ಭೂಗೊಳ ದಿನಾಚರಣೆಯಲ್ಲಿ 2018-19

ಹಾನಗಲ್ಲ :

       ಮನುಷ್ಯ ತನ್ನ ಐಶಾರಾಮಿ ಮನೋಬಯಕೆಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಪರಿಸರವನ್ನು ಹಾಳುಮಾಡಿ ಅಮೂಲ್ಯ ಸಂಪನ್ಮೂಲಗಳನ್ನು ವ್ಯವಹಾರಿಕವಾಗಿ ಬಳಸಿಕೊಳ್ಳುತ್ತಿರುವುದರಿಂದ ಭೂಮಿಯ ಶ್ರೀಮಂತಿಕೆ ನಶಿಸಿ ಬರಡಾಗುತ್ತಿದೆ ಎಂದು ಪ್ರಾಂಶುಪಾಲ ಪ್ರೊ. ಸಿ. ಮಂಜುನಾಥ ವಿಷಾದ ವ್ಯಕ್ತಪಡಿಸಿದರು.

       ಸ್ಥಳೀಯ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗವು ಆಯೋಜಿಸಿದ ಭೂಗೊಳ ದಿನಾಚರಣೆಯಲ್ಲಿ 2018-19 ನೇ ಸಾಲಿನ 6ನೇ ಸೆಮೆಸ್ಟರ್ ಭೂಗೋಳ ವಿದ್ಯಾರ್ಥಿಗಳು ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಮಾರ್ಗದರ್ಶನದಲ್ಲಿ ಮಂಡಿಸಿದ “ಮಳೆಯ ಪ್ರಮಾಣದಲ್ಲಿಯ ಬದಲಾವಣೆಯಿಂದ ಹಾವೇರಿ ಜಿಲ್ಲೆಯ ಕೃಷಿಯ ಮೇಲೆ ಆಗುವ ಪರಿಣಾಮಗಳು- ಒಂದು ಭೌಗೋಳಿಕ ಅಧ್ಯಯನ” ಕುರಿತಾದ ಕ್ಷೇತ್ರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಾ ಪರಿಸರ ಅಸಮತೋಲನಕ್ಕೆ ಮಾನವನ ವೈಜ್ಞಾನಿಕ-ತಂತ್ರಜ್ಞಾನದ ಚಟುವಟಿಕೆಗಳ ಅವೈಜ್ಞಾನಿಕ ಬಳಕೆಯೇ ಮುಖ್ಯಕಾರಣವಾಗಿದೆ ಎಂದರು.

     ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಂ.ಎಚ್. ಹೊಳಿಯಣ್ಣನವರ ಮಾತನಾಡಿ ನೀರು ಮತ್ತು ನೆರಳು ಭೂಮಿಯ ಸಮೃದ್ಧಿಯಾಗಿದ್ದು, ಭೂಗೋಳ ಅಧ್ಯಯನ ಜನರನ್ನು ಜಾಗೃತರನ್ನಾಗಿ ಮಾಡುವುದರ ಜೊತೆಗೆ ಜಗತ್ತಿನ ಭೌತಿಕ ಮತ್ತು ಸಾಂಸ್ಕತಿಕ ವಿಷಯಗಳನ್ನು ಮನನ ಮಾಡಿ ಭೂಮಿಯ ಜೊತೆಗೆ ಮನುಷ್ಯನ ವರ್ತನೆ ಹೇಗಿರಬೇಕೆಂಬ ವೈಜ್ಞಾನಿಕ ಮಾಹಿತಿ ನೀಡುತ್ತದೆ ಎಂದರು.

     ಕ್ಷೇತ್ರ ಅಧ್ಯಯನದ ಮಾರ್ಗದರ್ಶಕ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಹೊಳೇರ ಮಾತನಾಡಿ ಭೂಮಿಯ ಮೇಲಿನ ವಾಯುಗುಣದ ಬದಲಾವಣೆಯಲ್ಲಿ ಮಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ ಈ ಅಧ್ಯಯನದಲ್ಲಿ 1990 ರಿಂದ ಇಲ್ಲಿಯ ವರೆಗೆ ಸರಾಸರಿ 485 ಮಿ.ಮಿ. ಮಳೆಯಾಗಿದ್ದು, ಗÀರಿಷ್ಠ 952ಮಿ.ಮಿ. 1992 ರಲ್ಲಿ ದಾಖಲಾಗಿದ್ದರೆ, ಕನಿಷ್ಠ 300 ಮಿ.ಮಿ. ಮಳೆಯು 2001 ರಲ್ಲಿ ದಾಖಲಾಗಿದೆ.

     ಜಿಲ್ಲೆಯಲ್ಲಿ ಮಳೆಯ ವ್ಯತ್ಯಾಸದಿಂದ ಬೆಳೆ ಪದ್ಧತಿಗಳು ಬದಲಾವಣೆಯಾಗುತ್ತಿರುವುದು ಗಮನಾರ್ಹವಾಗಿದೆ. ಮಲೆನಾಡು-ಗಡಿನಾಡು-ಬಯಲು ಸೀಮೆಯ ವಿಶೇಷ ಭೌಗೋಳಿಕ ಸನ್ನಿವೇಶ ಹೊಂದಿದ ಹಾವೇರಿ ಜಿಲ್ಲೆಯು 4,85,156 ಹೆಕ್ಟೇರು ಭೌಗೋಳಿಕ ಪ್ರದೇಶ ಹೊಂದಿದ್ದು, ಇದರಲ್ಲಿ ಒಟ್ಟು ಬಿತ್ತನೆಯಾದ ಪ್ರದೇಶ 3,63,207 ಹೆಕ್ಟೇರು ಪ್ರದೇಶ.

     ಮಳೆಯ ಪ್ರಮಾಣದಲ್ಲಿಯ ವ್ಯತ್ಯಾಸದಿಂದ ಒಂದು ದಶಕದಲ್ಲಿ 55,672 ಹೆಕ್ಟೇರು ಭೂಮಿಯಲ್ಲಿ ಬೆಳೆಯುತ್ತಿದ್ದ ಭತ್ತವು ಈಗ 51,669 ಹೆಕ್ಟೇರು ಪ್ರದೇಶಕ್ಕೆ ಕಡಿಮೆಯಾಗಿದೆ. 67,584 ಹೆಕ್ಟೇರುಗಳ ಭೂಮಿಯಲ್ಲಿ ಬೆಳೆಯುತ್ತಿದ್ದ ಗೋವಿನ ಜೋಳದ ಬೆಳೆಯ ಪ್ರದೇಶವು 1,24,393 ಹೆಕ್ಟೇರುಗಳಷ್ಟು ಪ್ರದೇಶಕ್ಕೆ ವಿಸ್ತರಣೆಯಾಗಿದೆ.

     ವಾತಾವರಣದಲ್ಲಿಯ ಉಷ್ಣತೆ, ತೇವಾಂಶ, ಗಾಳಿಯ ಒತ್ತಡ ಹಾಗೂ ಮಳೆಯಂತ ಭೌಗೋಳಿಕ ಅಂಶಗಳಲ್ಲಿ ವ್ಯತ್ಯಾಸವಾಗಿ ಉಷ್ಣತೆ ಪ್ರಮಾಣ ಹೆಚ್ಚುವುದರ ಜೊತೆಗೆ ತೇವಾಂಶದ ಪ್ರಮಾಣ ಕಡಿಮೆಯಾಗಿ ಮಳೆಯೂ ಕಡಿಮೆ ಆಗುತ್ತಿರುವುದೇ ಇದಕ್ಕೆ ಕಾರಣ ಆದ್ದರಿಂದ ಇಂತಹ ಅಧ್ಯಯನಗಳು ಹೆಚ್ಚು ಉಪಯುಕ್ತವಾಗಿವೆ ಎಂದರು.

      ಭೂಗೋಳಶಾಸ್ತ್ರ ವಿಭಾಗದ ಮತ್ತೋರ್ವ ಉಪನ್ಯಾಸಕಿ ಭಾಗ್ಯಲಕ್ಷ್ಮಿ ಹುರಳಿಕುಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಭೀಮಾವತಿ ಸೋಮನಕಟ್ಟಿ, ಹೊನ್ನಪ್ಪ ಭೋವಿ, ಎಸ್.ಬಿ. ಕೂಡಲಮಠ, ಪ್ರೇಮಕಿಶನ್ ಬಳ್ಳಾರಿ, ಸಾಧಿಕ್ ಬಡಗಿ, ಪೂಜಾ ಅಥಣಿ, ದಿವ್ಯಾ ಕುಂದಗೋಳ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಿತ್ಕಲಾ ಪಾಟೀಲ ಮತ್ತು ನಾಡಿಗೇರ ಪ್ರಾರ್ಥಿಸಿದರು. ಕಾವ್ಯಾ ಬಾರ್ಕಿ ಹಾಗೂ ಗೌರಮ್ಮ ಬಿ.ಬಿ. ಸ್ವಾಗತಿಸಿದರು. ಆನಂದ ಗೊಲ್ಲರ ವಂದಿಸಿದರು. ಅಕ್ಷತಾ ಮಂತಗಿ ಹಾಗೂ ಅನಿತಾ ರುದ್ರಾಕ್ಷಿ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap