂರ್ತಿಗೆ ಹೂಮಾಲೆ ಅರ್ಪಿಸಿ ನಮಿಸಿದರು. ಬಸವೇಶ್ವರ ಬಜಾರದ ಮೂಲಕ ಅಲಂಕಾರ ಮಾಡಿದ ಹತ್ತಾರು ಜೋಡಿಗಳ ಎತ್ತುಗಳೊಂದಿಗೆ ಸಮಳ, ನಂದಿಕೋಲು ಹಾಗೂ ಮಹಿಳೆಯರು ಕಳಸಗಳನ್ನಿಡಿದು ಮೆರವಣಿಗೆ ಸಾಗಿತು. ಚಿತ್ರಮಂದಿರ ವೃತ್ತ, ಎ.ಪಿ.ಎಂ.ಸಿ.ಯಿಂದ ಪತ್ರಿಬಸವೇಶ್ವರ ದೇಗುಲದ ಆವರಣಕ್ಕೆ ಮೆರವಣಿಗೆ ತಲುಪಿತು.
ಈ ಸಂದರ್ಭದಲ್ಲಿ ಬೆಣ್ಣಿಹಳ್ಳಿಯ ಪಂಚಾಕ್ಷರಿ ಶಿವಚಾರ್ಯರ ಉಪಸ್ಥಿತಿಯಲ್ಲಿ ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಣ್ಣ, ಮಹಿಳಾ ಅಧ್ಯಕ್ಷೆ ಗೌರಮ್ಮ, ನ್ಯಾಯಬೆಲೆ ಅಂಗಡಿ ಕೊಟ್ರೇಶ್, ಪಂಚಣ್ಣ, ಬ್ಯಾಡ್ಗಿ ಬಸಣ್ಣ, ಹುಡೇದ್ ಗುರುಬಸವರಾಜ್, ನವೀನ್, ಬದಾಮಿ ಕರಿಬಸವರಾಜ್, ಉಮಾಪತಿ ಸ್ವಾಮಿ, ಶಿಕ್ಷಣ ಮೆಣಸಿಗಿ, ಕಾಯಿಗಡ್ಡಿ ಕೊಟ್ರೇಶ್, ವರ್ತಕ ಶಂಬಣ್ಣ, ಚಂದ್ರಯ್ಯ, ಮಹಾದೇವಪ್ಪ, ಟಿ.ಎ.ಪಿ.ಎಂ.ಎಸ್. ರೇವಣ್ಣ, ಹಮಾಲಿ ಬಸಣ್ಣ, ಪತ್ರಿಬಸವೇಶ್ವರ ದೇಗುಲದ ಅರ್ಚಕ ಕೊಟ್ರೇಯ್ಯ ಸ್ವಾಮಿ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
